ಸೋಮವಾರಪೇಟೆ, ಸೆ. ೨೪: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ನಡೆಯುವ ನಮಸ್ತೆ ಯೋಜನೆಯಲ್ಲಿ ಒಳಚರಂಡಿ ಮತ್ತು ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಬಗೆಗಿನ ಮುಂಜಾಗ್ರತೆ ಕಾರ್ಯಾಗಾರ ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಉದ್ಘಾಟಿಸಿದರು. ಯೋಜನೆಯ ತರಬೇತಿ ಸಂಯೋಜಕಿ ವಿಜಯಲಕ್ಷಿö್ಮ ಮಾತನಾಡಿ, ಪೌರಕಾರ್ಮಿಕರು ಕೈಯಿಂದ ಚರಂಡಿ ಮತ್ತು ಮಲಗುಂಡಿಯನ್ನು ಸ್ವಚ್ಛಗೊಳಿಸುವಂತಿಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಬಂದಿದೆ. ಸ್ವಚ್ಛತೆಗೆ ಹೊಸ ತಂತ್ರಜ್ಞಾನ ಬಳಸಬೇಕು. ವ್ಯವಸ್ಥಿತವಾದ ಸ್ವಚ್ಛತಾ ವಾಹನಗಳು ತಯಾರಾಗಿವೆ. ಸಬ್ಸಿಡಿಯಲ್ಲಿ ಖರೀದಿ ಮಾಡಬೇಕು ಎಂದು ಮಾಹಿತಿ ನೀಡಿದರು.

ಯೋಜನಾ ನಿರ್ದೇಶಕ ಬಸಪ್ಪ ಅವರು ಪೌರಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಉಪಾಧ್ಯಕ್ಷೆ ಮೋಹಿನಿ, ಸದಸ್ಯರುಗಳಾದ ಶೀಲಾ ಡಿಸೋಜ, ಮೃತ್ಯುಂಜಯ, ಕಿರಣ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಸೇರಿದಂತೆ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಇದ್ದರು.