'

ಸೋಮವಾರಪೇಟೆ, ಸೆ. ೨೨: ಇಲ್ಲಿನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ರೇಂಜರ್ ಬ್ಲಾಕ್‌ನ ಅಜಯ್ ಅವರು ಆಯ್ಕೆಯಾಗಿದ್ದಾರೆ.

ಇಲ್ಲಿನ ಮಹಿಳಾ ಸಮಾಜದಲ್ಲಿ ಸಂಘದ ಅಧ್ಯಕ್ಷ ಎಸ್.ಬಿ. ಯಶ್ವಂತ್ ಅವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ವಿಶ್ವಕರ್ಮ ಪೂಜೋತ್ಸವದ ನಂತರ ನಡೆದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಎನ್.ಪಿ ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ. ಲೋಹಿತಾಶ್ವ, ಉಪ ಕಾರ್ಯದರ್ಶಿಯಾಗಿ ಕೆ.ವಿ. ಯೋಗೇಶ್, ಖಜಾಂಚಿಯಾಗಿ ಎಸ್.ಜೆ. ದೇವದಾಸ್ ಆಯ್ಕೆಯಾದರು.

ಮಹಿಳಾ ಘಟಕದ ಅಧ್ಯಕ್ಷರಾಗಿ ರೇಷ್ಮಾ ನಿಖಿಲ್, ಉಪಾಧ್ಯಕ್ಷರಾಗಿ ಶುಭಾ ಬಾಬುರಾಯ ಹಾಗೂ ಕಾರ್ಯದರ್ಶಿಯಾಗಿ ಸರಿತಾ ಅಜಯ್ ನೇಮಕಗೊಂಡರು.

ಸಂಘದ ಹೆಸರಿನಲ್ಲಿ ಸ್ಥಳ ಖರೀದಿಸಿದ್ದು, ಇಲ್ಲಿಯವರೆಗೂ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ಎಲ್ಲ ಸದಸ್ಯರು ಒಟ್ಟಾಗಿ ಮುನ್ನಡೆಯುವ ಮೂಲಕ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಸದಸ್ಯರು ಸಲಹೆ ನೀಡಿದರು.