ಮಡಿಕೇರಿ, ಸೆ. ೨೬: ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ-ಮಡಿಕೇರಿ, ವತಿಯಿಂದ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ ಬ್ರಾಹ್ಮಣ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ೨೦೨೪-೨೫ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ (ಷರತ್ತುಗಳು ಅನ್ವಯ).
ಅರ್ಜಿಗಳನ್ನು ನಿಧಿಯ ನಿರ್ದೇಶಕರುಗಳಾದ ಬಿ.ಕೆ. ಜಗದೀಶ್ - ಮಡಿಕೇರಿ (೯೪೪೮೨೦೬೬೮೮), ಶಾಮ ಕೈಲಂಕಜೆ - ವೀರಾಜಪೇಟೆ (೯೪೮೨೦೨೧೧೧೨), ರಾಜಶೇಖರ್ - ಕುಶಾಲನಗರ(೯೪೪೮೦೭೪೨೨೬), ಪ್ರಭಾಕರ ನೆಲ್ಲಿತ್ತಾಯ - ಗೋಣಿಕೊಪ್ಪ(೮೭೬೨೪೭೮೯೮೨) ಅವರುಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ೧೦ನೆ ತರಗತಿ ಹಾಗೂ ಮೇಲ್ಪಟ್ಟ ತರಗತಿಗಳ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ. ಅರ್ಜಿ ಸಲ್ಲಿಸಲು ಅಕ್ಟೋಬರ್ ೨೦ ಕೊನೆಯ ದಿನವಾಗಿದೆ ಎಂದು ನಿಧಿಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.