ರೂ. ೧೫.೨೬ ಕೋಟಿ ವೆಚ್ಚದ ಬಹುನಿರೀಕ್ಷಿತ ಅಮೃತ್-೨ ಯೋಜನೆಯ ಕಾಮಗಾರಿ ಆರಂಭ

ಸೋಮವಾರಪೇಟೆ, ಸೆ. ೨೧: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅಮೃತ್-೨ ಯೋಜನೆಗೆ ಪಟ್ಟಣದಲ್ಲಿ ಚಾಲನೆ ನೀಡಲಾಗಿದೆ.

ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಈಗಾಗಲೇ ಪ್ರಗತಿಯಲ್ಲಿದ್ದು, ಪಟ್ಟಣವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹು ನಿರೀಕ್ಷಿತ ಯೋಜನೆಯಾಗಿರುವ ‘ಅಮೃತ್’ಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ನೀಡಿದ್ದು, ಕಾಮಗಾರಿ ಆರಂಭಗೊAಡಿದೆ.

ಯೋಜನೆಯ ಒಟ್ಟು ವೆಚ್ಚ ೧೫.೨೬ ಕೋಟಿ ನಿರೀಕ್ಷಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.೫೦, ರಾಜ್ಯ ಸರ್ಕಾರ ಶೇ.೪೦ ಹಾಗೂ ಸ್ಥಳೀಯ ಸಂಸ್ಥೆಗಳು ಶೇ. ೧೦ ಅನುದಾನ ಭರಿಸಬೇಕಿದ್ದು, ಕಳೆದ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಇಂದಿನ ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಪಟ್ಟಣದ ಯೋಜನೆಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದ್ದರು.

ಅದರಂತೆ ಹಾರಂಗಿ ಹೊಳೆಯಿಂದ ಸೋಮವಾರಪೇಟೆಗೆ ನೀರು ಒದಗಿಸುವ ಸಂಬAಧ ತಯಾರಾದ ಯೋಜನೆಯಡಿ ಈಗಾಗಲೇ ಕೋವರ್‌ಕೊಲ್ಲಿಯವರೆಗೆ ಪೈಲ್‌ಲೈನ್ ಅಳವಡಿಸಲಾಗಿದ್ದು,

ಸದ್ಯಕ್ಕೆ ಆ ಕಾರ್ಯವನ್ನು ಸ್ಥಗಿತಗೊಳಿಸಿ ಪಟ್ಟಣದಲ್ಲಿ ಕಾಮಗಾರಿ ಆರಂಭಿಸಲಾಗಿದೆ.

(ಮೊದಲ ಪುಟದಿಂದ) ಪಟ್ಟಣದಲ್ಲಿ ಎಲ್ಲಾ ಮನೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿದ ನಂತರ ರಾಜ್ಯ ಹೆದ್ದಾರಿ ಬದಿಯಲ್ಲಿ ಪೈಪ್‌ಲೈನ್ ಅಳವಡಿಸಿ ಕೋವರ್‌ಕೊಲ್ಲಿಗೆ ಸಂಪರ್ಕಗೊಳಿಸುವ ಬಗ್ಗೆ ಅಭಿಯಂತರರು ತೀರ್ಮಾನಿಸಿದ್ದಾರೆ.

ಪಟ್ಟಣದಲ್ಲಿ ಆರಂಭಗೊAಡ ಯೋಜನೆಯ ಕಾಮಗಾರಿಗೆ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಪಟ್ಟಣದ ವಲ್ಲಭಬಾಯಿ ಬಡಾವಣೆಯಲ್ಲಿ ಚಾಲನೆ ನೀಡಿದರು.

ದೂರದೃಷ್ಟಿಯ ಯೋಜನೆ: ಪಟ್ಟಣದಲ್ಲಿ ಕಳೆದ ೪೦ ವರ್ಷಗಳ ಹಿಂದಿನಿAದ ಇರುವ ಜನಗಣತಿ, ಪ್ರಸ್ತುತದ ಜನಸಂಖ್ಯೆ, ಮುಂದಿನ ೨೦೩೬ನೇ ಇಸವಿಗೆ ಏರಿಕೆಯಾಗುವ ಜನಸಂಖ್ಯೆಗಳನ್ನು ಅಂದಾಜಿಸಿ, ಆ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆಯನ್ನು ವಿನ್ಯಾಸಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ೨೦೧೧ರ ಜನಗಣತಿಯ ಪ್ರಕಾರ ಜನಸಂಖ್ಯೆಯು ೬೭೨೯ರಷ್ಟಿದೆ. ಪ್ರಸ್ತುತ ಪಟ್ಟಣದ ಜನಸಂಖ್ಯೆಯು ಸುಮಾರು ೬೯೦೦ ಆಗಿದ್ದು, ಕಳೆದ ೪೦ ವರ್ಷಗಳ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆ ಕೇವಲ ೪೪೪ ಹೆಚ್ಚಾಗಿರುತ್ತದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ೧೧ ವಾರ್ಡ್ಗಳಿದ್ದು, ಪ್ರಸ್ತುತ ದುದ್‌ಗಲ್ ಹೊಳೆಯಿಂದ ೮೦ ಲಕ್ಷ ಲೀಟರ್ ಸಾಮರ್ಥ್ಯದ ನೀರು ಸರಬರಾಜು ಯೋಜನೆಯನ್ನು ೧೯೮೭ರಲ್ಲಿ ಚಾಲನೆಗೊಳಿಸಲಾಗಿದೆ.

ಪಟ್ಟಣ ಅಭಿವೃದ್ಧಿಯಾದಂತೆ ಹೊಸದಾಗಿ ಹಾರಂಗಿ ನದಿ ಮೂಲದಿಂದ ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಲಿನ ೫ ಹಳ್ಳಿಗಳಿಗೆ ಕ್ರಮವಾಗಿ ದಿನಂಪ್ರತಿ ತಲಾ ೭೦ ಲೀಟರ್ ಹಾಗೂ ತಲಾ ೨೫ ಲೀಟರ್‌ನಂತೆ ೨೦೩೬ನೇ ಇಸವಿಯ ೭೯೭೦ ಜನಸಂಖ್ಯೆಗೆ ೧೦.೮೦ ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಈ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯಕ್ಕೆ ತಕ್ಕಂತೆ ಅಮೃತ್-೨ ಯೋಜನೆಯನ್ನು ವಿನ್ಯಾಸಿಸಿ ಚಾಲನೆಗೊಳಿಸಲಾಗುತ್ತಿದೆ.

ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಹಾರಂಗಿ ಮತ್ತು ದುದ್‌ಗಲ್ ಹೊಳೆಯಿಂದ ನೀರು ಸರಬರಾಜು ಮಾಡುವ ೨ ಯೋಜನೆಗಳು ಚಾಲನೆಯಲ್ಲಿವೆ. ಈ ನಡುವೆ ೫ ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪಟ್ಟಣದ ಹಾಲಿ ನೀರು ಸರಬರಾಜು ಯೋಜನೆಯ ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದ್ದು, ಪ್ರಸ್ತುತ ಪಟ್ಟಣದ ನೀರಿನ ಬೇಡಿಕೆಯು ದಿನಂಪ್ರತಿ ತಲಾ ೧೩೫ ಲೀಟರ್‌ನಂತೆ ಸುಮಾರು ೧೨.೦ ಲಕ್ಷ ಲೀಟರ್‌ಗಳಷ್ಟಿವೆ.

ಹಾಲಿ ಯೋಜನೆಗಳ ಘಟಕಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಸಾಧ್ಯವಾಗಿದೆ. ಈ ಹಿನ್ನೆಲೆ ಅಮೃತ್-೨ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ಯೋಜನೆಯ ಧ್ಯೇಯ: ಕೇಂದ್ರ ಪುರಸ್ಕೃತ ಅಮೃತ್-೨ ಯೋಜನೆಯನ್ನು ಕೇಂದ್ರ ಸರ್ಕಾರವು ದಿನಾಂಕ: ೦೧-೧೦-೨೦೨೧ರಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದ್ದು, ಯೋಜನೆಯ ಕಾರ್ಯ ಮಾರ್ಗಸೂಚಿಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆಗೊಳಿಸಿದೆ.

ಅದರಂತೆ ಒಂದು ಲಕ್ಷ ಜನಸಂಖ್ಯೆಗಿAತ ಕಡಿಮೆ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ನೀರು ಸರಬರಾಜು ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಮೃತ್-೨ ಕಾರ್ಯಕ್ರಮದ ಮಾರ್ಗಸೂಚಿಯನ್ವಯ ಸಾರ್ವತ್ರಿಕವಾಗಿ ಎಲ್ಲಾ ಮನೆಗಳಿಗೆ ಕೊಳವೆ ಮುಖಾಂತರ ನೀರು ಪೂರೈಕೆ ಮತ್ತು ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವುದು, ನೀರಿನ ಸಂಗ್ರಹಣೆಯನ್ನು ಹೆಚ್ಚಿಸಲು ಜಲಮೂಲಗಳ ಪುನರುಜ್ಜೀವನ ಮತ್ತು ಹಸಿರು ಸ್ಥಳಗಳನ್ನು ಅಭಿವೃದ್ಧಿಪಡಿಸಿ ನಗರಗಳ ಸೌಲಭ್ಯದ ಮೌಲ್ಯ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯಡಿ ಸೋಮವಾರಪೇಟೆ ಪಟ್ಟಣಕ್ಕೆ ಹಾರಂಗಿ ನದಿ ಮೂಲದಿಂದ ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ೨೦೨೫ನೇ ಸಾಲಿಗೆ ಎಲ್ಲಾ ಮನೆಗಳಿಗೆ ನೀರು ಸರಬರಾಜು ವ್ಯವಸ್ಥೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈಗಾಗಲೇ ಹೊರಭಾಗದ ಕಾಮಗಾರಿಯಡಿ ಕೋವರ್‌ಕೊಲ್ಲಿವರೆಗೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಪಟ್ಟಣದ ೧೭೦೦ ಮನೆಗಳಿಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಮಾಡಿ ನಲ್ಲಿ ಸಂಪರ್ಕ ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮುಂದುವರೆದು ಈ ಯೋಜನೆಯಡಿ ಜಾಕ್ವೆಲ್ ಮತ್ತು ಪಂಪ್‌ಹೌಸ್‌ನಲ್ಲಿ ೩೦ ಹೆಚ್.ಪಿ. ಸಾಮರ್ಥ್ಯದ ಪಂಪಿAಗ್ ಮೆಷಿನರಿ ಅಳವಡಿಸುವುದು, ಯಡವನಾಡು ಗ್ರಾಮದಲ್ಲಿರುವ ಮಧ್ಯಂತರ ಪಂಪ್‌ಹೌಸ್‌ನಲ್ಲಿ ೧೦೦ ಹೆಚ್.ಪಿ. ಸಾಮರ್ಥ್ಯದ ಪಂಪಿAಗ್ ಮೆಷಿನ್ ಅಳವಡಿಕೆ, ಬೇಳೂರಿನಲ್ಲಿರುವ ೧೨ ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಪುನರುಜ್ಜೀವನ, ಬೇಳೂರಿನಲ್ಲಿ ಪಟ್ಟಣದವರೆಗೆ ಹೆಚ್‌ಡಿಪಿಇ ಗುರುತ್ವಾಕರ್ಷಣಾ ಕೊಳವೆ ಪೈಪ್‌ಗಳ ಅಳವಡಿಕೆ, ಪಟ್ಟಣದ ಪಂಪ್‌ಹೌಸ್‌ನಲ್ಲಿ ೨೫ ಹೆಚ್.ಪಿ. ಸಾಮರ್ಥ್ಯದ ಮೋಟಾರ್ ಅಳವಡಿಕೆ, ಹಾಲಿ ಇರುವ ಘಟಕಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಈ ಯೋಜನೆ ಒಳಗೊಂಡಿದೆ.

ಮುAದಿನ ೩೦ ವರ್ಷಗಳ ದೂರದೃಷ್ಟಿಯ ಯೋಜನೆ ಇದಾಗಿದ್ದು, ಅಮೃತ್-೨ ಯೋಜನೆಯು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ವರದಾನವಾಗಿದೆ.