ಗೋಣಿಕೊಪ್ಪಲು, ಸೆ.೨೪: ಸಂಘಕ್ಕೆ ಸ್ವಂತ ಕಟ್ಟಡಕ್ಕೆ ನಿವೇಶನ ಖರೀದಿ, ಸಂಘದ ಸದಸ್ಯರಿಗೆ ಗರಿಷ್ಠ ೩೦ ಲಕ್ಷ ಸಾಲ, ಬೈಲಾ ತಿದ್ದುಪಡಿಗೆ ಅನುಮೋದನೆ ಸೇರಿದಂತೆ ಹಲವು ವಿಚಾರಗಳಿಗೆ ಅನುಮೋದನೆ ನೀಡಲಾಯಿತು. ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕೋ ಆಪರೇಟಿವ್ ಸೊಸೈಟಿಯ ೨೫ನೇ ವರ್ಷದ ಮಹಾಸಭೆಯಲ್ಲಿ ಉಮಾಮಹೇಶ್ವರಿ ದೇವಾಲಯದ ಆವರಣದ ಸಭಾಂಗಣದಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಬೇಕಾದ ಅಗತ್ಯ ಸಲಹೆಗಳನ್ನು ಸದಸ್ಯರು ನೀಡಿದರು. ಆಡಳಿತ ಮಂಡಳಿಯು ಸದಸ್ಯರ ಸಲಹೆ ಮೇರೆಗೆ ಮುಂದಿನ ದಿನದಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘದ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಅವರು ಭರವಸೆ ನೀಡಿದರು.
ಪ್ರಸ್ತುತ ಕಟ್ಟಡ ನಿಧಿಯಲ್ಲಿರುವ ೮೦ ಲಕ್ಷ ಹಣವನ್ನು ಬಳಕೆ ಮಾಡಿಕೊಂಡು ವಾಣಿಜ್ಯ ನಗರಿ ಗೋಣಿಕೊಪ್ಪಲುವಿನಲ್ಲಿ ನಿವೇಶನ ಖರೀದಿಸಲು ಪ್ರಯತ್ನ ನಡೆಸಲಾಗಿದೆ. ಉತ್ತಮ ನಿವೇಶನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸೂಕ್ತ ಸ್ಥಳ ಲಭಿಸಿದ್ದಲ್ಲಿ ನಿವೇಶನ ಖರೀದಿಸುವುದಾಗಿ ತಿಳಿಸಿದರು. ಮಹಾಸಭೆಯು ಸರ್ವಾನುಮತದ ಒಪ್ಪಿಗೆ ನೀಡಿತು. ಕಳೆದ ೨೪ ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವÀ ಸಂಘವು ಇದೀಗ ೨೫ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಬ್ಯಾಂಕ್ಅನ್ನು ಮತ್ತಷ್ಟು ಪ್ರಗತಿಯತ್ತ ಸಾಧಿಸಲು ಹಾಗೂ ಆದಾಯ ಕ್ರೋಢೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸಂಘದ ಕೆಲ ಸಿಬ್ಬಂದಿಗಳು ಮಾಡಿದ ನಷ್ಟದ ಹಣವನ್ನು ಮರು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಹುತೇಕ ಹಣ ಪಾವತಿಯಾಗಿದ್ದು, ನಷ್ಟದ ಹಣವನ್ನು ಸಿಬ್ಬಂದಿಗಳಿAದ ವಸೂಲಿ ಮಾಡಲಾಗಿದೆ. ಪ್ರಕರಣವು ನ್ಯಾಯಾಲಯದಲ್ಲಿ ಮುಂದುವರೆಯುತ್ತಿದೆ. ಕೆಲವು ತಿಂಗಳುಗಳಲ್ಲಿ ಸಮಸ್ಯೆಗೆ ಪೂರ್ಣ ವಿರಾಮ ಬೀಳಲಿದೆ ಎಂದು ಅಧ್ಯಕ್ಷ ಅರುಣ್ ಪೂಣಚ್ಚ ಸಭೆಗೆ ಮಾಹಿತಿ ಒದಗಿಸಿದರು.
ಮಹಾಸಭೆಯಲ್ಲಿ ಸಂಘದ ಸದಸ್ಯರಾದ ಎ.ಎಸ್. ಸುರೇಶ್, ಗಣೇಶ್ ರೈ, ಮಧೋಶ್ ಪೂವಯ್ಯ, ಪಿ.ಕೆ. ಪ್ರವೀಣ್, ಕೊಲ್ಲಿರ ಗೋಪಿ ಚಿಣ್ಣಪ್ಪ, ಐನಂಡ ಬೋಪಣ್ಣ, ಗುಮ್ಮಟ್ಟಿರ ದರ್ಶನ್ ಮಾತನಾಡಿ, ಈ ಹಿಂದೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿAದ ಬ್ಯಾಂಕಿಗೆ ಬರಬೇಕಾದ ನಷ್ಟದ ಹಣವನ್ನು ಕಟ್ಟಿಸಲು ಆಡಳಿತ ಮಂಡಳಿ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ನಷ್ಟ ಸರಿದೂಗಿಸುವ ಕೆಲಸ ನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ, ಆದಷ್ಟು ಬೇಗನೆ ಈ ಪ್ರಕರಣ ಅಂತ್ಯಗೊಳಿಸಲು ಸಭೆಗೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಸದಸ್ಯರಾದ ಮಧೋಶ್ ಪೂವಯ್ಯ, ಸಿಬ್ಬಂದಿಗಳನ್ನು ಆಡಳಿತ ಮಂಡಳಿಯು ಬರಮಾಡಿಕೊಂಡು ಬರಬೇಕಾದ ನಷ್ಟದ ಹಣವನ್ನು ಪೂರ್ಣವಾಗಿ ಭರಿಸಿಕೊಳ್ಳುವ ಮೂಲಕ ಈ ಪ್ರಕರಣವನ್ನು ಮುಕ್ತಾಯಗೊಳಿಸಿ ಎಂದರು. ಈ ವೇಳೆ ಮಾತನಾಡಿದ ಸಭೆಯ ಅಧ್ಯಕ್ಷರು ಆಡಳಿತ ಮಂಡಳಿಯನ್ನು ಸಿಬ್ಬಂದಿಗಳು ಮುಕ್ತವಾಗಿ ಭೇಟಿ ಮಾಡುವ ಅವಕಾಶವಿದೆ. ಯಾವುದೇ ಸಂದರ್ಭದಲ್ಲಿ ಸಂಸ್ಥೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಸಾಲ ಪಡೆದ ಸದಸ್ಯರ ಹಣವನ್ನು ವಿಶೇಷ ಅದಾಲತ್ ಮೂಲಕ ವಾಪಾಸು ಪಡೆಯಲಾಗುತ್ತಿದೆ. ಸಾಲಪಡೆದ ಸದಸ್ಯರು ವರ್ಷದೊಳಗೆ ಪಡೆದ ಸಾಲವನ್ನು ಮರುಪಾವತಿಸಬೇಕು. ನಂತರ ಸಂಘದಿAದ ನೋಟೀಸು ನೀಡಲಾಗುತ್ತದೆ. ಎರಡು ಮೂರು ಹಂತದಲ್ಲಿ ಸಾಲ ಪಾವತಿಗೆ ಸೂಚನೆ ಕಳುಹಿಸಲಾಗುವುದು. ಅದನ್ನು ಮೀರಿ ಸಾಲ ಮರುಪಾವತಿಸದಿದ್ದಲ್ಲಿ ಅಂತಹವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತಿದೆ. ಇತ್ತೀಚಿನ ತಿಂಗಳಲ್ಲಿ ಹಳೆಯ ಬಾಕಿ ಸಾಲ ಅಧಿಕವಾಗಿ ಮರುಪಾವತಿಯಾಗಿದೆ ಎಂದರು.
ಮುAದಿನ ಮಹಾಸಭೆಯಲ್ಲಿ ಪಿಗ್ಮಿ ಸಂಗ್ರಾಹಕರ ಹಾಜರಾತಿಯ ಬಗ್ಗೆ ಕ್ರಮ ಕೈಗೊಳ್ಳಲು ಸದಸ್ಯರು ಸಲಹೆ ನೀಡಿದರು. ಸಂಘದ ಸದಸ್ಯರಿಗೆಅಗತ್ಯ ದಾಖಲಾತಿಗಳನ್ನು ಹೊಂದುವ ಮೂಲಕ ಗರಿಷ್ಠ ೩೦ ಲಕ್ಷದವರೆಗೆ ಸಾಲ ನೀಡಲು ಮಹಾಸಭೆಯು ಒಪ್ಪಿಗೆ ಸೂಚಿಸಿತು. ಚಿನ್ನಾಭರಣವನ್ನು ಸಾಲವಾಗಿ ಇಟ್ಟು ಸಾಲ ಪಡೆಯುವವರ ಆಭರಣಗಳನ್ನು ನುರಿತರಿಂದ ಪರಿಶೀಲನೆ ಮಾಡುವ ಕೆಲಸ ಮಾಡಬೇಕು. ಚಿನ್ನದ ನಕಲಿ ಹಾವಳಿಯ ಬಗ್ಗೆ ಎಚ್ಚರ ವಹಿಸಬಹುದು ಎಂದರು.
ಸದಸ್ಯರ ಮಾತಿಗೆ ಉತ್ತರಿಸಿದ ಅಧ್ಯಕ್ಷ ಅರುಣ್ ಪೂಣಚ್ಚ, ಈಗಾಗಲೇ ಆಡಳಿತ ಮಂಡಳಿಯಲ್ಲಿ ಒಂದು ವಿಶೇಷ ಸಮಿತಿ ನಡೆಸಿ ವಾರ್ಷಿಕವಾಗಿ ನಾಲ್ಕೆöÊದು ಬಾರಿ ಚಿನ್ನಾಭರಣವನ್ನು ಪರಿಶೀಲಿಸುವ ಕೆಲಸ ಕೈಗೊಳ್ಳಲಾಗಿದೆ. ಮುಂದೆಯೂ ಮತ್ತಷ್ಟು ಪಾರದರ್ಶಕವಾಗಿ ಕೆಲಸ ಮಾಡಲಾಗುವುದು ಎಂದರು. ಪಿಗ್ಮಿ ಸಂಗ್ರಾಹಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಲ ಮರು ಪಾವತಿಗೆ ಪಿಗ್ಮಿದಾರರನ್ನು ಕೂಡ ಜವಾಬ್ದಾರಿಯನ್ನಾಗಿ ಮಾಡಲಾಗುತ್ತಿದೆ. ವಾಯಿದೆ ಮೀರಿದ ಬಾಕಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಉಪನಿಬಂಧಕರು ಸೂಚನೆ ನೀಡಿದ್ದಾರೆ. ಸಾಕಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ತೀರ್ಮಾನಗೊಂಡಿವೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಕಡೇಮಾಡ ಸುನಿಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್.ಪ್ರಕಾಶ್, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಎ.ಜೆ. ಬಾಬು, ಹೆಚ್.ಎನ್. ಮುರುಗನ್, ಗಿರೀಶ್ ಗಣಪತಿ, ಸಿ.ಡಿ.ಮಾದಪ್ಪ, ಕೆ.ಪಿ.ಪ್ರಶಾಂತ್ ಹಾಗೂ ಕೆ.ಬಿ. ಪ್ರತಾಪ್, ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಕಾರ್ತಿಕ್ ವರದಿ ವಾಚಿಸಿದರು. ಸಿಇಓ ಕಾರ್ತಿಕ್ ಪ್ರಾರ್ಥಿಸಿ, ಕಡೇಮಾಡ ಸುನೀಲ್ ಮಾದಪ್ಪ ವಂದಿಸಿದರು.