ಮಡಿಕೇರಿ, ಸೆ. ೨೧: ತಿತಿಮತಿಯ ಲ್ಯಾಂಪ್ಸ್ ಅಕಾಡೆಮಿ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಮಹಾಪುರುಷರ, ಸಂತರ, ವೀರ ಮಹಿಳೆಯರ, ಸ್ವಾತಂತ್ರö್ಯ ಹೋರಾಟಗಾರರ ವೇಷಗಳನ್ನು ಧರಿಸಿ ಸ್ವಾತಂತ್ರö್ಯ ಪೂರ್ವ ಮತ್ತು ಸ್ವಾತಂತ್ರö್ಯ ನಂತರದ ಭಾರತದ ಇತಿಹಾಸವನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.