ಮುಳ್ಳೂರು, ಸೆ. ೨೧: ಕರ್ನಾಟಕ ಜಾನಪದ ಪರಂಪರೆಯ ತವರೂ ರಾಗಿದ್ದು ಮುಂದಿನ ಪೀಳಿಗೆಗಾಗಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಖಜಾಂಚಿ ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಸಮೀಪದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಅಂತರರಾಷ್ಟಿçÃಯ ಜಾನಪದ ದಿನಾಚರಣೆ ಪ್ರಯುಕ್ತ ಅಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಾನಪದ ಗಾಯನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದಿನವರು ಜೀವನದ ಅನುಭವವನ್ನು ಹಾಡಿನ ಮೂಲಕವಾಗಿ ಬಾಯಿಂದ ಬಾಯಿಗೆ ಹರಡಿಸಿದ ಜಾನಪದ ಹಾಡು ವಿವಿಧ ರೀತಿಯ ಜಾನಪದ ಪ್ರ್ರಾಕಾರಗಳಾಗಿ ಜಾನಪದ ಸೊಗಡು ತನ್ನದೆಯಾದ ಛಾಪನ್ನು ಮೂಡಿಸಿದೆ ಆದರೆ ಇಂದು ಆಧುನಿಕತೆಯಿಂದಾಗಿ ಜಾನಪದ ಸಂಸ್ಕೃತಿ ಕ್ಷೀಣಿಸುತ್ತಿರುವ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿ ಸೊಗಡಿನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.
ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮುನೀರ್ ಆಹಮ್ಮದ್ ಮಾತನಾಡಿ ಜಾನಪದ ಎಂಬುವುದು ಒಂದು ವಿಸ್ಮಯ ಮತ್ತು ಜ್ಞಾನದ ಪ್ರತೀಕವಾಗಿದೆ. ಜಾನಪದ ಹಾಡು ಮತ್ತು ಸಂಸ್ಕೃತಿಯನ್ನು ಹುಟ್ಟು ಹಾಕಿದ ಹಿಂದಿನವರು ವಿದ್ಯಾವಂತರಾಗಿರಲಿಲ್ಲ; ಆದರೂ ತನ್ನ ಜೀವನದ ಅನುಭವಗಳನ್ನು ಹಾಡಿನ ಮೂಲಕವಾಗಿ ಸಮಾಜಕ್ಕೆ ಹರಡಿದರು. ಅಷ್ಟೆ ಅಲ್ಲದೆ ಜಾನಪದ ಹಾಡಿನ ಮೂಲಕ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಲು ಕಲಿಸಿದರು ಎಂದ ಅವರು, ಬದಲಾಗುತ್ತಿರುವ ಸಮಾಜದಲ್ಲಿ ಜಾನಪದ ಸೊಗಡನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಿದೆ ಎಂದರು.
ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಈ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿಯನ್ನು ಬಿಂಬಿಸಲು ಎಲ್ಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷೆ ಡಿ.ಸುಜಲಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಂಸ್ಕೃತಿಯು ಶಿಕ್ಷಣದ ಒಂದು ಭಾಗವಾಗಿದೆ, ಹಿಂದಿನವರು ಹೊಲ, ಗದ್ದೆಗಳಲ್ಲಿ ದಿನನಿತ್ಯ ಕೆಲಸ ಮಾಡಿ ದಣಿಯುತ್ತಿದ್ದರು. ಜಾನಪದ ಹಾಡಿನ ಮೂಲಕ ಶ್ರಮವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು, ಮುಂದೆ ಇದು ಜಾನಪದದ ನಾನಾ ಪ್ರಾಕಾರಗಳಾಗಿ ಬದಲಾಗಿದೆ ಎಂದರು.ವೇದಿಕೆಯಲ್ಲಿ ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷ ಎಂ,ಎನ್.ಹರೀಶ್, ಘಟಕದ ಸದಸ್ಯರಾದ ಪೂರ್ಣಿಮಾ ಕಿರಣ್, ದಿನೇಶ್ ಮಾಲಂಬಿ, ಹೆಚ್.ಕೆ. ಭಾಸ್ಕರ್, ನಳಿನಿ ನಾಗರಾಜ್, ಎಸ್.ಆರ್. ಶೋಭಾವತಿ ಮುಂತಾದವರು ಹಾಜರಿದ್ದರು.
ಜಾನಪದ ಗಾಯನ ಸ್ಪರ್ಧೆಯಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಶನಿವಾರಸಂತೆ ಭಾರತಿ ಪ.ಪೂ. ಕಾಲೇಜಿನ ತಂಡ [ಪ್ರ], ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲಾ ತಂಡ [ದ್ವಿ] ಹಾಗೂ ಶನಿವಾರಸಂತೆ ಭಾರತಿ ಪ್ರೌಢಶಾಲಾ ತಂಡ ತೃತೀಯ ಸ್ಥಾನ ಪಡೆದುಕೊಂಡವು.