ಮಡಿಕೇರಿ, ಸೆ. ೨೨: ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳು ವುದರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲುವ ಕೆಲಸ ಪತ್ರಕರ್ತರಿಂದಾಗಬೇಕೆAದು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಆಶಯ ವ್ಯಕ್ತಪಡಿಸಿದರು.

ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ಸಭಾಂಗಣದಲ್ಲಿ ೨೦೨೪-೨೭ನೇ ಸಾಲಿನ ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೆಸ್‌ಕ್ಲಬ್ ರಜತ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಪತ್ರಕರ್ತರಿಗೆ ಮಾತ್ರವಲ್ಲದೆ ಎಲ್ಲಾ ವರ್ಗವರನ್ನು ಸೇರಿಸಿಕೊಂಡು ಒಂದು ವರ್ಷ ಕಾರ್ಯಕ್ರಮ ರೂಪಿಸಿದ್ದು, ಮೈಲಿಗಲ್ಲಾಗಿದೆ ಎಂದು ಮಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರು ಸದಾ ಒತ್ತಡದಲ್ಲಿ ರುತ್ತಾರೆ. ಸಮಾಜದ ಬಗ್ಗೆ ಚಿಂತನೆ ಮಾಡುವ ನಾವು ನಮ್ಮ ವೈಯಕ್ತಿಕ ಬದುಕಿನ ಕುರಿತು ಚಿಂತಿಸುವುದಿಲ್ಲ. ಇಂದು ಆಡಳಿತ, ಜನಪ್ರತಿನಿಧಿಗಳು ಇಚ್ಛಾಶಕ್ತಿ ಮರೆತಿದ್ದಾರೆ. ರಾಜಕೀಯ ಮೇಲಾಟಗಳಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸ್ಥಳೀಯ ಸಂಸ್ಥೆಗಳ ಸಭೆಗಳು ಆರೋಪ- ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ವಿಷಾದಿಸಿದರು.

ಪ್ರಗತಿಪರ ಕಾರ್ಯಗಳಿಗೆ ಸ್ಪಂದಿಸುವ ಕೆಲಸ ಪತ್ರಕರ್ತ ರಿಂದಾಗಬೇಕು. ಜನಪರ ಕಾಳಜಿ ಇರುವ ಪತ್ರಕರ್ತರ ಬೆನ್ನಿಗೆ ನಾವು ನಿಲ್ಲಬೇಕು. ಇದಕ್ಕೆ ಸಂಘಟನಾತ್ಮಕ ನಡೆ ಅನುಸರಿಸಬೇಕಾದ ಅನಿವಾರ್ಯತೆ ಇದೆ.

ಮಾಧ್ಯಮ ತರಬೇತಿ ಶಿಬಿರಗಳು ನಡೆಸಬೇಕು. ಕೃತಕ ಬುದ್ದಿಮತ್ತೆ (ಎಐ) ಪ್ರವರ್ಧಮಾನಕ್ಕೆ ಬರುತ್ತಿದ್ದು, ಆ ಬಗ್ಗೆತರಬೇತಿಯ ಅವಶ್ಯಕತೆ ಇದೆ ಎಂದು ಅವರು ಸಲಹೆ ನೀಡಿದರು.

ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಪ್ರೆಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರೆಸ್‌ಕ್ಲಬ್ ಪ್ರಬಲ ಸಂಘಟನೆಯಾಗಿ ಇಂದು ಬೆಳೆದಿದೆ. ಇದೀಗ ಮತ್ತೊಂದು ಪೀಳಿಗೆಗೆ ಸಂಘಟನೆಯನ್ನು ಹಸ್ತಾಂತರ ಮಾಡಲಾಗಿದೆ. ಯುವಪೀಳಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಹಿರಿಯರು ಕಟ್ಟಿಬೆಳೆಸಿದ ಸಂಘಟನೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರು ಅವರವರ ಕೊಡುಗೆ ನೀಡಿದರೆ ಸಂಘಟನೆಯೂ ಬಲಶಾಲಿಯಾಗುತ್ತದೆ.

ಪ್ರೆಸ್‌ಕ್ಲಬ್ ಮೂಲಕ ಸ್ಥಾಪಿಸಿದ ಮಾಧ್ಯಮ ಸ್ಪಂದನ ಮಾಡಿದ ಸಾಮಾಜಿಕ ಸೇವೆಯನ್ನು ಜನರು ಇಂದಿಗೂ ಸ್ಮರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಘಟನಾತ್ಮಕವಾಗಿ ಮುಂದುವರೆಯ ಬೇಕಾದ ಅನಿವಾರ್ಯತೆ ಇದೆ. ಪತ್ರಕರ್ತರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಆತಂಕಕಾರಿ. ಪದಾಧಿಕಾರಿಗಳ ಪರಸ್ಪರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ನೂತನ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದಾಧಿಕಾರಿ, ಸದಸ್ಯರ ಸಹಕಾರದೊಂದಿಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಲಾಗುವುದು. ಪತ್ರಕರ್ತರ ಸೌಹಾರ್ದ ಸಹಕಾರಿ ಸಂಘದಲ್ಲಿ ಕ್ಲಬ್‌ನಿಂದ ಠೇವಣಿ ಇಡಲು ಮುಂದಾಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ಸಿ.ಪಿ. ತೇಜಸ್, ಸಂಘಟನಾ ಕಾರ್ಯದರ್ಶಿ ಕೆ.ಜೆ. ಶಿವರಾಜ್, ಸಹಕಾರ್ಯದರ್ಶಿ ವಿ.ವಿ. ಅರುಣ್ ಕುಮಾರ್, ನಿರ್ದೇಶಕರಾಗಿ ಕೆ.ಎಂ. ವಿನೋದ್, ಮಾಗುಲು ಲೋಹಿತ್, ಕೆ.ಎಂ. ಇಸ್ಮಾಯಿಲ್ ಕಂಡಕೆರೆ, ಲೋಕೇಶ್ ಕಾಟಕೇರಿ, ಬಿ.ಜಿ. ಮಂಜು, ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಿ.ಆರ್. ಸವಿತಾ ರೈ, ಮಚ್ಚಮಾಡ ಅನೀಶ್ ಮಾದಪ್ಪ ಅಧಿಕಾರ ಸ್ವೀಕರಿಸಿದರು.

ಇದೇ ಸಂದರ್ಭ ನಿರ್ಗಮಿತ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿ, ಆನಂದ್ ಕೊಡಗು ನಿರೂಪಿಸಿ, ಕೆ.ಜಿ. ಶಿವರಾಜು ಸ್ವಾಗತಿಸಿ, ಖಜಾಂಜಿ ತೇಜಸ್ ಪಾಪಯ್ಯ ವಂದಿಸಿದರು.

ಆಟೋಟ ವಿಜೇತರು : ಕಾರ್ಯಕ್ರಮದ ಅಂಗವಾಗಿ ಪ್ರೆಸ್ ಕ್ಲಬ್ ಸದಸ್ಯರಿಗೆ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಎ.ಆರ್. ಕುಟ್ಟಪ್ಪ (ಪ್ರಥಮ), ರೆಜಿತ್ ಕುಮಾರ್ (ದ್ವಿತೀಯ), ಅನೀಶ್ ಮಾದಪ್ಪ (ತೃತೀಯ), ಒಂಟಿಕಾಲು ಓಟದಲ್ಲಿ ದಿವಾಕರ್ (ಪ್ರ), ಲೋಹಿತ್ (ದ್ವಿ), ಆದರ್ಶ್(ತೃ), ನಿಂಬೆ ಚಮಚ ಓಟದಲ್ಲಿ ವಿಶ್ಮಾ ಪೆಮ್ಮಯ್ಯ (ಪ್ರ), ಬಿ.ಆರ್.ಸವಿತಾ ರೈ (ದ್ವಿ), ಜಿ.ಆರ್. ಪ್ರಜ್ಞಾ (ತೃ), ಪಾಸಿಂಗ್ ದಿ ಬಾಲ್‌ನಲ್ಲಿ ವಿಶ್ಮಾ ಪೆಮ್ಮಯ್ಯ (ಪ್ರ), ಮಂಜು ಸುವರ್ಣ (ದ್ವಿ), ಜಿ. ರಾಜೇಂದ್ರ (ತೃ), ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಜಿ. ರಾಜೇಂದ್ರ (ಪ್ರ), ಲೋಹಿತ್ (ದ್ವಿ), ಆರ್.ಸುಬ್ರಮಣಿ (ತೃ) ವಿಜೇತರಾದರು.