*ಗೋಣಿಕೊಪ್ಪ, ಸೆ. ೨೬: ಚೆನ್ನಯ್ಯನಕೋಟೆ ಓಣಂ ಆಚರಣಾ ಸಮಿತಿ ವತಿಯಿಂದ ತಾ ೨೯ ರಂದು ಓಣಂ ಆಚರಣೆ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ಕೆ.ಎಂ. ರತೀಶ್ಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಹಗ್ಗಜಗ್ಗಾಟ ಸೇರಿದಂತೆ ಮಕ್ಕಳಿಗೆ ಗೋಣಿಚೀಲ ಓಟ, ಮಹಿಳೆಯರಿಗೆ ನಿಂಬೆ ಹಣ್ಣಿನೊಂದಿಗೆ ನಡಿಗೆ, ಮ್ಯೂಸಿಕಲ್ ಚೇರ್, ಚಾಕೊಲೇಟ್ ಹೆಕ್ಕುವುದು, ಓಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಯ್ಯಪ್ಪ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಕೇರಳ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಯಲಿದೆ. ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಶಾಸಕರಾದ ಎ. ಎಸ್. ಪೊನ್ನಣ್ಣ, ಸುಜಾ ಕುಶಾಲಪ್ಪ, ವಿಧಾನ ಸಭೆ ಮಾಜಿ ಅಧ್ಯಕ್ಷ ಕೆ. ಜಿ. ಬೋಪಯ್ಯ, ಎಸ್ಎನ್ಡಿಪಿ ಜಿಲ್ಲಾಧ್ಯಕ್ಷ ವಿ. ಕೆ. ಲೋಕೇಶ್, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ಕುಮಾರ್, ಗೋಣಿಕೊಪ್ಪ ಕೊಡಗು ಹಿಂದೂ ಮಲೆಯಾಳಿ ಸಮಾಜ ಅಧ್ಯಕ್ಷ ಎನ್. ಆರ್. ಅಮೃತ್ರಾಜನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಪ್ರ. ಕಾರ್ಯದರ್ಶಿ ಹರೀಶ್, ಖಜಾಂಚಿ ಎನ್. ಆರ್. ಬಾಬು, ಸದಸ್ಯ ವಿಜು, ಅನಿಲ್ಕುಮಾರ್ ಇದ್ದರು.