ಶ್ರೀಮಂಗಲ, ಸೆ. ೨೩: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ತೆರಳಿ ಕಳೆದ ೪೫ ತಿಂಗಳಿನಿAದ ಪೂಜೆ ಸಲ್ಲಿಸುವ ಸಂಕಲ್ಪ ತೊಟ್ಟು ಪ್ರತಿ ತಿಂಗಳು ಆಗಮಿಸಿ ಪೂಜೆ ಸಲ್ಲಿಸುತ್ತಿರುವ ‘ತಿಂಗಕೊರ್ ಮೊಟ್ಟ್ ತಲಕಾವೇರಿ’ ಕೊಡವ ಭಕ್ತಾದಿಗಳ ಕೂಟ ಆಶ್ರಯದಲ್ಲಿ ನಾಲ್ಕನೇ ವರ್ಷದ ತಲಕಾವೇರಿ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಸೇವೆಯಲ್ಲಿ ಜಿಲ್ಲೆಯ ವಿವಿಧೆಡೆ ಹಾಗೂ ಬೆಂಗಳೂರು, ಮೈಸೂರಿನಿಂದ ಸುಮಾರು ೩೫೦ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡರು.

ಕ್ಷೇತ್ರದ ಹೆಬ್ಬಾಗಿಲಿನಿಂದ ಕುಂಡಿಕೆ ಸಮೀಪದ ಬ್ಯಾರಿಕೇಡ್‌ವರೆಗೆ ಸ್ವಚ್ಛಗೊಳಿಸಿದರು. ಪವರ್ ಸ್ಪೆçÃಯರ್, ಬಿಂದಿಗೆ, ಬಕೇಟು ತಂದು ಪಾಚಿ ಕಟ್ಟಿದ ನೆಲ ತಡೆಗೋಡೆ, ಸ್ಟೀಲ್ ಪೈಪ್‌ನ ಗ್ರಿಲ್ಸ್, ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಕಾರ್ಯಕ್ಕೂ ಮೊದಲು ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಸೇವಾ ಕಾರ್ಯಕ್ರಮಕ್ಕೆ ತೆರಳಲು ಟಿ. ಶೆಟ್ಟಿಗೇರಿಯ ರೂಟ್ಸ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ನಾಲ್ಕು ಬಸ್ಸುಗಳನ್ನು ಒದಗಿಸಲಾಗಿತ್ತು. ಭಕ್ತಾದಿಗಳಿಗೆ ಭಾಗಮಂಡಲ- ತಲಕಾವೇರಿ ದೇವಸ್ಥಾನದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.