ಮಡಿಕೇರಿ, ಸೆ. ೨೪: ಹಚ್ಚ ಹಸಿರಿನ ಕಾಫಿ ತೋಟಗಳ ನಡುವಿನ ಗz್ದೆಯಲ್ಲಿ ಆಯೋಜಿಸಿದ್ದ ವಿವಿಧ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮರಾಠಿ ಸಮುದಾಯ ಬಾಂಧವರು ಮಿಂದೆದ್ದರು.
ಮಳೆಗಾಲದಲ್ಲಿ ಕೊಡಗು ಜಿ¯್ಲÉಯಲ್ಲಿ ಕೆಸರು ಗz್ದÉ ಕ್ರೀಡಾ ಕೂಟಗಳು ಆಯೋಜನೆಗೊಳ್ಳುತ್ತವೆ. ಕ್ರೀಡಾಪ್ರೇಮಿಗಳು ಕೆಸರಿನಲ್ಲಿ ಆಡುತ್ತಾ, ಓಡುತ್ತಾ, ಕುಣಿಯುತ್ತ ಕೆಸರಿನೋಕುಳಿಯಲ್ಲಿ ಮಿಂದೇಳುತ್ತಿz್ದÁರೆ. ಅದೇ ರೀತಿಯ ಒಂದು ಕ್ರೀಡಾಕೂಟಕ್ಕೆ ಕೊಡಗು ಜಿ¯್ಲÁ ಮರಾಠ/ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಸಮುದಾಯ ಬಾಂಧವರಿಗಾಗಿ ಮಡಿಕೇರಿ ತಾಲೂಕಿನ ೨ನೇ ಮೊಣ್ಣಂಗೇರಿಯ ಮರಾಠಿ ಸೋಮಪ್ಪನವರ ಗz್ದÉಯಲ್ಲಿ ಆಯೋಜಿಸಿದ್ದ ಗ್ರಾಮೀಣ ಗುಡ್ಡಗಾಡು ಕೆಸರು ಗz್ದÉ ಕ್ರೀಡಾಕೂಟ ಸಾಕ್ಷಿಯಾಯಿತು.
ಕೆಸರು ಗz್ದÉಯಲ್ಲಿ ಕ್ರೀಡಾ ಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಿದರು. ಆಟೋಟ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿತು. ಚುಮು ಚುಮು ಚಳಿಯ ನಡುವೆ ಮಳೆಯ ಸಿಂಚನ ಕೂಡ ಕೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ನೀಡಿತು. ಮೊಣಕಾಲಿನವರೆಗೆ ನೀರು ತುಂಬಿದ ಕೆಸರು ಗz್ದÉಯಲ್ಲಿ ಹಗ್ಗಜಗ್ಗಾಟ, ಹಿಮ್ಮುಖ ಓಟ, ಗೂಟ ಓಟ, ಮಡಿಕೆ ಒಡೆಯುವುದು, ಪಾಸಿಂಗ್ ದಿ ಬಾಲ್, ಕೆಸರುಗz್ದÉ ವಾಲಗ ಕುಣಿತ ಸ್ಪರ್ಧೆಗಳು ರೋಚಕವಾಗಿದ್ದವು.
ಕಾರ್ಯಕ್ರಮಕ್ಕೆ ಚಾಲನೆ: ಕೊಡಗು ಜಿಲ್ಲಾ ಮರಾಠ/ಮರಾಠಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ್ ಉದ್ಘಾಟಿಸಿದರು. ಕ್ರೀಡಾಕೂಟದ ಅಧ್ಯP್ಷÀತೆಯನ್ನು ಕೊಡಗು ಜಿ¯್ಲÁ ಮರಾಠ-ಮರಾಠಿ ಸಮಾಜ ಸೇವಾ ಸಂಘ ಜಿಲ್ಲಾಧ್ಯಕ್ಷ ಎಂ.ಎA.ಪರಮೇಶ್ವರ್ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ದೇವಕ್ಕಿ. ಜಿ.ಆರ್.ನಾಯ್ಕ್, ಜಿಲ್ಲಾ ಸಂಘದ ಉಪ ಸಮಿತಿಗಳ ಅಧ್ಯಕ್ಷರಾದ ಎಂ.ಎಸ್.ವೆAಕಪ್ಪ, ಧನಂಜಯ, ನೀರಲ್ ಕುಮಾರ್, ಕೆ.ಜಿ.ಹೊನ್ನಪ್ಪ, ೨ನೇ ಮೊಣ್ಣಂಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ, ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ್, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಹಾಗೂ ಸಂಘದ ಸದಸ್ಯೆ ಸರಸ್ವತಿ ಬಾಲಕೃಷ್ಣ ಇತರರಿದ್ದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಐಎಫ್ಎಸ್ ಸುಂದರ್ ನಾಯ್ಕ್, ಕೆಸರು ಗz್ದÉ ಕ್ರೀಡಾಕೂಟ ವ್ಯವಸ್ಥಿತವಾಗಿ ನಡೆಸಲು ಸಹಕರಿಸಿದ ೨ನೇ ಮೊಣ್ಣಂಗೇರಿ ಉಪ ಸಮಿತಿಯ ಕಾರ್ಯ ವೈಖರಿ ಶ್ಲಾಘನೀಯ. ೨೨ ವರ್ಷಕ್ಕೆ ಹಿಂದೆ ನಡೆದ ಮಂಗಳೂರಿನ ಮರಾಠಿ ಸಮಾವೇಶ e್ಞÁಪಿಸಿದ ಅವರು, ಮುಂದಿನ ದಿನಗಳಲ್ಲಿ ಮೂಡುಬಿದ್ರೆಯಲ್ಲಿ ನಡೆಯಲಿರುವ ಕರಾವಳಿ ಮರಾಠಿ ಸಮಾವೇಶದಲ್ಲಿ ಕೊಡಗಿನಿಂದ ಅತಿಹೆಚ್ಚಿನ ಜನಾಂಗ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.
ಜಿ¯್ಲÁಡಳಿತದಿಂದ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಬಿಡುಗಡೆ ಬಗ್ಗೆ ಚರ್ಚಿಸಲು ಸಹಕರಿಸುವುದಾಗಿ ತಿಳಿಸಿದರು.
ಉಪ ಸಮಿತಿಯ ಅಧ್ಯP್ಷÀ ಎಂ.ಎಸ್.ವೆAಕಪ್ಪನವರು ಮಾತನಾಡಿ, ಸಮಾಜದ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಅದರಂತೆ ಕ್ರೀಡಾಕೂಟಕ್ಕೆ ಸಹಕರಿಸಿದ ಉಪಸಮಿತಿಯ ಆಡಳಿತ ಮಂಡಳಿ ಹಾಗೂ ಜನಾಂಗ ಬಾಂಧವರಿಗೆ ಅಗತ್ಯ ಸಹಕಾರ ನೀಡಿದ್ದಾರೆ. ಅದೇ ರೀತಿ ಸಂಘದ ಅಜೀವ ಸದಸ್ಯತ್ವವನ್ನು ಪಡೆದು ಸಂಘದ ಏಳಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಎA. ಪರಮೇಶ್ವರ್, ಮಾಸಿಕ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ೨ನೇ ಮೊಣ್ಣಂಗೇರಿಯ ಉಪಸಮಿತಿಯ ಪದಾಧಿಕಾರಿಗಳು ಉತ್ತಮವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣವಾಗಿ ಜನಾಂಗ ಬಾಂಧವರು ಸಹಕಾರ ನೀಡಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಜನಾಂಗ ಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಸರುಗz್ದÉ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ೨೫೦ಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿದ್ದರು. ಯುವಕ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್ ಸರ್ವರನ್ನು ವಂದಿಸಿದರು.