ಮಡಿಕೇರಿ, ಸೆ. ೨೨: ಕೆ.ಪಿ.ಎಸ್.ಸಿ.ಯಿಂದ ನೂತನವಾಗಿ ಸಹಾಯಕ ನಗರ ಆಯೋಜಕರಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ೨೦-೦೩-೨೦೨೪ ರಂದು ರಾಜ್ಯಾದ್ಯಂತ ೬೦ ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದು ದಿನಾಂಕ ೧-೨-೨೦೨೩ ರ ಸರ್ಕಾರದ ಸುತ್ತೋಲೆ ಅನ್ವಯ ಹುದ್ದೆ ಪಡೆಯಲು ಕಾನೂನು ತೊಡುಕು ಉಂಟಾದ ಹಿನ್ನೆಲೆ ಎ.ಎಸ್. ಪೊನ್ನಣ್ಣ ನವರಿಗೆ ಕಾನೂನು ತೊಡಕನ್ನು ಪರಿಹರಿಸಲು ಮನವಿ ಮಾಡಿದರು