ಚೆಯ್ಯಂಡಾಣೆ, ಸೆ. ೨೨: ಅರಪಟ್ಟು ಮತ್ತು ಕರಡ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ೮೨ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನಂಬಿಯಪAಡ ಎ. ಮಣಿ ಅಯ್ಯಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಘದ ಅಧ್ಯಕ್ಷ ನಂಬಿಯಪAಡ ಮಣಿ ಅಯ್ಯಮ್ಮ ಅವರು ಮಾತನಾಡಿ, ಸಂಘವು ಅಭಿವೃದ್ಧಿ ಪಥದಲ್ಲಿ ಮುಂದುವರೆದಿದ್ದು, ನಾಡಿನ ಪೂರ್ವಜರ ಪರಿಶ್ರಮದಿಂದ ೧೯೧೨ರಲ್ಲಿ ಪ್ರಾರಂಭಿಸಿದ ದವಸ ಭಂಡಾರವು ಗ್ರಾಮದ ಪ್ರತಿಯೊಬ್ಬ ಸದಸ್ಯರ ಸೇವೆಯ ಪಾರದರ್ಶಕತೆಯಿಂದ ಕೆಲಸ ಕಾರ್ಯಗಳು ನಡೆಯುತ್ತಾ ಬಂದಿದೆ. ಸಂಘದಲ್ಲಿ ಸದಸ್ಯರಿಂದ ಹಾಗೂ ಸದಸ್ಯರೇತರರಿಂದಲೂ ಠೇವಣಿ ಸಂಗ್ರಹಹಿಸಲಾಗುತ್ತಿದೆ. ಸದಸ್ಯರಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ವಿತರಿಸಲು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಸಾಲ ಮಂಜೂರಾತಿ ಪಡೆಯಲು ಅಗತ್ಯ ದಾಖಲಾತಿಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದರು.
ಸಂಘದ ಸದಸ್ಯರಿಗೆ ಗೊಬ್ಬರ, ಕ್ರಿಮಿನಾಶಕ, ಕಬ್ಬಿಣ, ಹತ್ಯಾರು ಕಡಿಮೆ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಗ್ರಾಮದ ಪ್ರತಿಯೊಬ್ಬರು ಸದಸ್ಯತ್ವ ಪಡೆದು ರಾಜಕೀಯರಹಿತವಾಗಿ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಸಂಘದಿAದ ಎಲ್ಲಾ ವ್ಯವಹಾರಗಳನ್ನು ಪಡೆದುಕೊಳ್ಳುವಂತೆ ಅಧ್ಯಕ್ಷ ಮಣಿ ಅಯ್ಯಮ್ಮನವರು ಕರೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಯು. ಮಹಮ್ಮದ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಮುಕ್ಕಾಟಿರ ಸಿ. ಕಿರಣ್ ಬೋಪಯ್ಯ, ನಿರ್ದೇಶಕರುಗಳಾದ ದೇಯಿರ ಸಿ. ಸುಭಾಷ್ ಭೀಮಯ್ಯ, ಕೈಪಂಗಡ ಕೆ. ವಿಠಲ್ ಉತ್ತಪ್ಪ, ನೆರಪಂಡ ದೀನಾ ನಾಣಯ್ಯ, ಪಾಲಚಂಡ ವಿನು ಮುದ್ದಪ್ಪ, ಚೇಲಮಂಡ ಕೆ. ಕಸ್ತೂರಿ, ಬೇಪಡಿಯಂಡ ಪಿ. ಕಟ್ಟಿ ಸುಬ್ಬಯ್ಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.