ಬಾಳೆಲೆ, ಸೆ. ೨೪: ಕಾಫಿ ಮಂಡಳಿ ಗೊಣಿಕೊಪ್ಪಲು ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಗ್ರಾಮ ಮಟ್ಟದ ಕಾಫಿ ಕಾರ್ಯಾಗಾರ ನಡೆಯಿತು ಈ ವರ್ಷದ ಅತಿ ಹೆಚ್ಚಿನ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ನಿರ್ವಹಣೆ ಮತ್ತು ಕಾಫಿ ಉದುರುವುದರ ಬಗ್ಗೆ ಹಾಗೂ ಮರು ನಾಟಿ, ಗೋದಾಮು, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪಿçಂಕ್ಲರ್ ಉಪಕರಣ, ಮೋಟಾರ್, ಮಿನಿ ಟ್ರಾö್ಯಕ್ಟರ್ ಮುಂತಾದವುಗಳಿಗೆ ಸಬ್ಸಿಡಿ ಸಹಾಯವನ್ನು ಕಾಫಿ ಮಂಡಳಿಯಿAದ ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ಕಾಫಿ ಮಂಡಳಿಯ ಉಪನಿರ್ದೇಶಕರಾದ ಡಾ ಶ್ರೀದೇವಿ ಮತ್ತು ಗೊಣಿಕೊಪ್ಪಲು ಕಾಫಿಮಂಡಳಿಯ ಸಂಪರ್ಕಾಧಿಕಾರಿ ಮುಖಾರೀಬ್ ಅವರು ಕಾಫಿ ಬೆಳೆಗಾರರಿಗೆ ನೀಡಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮ್ಮುಣಿ, ಉಪಾಧ್ಯಕ್ಷರಾದ ಚಕ್ಕೆರ ಸೂರ್ಯ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಗ್ರಾಮಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಸುರೇಶ್, ಪ್ರಮುಖರಾದ ಪಾರುವಂಗಡ ಪವನ್, ಮುಕ್ಕಾಟಿರ ಪ್ರಿನ್ಸ್ ಮುಂತಾದವರು ಹಾಜರಿದ್ದರು