ಕುಶಾಲನಗರ, ಸೆ. ೨೪ : ವಸಂತಗಳನ್ನು ಪೂರೈಸಿರುವ ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ ಸಂಭ್ರಮ ಸೆ.೨೫ (ಇಂದು) ಬುಧವಾರ ನಡೆಯಲಿದ್ದು, ವಿಶಾಲ ವೇದಿಕೆ ಶೃಂಗಾರಗೊAಡಿದೆ.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯುತ್ತಿರುವ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ಕೇಂದ್ರ ಎಂದೇ ಪ್ರಖ್ಯಾತಿಯಾಗಿರುವ ಕುಶಾಲನಗರ ಪಟ್ಟಣದಲ್ಲಿ ಕಳೆದ ಇಪ್ಪತೈದು ವರ್ಷಗಳ ಹಿಂದೆ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರ ವೇದಿಕೆಯೊಂದು ಸೃಷ್ಟಿಯಾಯಿತು.

ಹಿರಿಯ ಪತ್ರಕರ್ತರಾದ ಬಿ.ಆರ್.ನಾರಾಯಣ ಅವರು ಅಂದಿನ ದಿನಗಳಲ್ಲಿ ಪತ್ರಕರ್ತರನ್ನು ಸಂಘಟಿಸಿ ಹೋಬಳಿ ಸಂಘವನ್ನು ಸ್ಥಾಪಿಸುವ ಮೂಲಕ ಪತ್ರಕರ್ತರ ಸಂಘಟಿತ ಶ್ರೇಯೋಭಿವೃದ್ಧಿಗೆ ಮುನ್ನುಡಿ ಬರೆದರು. ೧೯೯೯ ರಲ್ಲಿ ಆರಂಭಗೊAಡ ಸಂಘ ಇದೀಗ ೨೫ ವರ್ಷ ಪೂರೈಸಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಪ್ಪತೈದು ವರ್ಷಗಳನ್ನು ಪೂರೈಸಿ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹೋಬಳಿ ಪತ್ರಕರ್ತರ ಸಂಘ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಈ ಸಂಬAಧ ಕುಶಾಲನಗರ ತಾಲೂಕು ಕಾರ್ಯಕರ್ತರ ಸಂಘದ ಆಶ್ರಯದಲ್ಲಿ ಬೆಳ್ಳಿ ಹಬ್ಬದ ನೆನಪಿನಲ್ಲಿ ವರ್ಷವಿಡೀ ಇಪ್ಪತೈದು ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದರೊಂದಿಗೆ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ಇದೀಗ ಎಪಿಸಿಎಂಎಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ವೇದಿಕೆ ಶೃಂಗಾರಗೊAಡಿದೆ.

ಹೋಬಳಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಏಳಿಗೆಗಾಗಿ ಶ್ರಮಿಸಿದ ಸ್ಥಾಪಕ ಅಧ್ಯಕ್ಷ ಬಿ.ಆರ್.ನಾರಾಯಣ, ಎಂ.ಇ.ಮೊಹಿದ್ದೀನ್, ಕೆ.ಕೆ.ನಾಗರಾಜ ಶೆಟ್ಟಿ, ಎಂ.ಎನ್.ಚAದ್ರಮೋಹನ್, ಸಬಲಂ ಬೋಜಣ್ಣ ರೆಡ್ಡಿ, ರಘುಹೆಬ್ಬಾಲೆ ಅವರನ್ನು ಸನ್ಮಾನಿಸಲಾಗುತ್ತಿದೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಕಿಶೋರ್ ಕುಮಾರ್, ಪುರಸಭೆಯ ದಫೇದಾರ್ ಮೋಹನ್‌ಕುಮಾರ್, ಸಮಾಜ ಸೇವಕ ಮುನೀರ್, ಸಮಾಜ ಸೇವಕಿ ಪದ್ಮ ಪುರುಷೋತ್ತಮ, ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಮತ್ತು ಹಿರಿಯ ಪತ್ರಕರ್ತರಾದ ದಿ . ನೋಬು ಅವರ ಕುಟುಂಬ ಸದಸ್ಯರನ್ನು ಹಾಗೂ ಹಿರಿಯ ನಾಗರಿಕರಾದ ನಿವೃತ್ತ ಶಿಕ್ಷಕರುಗಳಾದ ಎಂ ಹೆಚ್ ನಜೀರ್ ಅಹ್ಮದ್ ಮತ್ತು ಬಾಚರಣೆಯಂಡ ಪಿ ಅಪ್ಪಣ್ಣ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.

ಸಂಘದ ತಾಲೂಕು ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಕಾರ್ಯದರ್ಶಿ ಕೆ ಕೆ ನಾಗರಾಜ್ ಶೆಟ್ಟಿ, ವಿವಿಧ ಉಪ ಸಮಿತಿಗಳ ಸಂಚಾಲಕರಾದ ವಿನೋದ್, ಟಿ ಆರ್ ಪ್ರಭುದೇವ್, ರಘು ಹೆಬ್ಬಾಲೆ, ಶಿವರಾಜ್, ಆಹಾರ ಸಮಿತಿ ಜಯಪ್ರಕಾಶ್ ಹಾಗೂ ಸದಸ್ಯರು ಸಂಘದ ಬೆಳ್ಳಿ ಮಹೋತ್ಸವ ಯಶಸ್ಸಿಗೆ ಎಲ್ಲಾ ಪೂರ್ವಸಿದ್ಧತೆಗಳು ನಡೆದಿದೆ.