ಮಡಿಕೇರಿ, ಸೆ. ೨೧: ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಸ್ತರಣಾಧಿಕಾರಿ ವೀಣಾ ಅವರು, ಈ ಬಾರಿ ಡೈರಿಗೆ ಆದಾಯ ರೂ. ೩.೩೮ ಲಕ್ಷ ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆದಾಯ ಕಡಿಮೆ ಯಾಗಿರುವ ಹಿನ್ನೆಲೆ ರೈತರು ಸಂಘದ ಅಭಿವೃದ್ಧಿಗೆ ಸಹಕರಿಸಿ ಆದಾಯ ವೃದ್ಧಿಗೆ ಸಹಾಯ ಮಾಡುವಂತೆ ಹೇಳಿದರು. ಈ ಸಂದರ್ಭ ಸಂಘದ ಅಧ್ಯಕ್ಷ ನಾರಾಯಣ, ಉಪಾಧ್ಯಕ್ಷ ಜವರೇಗೌಡ, ಕಾರ್ಯದರ್ಶಿ ದಿಲೀಪ್, ನಿರ್ದೇಶಕರಾದ ಸೋಮಣ್ಣ, ಶಶಿ, ಸುಭಾಷ್, ಲಲಿತಾ ರಮೇಶ್, ರಾಗಿಣಿ ಜವರಪ್ಪ, ಹಾಲು ಪರೀಕ್ಷಕ ಲೋಕೇಶ್ ಮುಂತಾದವರು ಹಾಜರಿದ್ದರು.