ಕೊಡಗು ಜಿಲ್ಲೆಯ ರೈತರ ಅನೇಕ ವರ್ಷಗಳ ಸಮಸ್ಯೆಗಳಿಗೆ ಯಾವುದೇ ಆಶಾದಾಯಕ ಪರಿಹಾರ ಕಂಡುಬರುತ್ತಿಲ್ಲ. ಈಗಾಗಲೇ ಅನೇಕ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದರೆ ಅನೇಕರು ಈಗಾಗಲೇ ತಮ್ಮ ಜಮೀನನ್ನು ಪರಭಾರೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಮ್ಮ ಜಿಲ್ಲೆಗೆ ಮಾತ್ರ ಸೀಮಿತವಾಗಿರುವ ವಿಚಿತ್ರ ಕಾನೂನು ತೊಡಕುಗಳಿಂದ ರೈತರು ತಮ್ಮ ಭೂದಾಖಲೆಗಳನ್ನು ಸರಿಪಡಿಸಲು ಸಾಧ್ಯವಿಲ್ಲದಂತಹ ದುಸ್ಥಿತಿಯಿದೆ. ಅಸಂಬದ್ಧ ಕಾನೂನುಗಳು-ಲಂಚಕೋರ ಇಲಾಖಾಧಿಕಾರಿಗಳು (ಕೆಲವೇ ಮಂದಿ ಪ್ರಾಮಾಣಿಕರನ್ನು ಹೊರತುಪಡಿಸಿ) ಹಾಗೂ ಸರಕಾರಿ ಕಚೇರಿಯ ನೌಕರ ವರ್ಗದವರ ವಿಳಂಬಯುತ ಕಾರ್ಯವೈಖರಿಗಳಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರ-ರೈತರ ಜೀವನ ಹೈರಾಣಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನೋಂದಣಿ ಕಚೇರಿಯಲ್ಲಿ ತೋಟ-ಜಮೀನುಗಳನ್ನು ಪರರಾಜ್ಯದ ಕಪ್ಪು ಹಣದ ಕುಳಗಳಿಗೆ ಮಾರಾಟ ಮಾಡುವ ಪ್ರಕರಣಗಳು ಸರ್ವೇಸಾಮಾನ್ಯವಾಗಿದೆ. ಇದು ಜಿಲ್ಲೆಯ ಜನತೆಯ ಪಾಲಿನ ದುರಂತವೇ ಸರಿ, ಸರಕಾರದ ದಿವ್ಯ ನಿರ್ಲಕ್ಷದಿಂದಾಗಿ - ರೈತರ ಶೋಷಣೆ - ಸಂಬAಧಿಸಿದ ಸರಕಾರಿ ಕಚೇರಿಗಳಲ್ಲಿ ರೈತರ ಕೆಲಸ ಕಾರ್ಯಗಳು ವಿಳಂಬವಾಗಿ ನಡೆಯುವುದು, ಕಡತಗಳನ್ನೇ ತೀವ್ರ ನಿರ್ಲಕ್ಷ ಮಾಡುವ ವ್ಯವಸ್ಥೆ, ಇಂತಹ ಧೋರಣೆ ಹೊರ ಜಿಲ್ಲೆ - ರಾಜ್ಯದ ಶ್ರೀಮಂತ ವರ್ಗದವರಿಗೆ ಒಲಿದ ಅದೃಷ್ಟವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಯಾವುದೇ ಪಕ್ಷಗಳ ಆಡಳಿತ ಬರಲಿ ಕೊಡಗು ಜಿಲ್ಲೆಗೆ ಸಮಸ್ಯೆಗಳ ಪರಿಹಾರ ದೊರಕುತ್ತಲೇ ಇಲ್ಲ. ಕಾಫಿ ಬೆಳೆಗಾರರು-ರೈತರು ಸರಕಾರದ ನಿರ್ಲಕ್ಷö್ಯಕ್ಕೆ ಬಲಿಯಾಗುವ ಮೊದಲ ಬಲಿಪಶುಗಳು.

ಉದಾಹರಣೆ ನೀಡುತ್ತೇನೆ, ನಾನು ವಾಸವಿರುವ ಚೇರಳ-ಶ್ರೀಮಂಗಲ ಗ್ರಾಮ, ಚೆಟ್ಟಳ್ಳಿ ಇದು ಈಗಿನ ಹೊಸ ಕುಶಾಲನಗರ ತಾಲೂಕಿಗೆ ಸೇರಿದ್ದಾಗಿದೆ. ಆದರೆ ಸರ್ವೆ ಇಲಾಖೆಗೆ ಸಂಬAಧಿಸಿದ ಕಾರ್ಯಗಳಿಗೆ ಈಗಲೂ ಇಲ್ಲಿನ ಕೃಷಿಕರು ಸೋಮವಾರಪೇಟೆಗೆ ಹೋಗಬೇಕು. ಉಳಿದ ಕಂದಾಯ ಇಲಾಖೆಗಳಿಗಾಗಿ ಕುಶಾಲನಗರಕ್ಕೆ ಹಾಗೂ ಹೋಬಳಿ ಮಟ್ಟದ ಕೆಲಸಗಳಿಗೆ ಸುಂಟಿಕೊಪ್ಪ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ನಮ್ಮ ಗ್ರಾಮಸ್ಥರದ್ದು, ರೈತರನ್ನು ಗೋಳುಹೊಯ್ಯಲು ಇದಕ್ಕಿಂತ ಬೇರೆ ನಿದರ್ಶನ ಬೇಕೇ?

ಕಂದಾಯ ಇಲಾಖೆಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ರೈತ ವರ್ಗ ಈ ಕಚೇರಿಗಳಲ್ಲಿ ಅಪರಾಧಿಗಳಂತೆ ಗಂಟೆಗಟ್ಟಲೆ ಕಾಯುತ್ತಾ ನಿಲ್ಲುವ ಸಂದರ್ಭಗಳು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ.

ರೈತರ ಗೋಳು ನಿರಂತರ ಎಂಬAತಾಗಿದೆ. ಕೇವಲ ಸಭೆ ಸಮಾರಂಭ ಮಾಡಿ ರೈತರ ಕಣ್ಣಿಗೆ ಮಣ್ಣೆರಚುವ ಕಾರ್ಯಕ್ರಮಗಳಿಂದ ಏನೇನೂ ಪ್ರಯೋಜನವಾಗುತ್ತಿಲ್ಲ ಎಂಬ ಸಂಗತಿಯನ್ನು ಈಗಲಾದರೂ ನಮ್ಮ ರಾಜಕೀಯ ಮುಖಂಡರು ಅರಿತುಕೊಂಡರೆ ಒಳ್ಳೆಯದು.

ಕೊಡಗಿಗೆ ಮಾತ್ರ...!

ರಾಜ್ಯದ ಯಾವ ಜಿಲ್ಲೆಗಳಲ್ಲೂ ಇಲ್ಲದ ಜಾಗ-ಹಿಡುವಳಿ ಸಮಸ್ಯೆಗಳು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ, ಯಾವುದೇ ರಾಜಕೀಯ ಪಕ್ಷಗಳು ಕೂಡ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುತ್ತಲೇ ಇಲ್ಲ. ಕೊಡಗು ಜಿಲ್ಲೆಯ ಭೂಮಾಲೀಕತ್ವದ ಸಮಸ್ಯೆ ಪರಿಹರಿಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಪೌತಿ ಖಾತೆ ವರ್ಗಾವಣೆಗಳೂ ಕಬ್ಬಿಣದ ಕಡಲೆಯಂತೆ ರೈತರ ಪಾಲಿಗೆ ಕಾಡುತ್ತಿದೆ, ಒಂದೇ ಕೆಲಸಕ್ಕಾಗಿ ಸರಕಾರಿ ಕಚೇರಿಗಳಿಗೆ ಹಲವಾರು ಬಾರಿ ಅಲೆದಾಟ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದು ನಮ್ಮ ರೈತ ಕುಟುಂಬದವರ ಬವಣೆ. ಕೆಲವೇ ತಿಂಗಳುಗಳ ಹಿಂದೆ ಮಡಿಕೇರಿ ಪ್ರಸಿದ್ಧ ವಕೀಲರೊಬ್ಬರು ಶಕ್ತಿ ದಿನಪತ್ರಿಕೆಯಲ್ಲಿ “ಕೊಡಗಿನಲ್ಲಿ ಜಮೀನು ಮತ್ತು ಬಂದೂಕುಗಳನ್ನು ಹೊಂದುವುದು ಶಾಪವೇ” ಎಂಬ ಶೀರ್ಷಿಕೆಯಡಿ ಒಂದು ಅರ್ಥಪೂರ್ಣ ಲೇಖನ ಬರೆದಿದ್ದರು. ಅವರಿಗೆ ರೈತರ ಕಷ್ಟ ಅರ್ಥವಾಗಿದ್ದರಿಂದ ಆ ಲೇಖನ ಬಹಳ ಸಮಯೋಜಿತ ಹಾಗೂ ಜನಸಾಮಾನ್ಯರ ಮನಸ್ಸಿಗೆ ನಾಟುವಂತಿತ್ತು.

ಹೌದು... ಕೊಡಗಿನ ಜನತೆ ಅನಾದಿಕಾಲದಿಂದ ತಮ್ಮ ಹಿರಿಯರ ಭೂಹಿಡುವಳಿಗಳನ್ನು ವಂಶಪಾರAಪರ್ಯವಾಗಿ ಅನುಭವಿಸಿಕೊಂಡು ಜೀವನ ಮಾರ್ಗೋಪಾಯಗಳನ್ನು ಕಂಡುಕೊAಡಿದ್ದಾರೆ. ಆದರೆ ಹಿರಿಯರ ಅವಿಭಕ್ತ ಕುಟುಂಬದ ಆಸಿಗಳ ವಿಭಜನೆ ಹಾಗೂ ಮಾಲೀಕತ್ವ ಪಡೆಯಲು ಹರಸಾಹಸಪಡುವಂತಾಗಿದೆ. ಇದಕ್ಕೆ ಹತ್ತಾರು ವಿಘ್ನಗಳು ವಿಭಜನೆಗೊಳ್ಳದ ಭೂಮಿಗಳಿಗೆ ಕೃಷಿ ಮಾಡಲು ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘಗಳಿAದ ಸಾಲ ಸಿಗುವುದಿಲ್ಲ. ಸರಕಾರದ ನಷ್ಟ ಪರಿಹಾರವಾಗಲೀ ಕಾಫಿ ಮಂಡಳಿ, ಕೃಷಿ ಇಲಾಖೆ, ಸಂಬಾರ ಮಂಡಳಿಗಳಿAದ ಯಾವುದೇ ಸಹಾಯ ಧನ, ಸಬ್ಸಿಡಿ, ಪರಿಹಾರದ ಹಣ ದೊರಕುವುದೇ ಇಲ್ಲ. ಹಾಗಾದರೆ ಈ ಭೂಹಿಡುವಳಿಯನ್ನು ಅಭಿವೃದ್ಧಿಪಡಿಸುವ ಮಾರ್ಗ ಯಾವುದು?

ಪರವಾನಗಿ ಪಡೆದ ಬಂದೂಕು, ಶಸ್ತಾçಸ್ತçಗಳ ಕಥೆ ಕೇಳುವುದೇ ಬೇಡ. ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಾದ ಚುನಾವಣೆ ಸಂದರ್ಭ ರೈತರು ತಮ್ಮ ಆತ್ಮರಕ್ಷಣೆಗಾಗಿ ಹಾಗೂ ಬೆಳೆರಕ್ಷಣೆಗಾಗಿ ಸರಕಾರದ ಕಾನೂನಿನಂತೆ ಅನೇಕ ದಾಖಲೆಗಳನ್ನು ಒದಗಿಸಿ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ದೃಢೀಕರಣ ಪತ್ರ, ಭೂದಾಖಲೆಗಳು ಎಲ್ಲವೂ ಆದ ನಂತರ ರೂ. ೨೫೦೦ ಸರಕಾರಕ್ಕೆ ಪಾವತಿಸಿ ಪಡೆದಿರುವ ಲೈಸನ್ಸ್ ಹೊಂದಿರುವ ಬೆಲೆಬಾಳುವ ಬಂದೂಕನ್ನು ತಮ್ಮ ರಕ್ಷಣೆಗಾಗಿ ಇಟ್ಟುಕೊಳ್ಳುವ ಬದಲಿಗೆ ಚುನಾವಣೆ ಸಮೀಪ ಬಂದಾಕ್ಷಣ ಎಲ್ಲಾ ಪರವಾನಗಿ ಪಡೆದ ಬಂದೂಕುಗಳು ಹತ್ತಿರದ ಪೊಲೀಸ್ ಠಾಣೆಗೆ ರವಾನಿಸಬೇಕು. ಚುನಾವಣೆ ಸಮಯ ೨-೩ ತಿಂಗಳಾದರೂ ಬಂದೂಕು ರೈತರ ಮನೆಯಲ್ಲಿ ಇರುವುದಿಲ್ಲ.

ಅದೂ ವರ್ಷದಲ್ಲಿ ಎರಡು ಚುನಾವಣೆ ಬಂದರAತೂ ಬಂದೂಕುಗಳು ಪೊಲೀಸ್ ಠಾಣೆಗಳಲ್ಲಿ ತುಕ್ಕು ಹಿಡಿಯುತ್ತಿರುವಂತಹ ಪರಿಸ್ಥಿತಿ, ಇದಕ್ಕೆಲ್ಲಾ ಪರಿಹಾರ ಎಂದು? ನ್ಯಾಯಾಲಯಗಳಲ್ಲಿ ಕೆಲವೇ ವ್ಯಕ್ತಿಗಳು ನ್ಯಾಯಕ್ಕಾಗಿ ಹೋರಾಡಿ ಬಂದೂಕುಗಳನ್ನು ಅವರವರ ವಾಸಸ್ಥಳಗಳಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಇದೆ. ಆದರೆ ಬಡ ರೈತ ಕುಟುಂಬದ ಕಷ್ಟ ಕೇಳುರ‍್ಯಾರು? ಎಲ್ಲದಕ್ಕೂ ನ್ಯಾಯಾಲಯಗಳ ಮೊರೆ ಹೋಗಬೇಕೆಂದಾದರೆ ಸರಕಾರದ ವ್ಯವಸ್ಥೆ ಯಾಕೆ ಬೇಕು? ರೈತರ ಸಮಸ್ಯೆಗಳಿಗೆ ಉತ್ತರ ಕೊಡುರ‍್ಯಾರು?

ಕಾನೂನು ರೈತರಿಗೆ ಮಾತ್ರ...!

ಅರಣ್ಯ ಇಲಾಖೆಯ ಬಗ್ಗೆ ಹೇಳಲೇಬೇಕು. ರೈತರು ತಮ್ಮ ಜಮೀನಿನಲ್ಲಿ ಬೆಳೆಸಿದ ಮರಗಳಲ್ಲಿ ಒಂದೆರಡು ಮರಗಳನ್ನು ಮನೆ-ಇತರ ಕಟ್ಟಡಗಳ ದುರಸ್ತಿಗೆ ಉಪಯೋಗಿಸಲು ಹತ್ತು ಹಲವಾರು ಷರತ್ತುಗಳು ಕಾಡುತ್ತದೆ, ನಿಯಮಪ್ರಕಾರ ಮರ ಕಡಿತಲೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದೇ ಸಮಯದಲ್ಲಿ ಮರಗಳ್ಳರು ರಾಜಾರೋಷವಾಗಿ ಕೊಡಗು ಜಿಲ್ಲೆಯ ಬೆಲೆಬಾಳುವ ಮರಗಳನ್ನು ಇಲಾಖಾಧಿಕಾರಿಗಳ ಕಣ್ಣು ತಪ್ಪಿಸಿ (?) ಬೇರೆಡೆಗೆ ಸಾಗಿಸುವಾಗ ಅವರಿಗೆ ಯಾವ ಷರತ್ತುಗಳೂ ಇರುವುದಿಲ್ಲ. ನಿರ್ಬಂಧಗಳು ನಮ್ಮ ಜಿಲ್ಲೆಯ ರೈತಾಪಿ ಹಾಗೂ ಕೃಷಿಕರಿಗೆ ಮಾತ್ರ ಅನ್ವಯ ಎಂಬAತಾಗಿದೆ. ಇತ್ತೀಚೆಗೆ ಭಾಗಮಂಡಲ ಹಾಗೂ ಇನ್ನಿತರ ಮೀಸಲು ಅರಣ್ಯಗಳಲ್ಲಿ ಲಕ್ಷಾನುಗಟ್ಟಲೆ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಿದ ವರದಿ ಬಂದಿತ್ತು. ಸರಕಾರಿ ಜಮೀನುಗಳಲ್ಲಿ ಮೀಸಲು ಅರಣ್ಯಗಳಲ್ಲಿ ಬೆಲೆಬಾಳುವ ಮರಗಳನ್ನು ರಕ್ಷಣೆ ಮಾಡಲಾಗದ ಅರಣ್ಯಾಧಿಕಾರಿಗಳು, ಅಸಹಾಯಕ ಸಿಬ್ಬಂದಿ ವರ್ಗ, ಎಂತಹ ನಾಟಕ ಇದು?

ಕಾಡಿನ ವ್ಯಾಪ್ತಿಯಲ್ಲಿ ನೂರಾರು ಮರಗಳನ್ನು ಕಡಿದು ಸಾಗಿಸುವವರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ? ರೈತರನ್ನು ಅವರವರು ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಡಿಯಲು ಹತ್ತಾರು ಷರತ್ತುಗಳನ್ನು ವಿಧಿಸಿ ಕಿರುಕುಳ ಕೊಡುವ ಈ ಅಧಿಕಾರಿಗಳು ಕೊಡಗಿನ ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡುವರೇ? ಕೇವಲ ಭಕ್ಷಣೆ ಮಾತ್ರ ಅಭ್ಯಾಸ ಮಾಡಿರುವ ಈ ಇಲಾಖೆಯಿಂದ ಅರಣ್ಯ ರಕ್ಷಣೆ ಕೇವಲ ಕನಸಿನ ಮಾತು. ಇನ್ನಾದರೂ ಬಡ ರೈತರಿಗೆ ತೊಂದರೆ ಕೊಡದೇ ಅವರವರ ಅಗತ್ಯಕ್ಕನುಗುಣವಾಗಿ ಅವರು ಬೆಳೆದ ಮರಗಳ ಉಪಯೋಗಕ್ಕೆ ಅನುಮತಿ ಕೊಡಲಿ. ಇಲ್ಲವಾದರೆ ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಜಾತಿಯ ಮರಗಳ ಪೋಷಣೆ ಮಾಡದೇ ಮುಂದೊAದು ದಿನ ನಮ್ಮ ಜಿಲ್ಲೆಯ ತೋಟಗಳಲ್ಲಿ ಬೀಟೆ, ನಂದಿ, ಮತ್ತಿ, ತೇಗ, ಬಳಂಜಿ ಮುಂತಾದ ಬೆಲೆಬಾಳುವ ಮರಗಳ ಚಿತ್ರ ಬಿಡಿಸಿ ಕೊಡಗು ಜಿಲ್ಲೆಯಲ್ಲಿ ಮೊದಲು ಒಂದು ಕಾಲದಲ್ಲಿ ಇದ್ದ ಮರಗಳೆಂದು ತೋರಿಸಬೇಕಾಗಬಹುದು.

ಗಸ್ತು ತಿರುಗುವ ಅರಣ್ಯ ಸಿಬ್ಬಂದಿಯಿAದ ಬಹಳ ದೊಡ್ಡ ಗಾತ್ರದ ಮರಗಳ ಹನನ ತಡೆಯಲು ಸಾಧ್ಯವಿಲ್ಲವೆಂದಾದರೆ ಅರಣ್ಯ ಇಲಾಖೆಯನ್ನು ಬಂದ್ ಮಾಡಿ ರೈತರಿಗೆ ಆ ಜವಾಬ್ದಾರಿ ಕೊಟ್ಟು ನೋಡಲಿ. ಕೊಡಗಿನ ಮರಕಾಡುಗಳ ರಕ್ಷಣೆ ಅನಾದಿಕಾಲದಿಂದ ವಾಸವಿರುವ ಕೊಡಗಿನ ಜನತೆ ಮಾಡಿ ತೋರಿಸುತ್ತಾರೆ.

ಹಿಂಬರಹವಲ್ಲ - ಹಣೆಬರಹ...!

ಕಂದಾಯ ಇಲಾಖೆಯ ಕಾರ್ಯವೈಖರಿಗೆ ಬೇಸತ್ತ ಕೊಡಗು ಜಿಲ್ಲೆಯ ಅನೇಕ ರೈತರು ಓಡಾಟದ ಕಸರತ್ತಿನಿಂದ ಆಯಾಸಗೊಂಡು ಇಲಾಖೆಯ ಕೆಲಸಕಾರ್ಯಗಳಿಗೆ ಎಕರೆಗೆ ೫೦ ಸಾವಿರದಿಂದ ೧ ಲಕ್ಷ ಹಣ ಕೊಟ್ಟು ದುರಸ್ತಿ ಕಾರ್ಯ (ಎಂದರೆ ಕುಟುಂಬದ ಸದಸ್ಯರಿಗೆ ಪಾಲು ವಿಂಗಡನೆ ಮಾಡಿ ಪ್ರತ್ಯೇಕ ಆರ್.ಟಿ.ಸಿ. ವ್ಯವಸ್ಥೆ ಮಾಡುವುದು) ಮಾಡಿಸಲು ಆರಂಭಿಸಿದ್ದಾರೆ. ಈ ವ್ಯವಸ್ಥೆ ಎಷ್ಟು ರೈತರು ಎಷ್ಟು ಸಮಯ ಮುಂದುವರಿಸುತ್ತಾರೆAದು ಅಂದಾಜಿಸುವುದು ಕಷ್ಟ.

ಈ ತರಹದ ಇಲಾಖಾ ಕೆಲಸ ನಿರ್ವಹಿಸುವ ಏಜೆಂಟ್‌ಗಳ ಕೈಗೆ ಒಮ್ಮೆ ತಗಲಿಕೊಂಡರೆ ಅದರಿಂದ ಸದ್ಯ ಮುಕ್ತಿ ದೊರಕುವುದು ಬಹಳ ಕಷ್ಟ. ಆದರೆ ಸರಕಾರದ ಕಾರ್ಯವೈಖರಿಗೆ ಬೇಸತ್ತ ಜಿಲ್ಲೆಯ ಅನೇಕ ರೈತರು ಸಾಲ ಮಾಡಿಯಾದರೂ ತಮ್ಮ ತಮ್ಮ ಆಸ್ತಿಗಳ ವಿಭಾಗ ಮಾಡಿ ಒಮ್ಮೆ ತಮ್ಮ ಹೆಸರಿಗೆ ದಾಖಲೆ ಆದರೆ ಸಾಕೆಂದು ಈ ತರಹದ ದುಬಾರಿ ವೆಚ್ಚದ ವ್ಯವಸ್ಥೆಯ ಮೋರೆ ಹೋಗಲೇಬೇಕಾಗುತ್ತದೆ. ಜಿಲ್ಲೆಯ ರೈತರು ತಮಗಿರುವ ಸಮಸ್ಯೆಗಳನ್ನು ಹೊತ್ತು ಅರ್ಜಿಗಳನ್ನು ಸಂಬAಧಿಸಿದ ಇಲಾಖೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಸಲ್ಲಿಸಿದರೆ ಬಹುತೇಕ ಕಚೇರಿಗಳಲ್ಲಿ ಯಾವುದೇ ಹಿಂಬರಹ ಕೊಡುವ ವ್ಯವಸ್ಥೆ ಇರುವುದಿಲ್ಲ.

ವಯಸ್ಸಾದ ವ್ಯಕ್ತಿಯೋರ್ವರು ತಾಲೂಕು ಕಚೇರಿಯಲ್ಲಿ ಅತ್ಯಂತ ಬೇಸರದಿಂದ ಆಡಿದ ನುಡಿಮುತ್ತುಗಳು ಹೀಗಿವೆ “ಹಿಂಬರಹ - ಮುಂಬರಹ ಏನೆಂದು ತಿಳಿಯದು. ಆದರೆ ಇಲ್ಲಿನ ಕಾರ್ಯವೈಖರಿ ನಮ್ಮ ಹಣೆಬರಹ ಅಷ್ಟೇ.’’ ಇದು ಹೆಚ್ಚಿನ ನೈಜ ರೈತರ ಮನದಾಳದ ಮಾತುಗಳು.

ಕಾಫಿ, ಭತ್ತ ಬೆಳೆಯುವ ರೈತರಿಗೆ ಪ್ರಾಕೃತಿಕ ವಿಕೋಪ, ಹವಾಮಾನ ವೈಪರಿತ್ಯ, ಕಾಡುಪ್ರಾಣಿಗಳ ಹಾವಳಿಯಿಂದಾದ ನಷ್ಟ, ಇವುಗಳ ಬಗ್ಗೆ ನಷ್ಟ ಪರಿಹಾರ ಕೇವಲ ಮರೀಚಿಕೆ ಆಗಿದೆ. ಕಳೆದ ಸಾಲಿನಲ್ಲೂ ಬಾರದಿರುವ ಪರಿಹಾರ ಹಣ ಈ ಸಾಲಿನಲ್ಲಿ ಕನಸಿನ ಗಂಟೇ? ಕಾದು ನೋಡಬೇಕಾಗಿದೆ.

(ಮುಂದುವರಿಯುವುದು)

- ಹೆಚ್.ಎಸ್. ತಿಮ್ಮಪ್ಪಯ್ಯ, ಚೆಟ್ಟಳ್ಳಿ, ಮೊ. ೮೯೭೧೮ ೦೯೫೦೧