*ಗೋಣಿಕೊಪ್ಪ, ಸೆ. ೨೧: ಗೋಣಿಕೊಪ್ಪ ದಸರಾ ಅಂಗವಾಗಿ ಕಾವೇರಿ ದಸರಾ ಸಮಿತಿ ವತಿಯಿಂದ ಅ. ೫ ರಂದು ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಯುವ ದಸರಾದಂದು ಎಲ್ಲಾ ವಯೋಮಾನದವರಿಗಾಗಿ ಜಿಲ್ಲಾ ಮಟ್ಟದ ಸೈಕ್ಲಾಥಾನ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೮ ಗಂಟೆಗೆ ಗೋಣಿಕೊಪ್ಪಲು ದಸರಾ ಮೈದಾನದಲ್ಲಿ ಪ್ರಾರಂಭವಾಗುವ ಸೈಕ್ಲಾಥಾನ್ (ಸೈಕಲ್ ರೇಸ್) ೧೪ ವರ್ಷ ಒಳಗಿನ ಬಾಲಕರ ವಿಭಾಗ, ೧೫ ರಿಂದ ೧೮ ವರ್ಷದೊಳಗಿನ ಬಾಲಕರ ವಿಭಾಗ, ೧೮ ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗಾಗಿ, ಮಹಿಳೆಯರಿಗೆ ಮುಕ್ತ ಸೈಕಲ್ ರೇಸ್ ನಡೆಯಲಿದೆ.

ದಸರಾ ಮೈದಾನದಿಂದ ಹೊರಟು ಮಾರ್ಕೆಟ್ ಮೂಲಕ ಪಟೇಲ್ ನಗರ, ಕೊಪ್ಪ ಪಾಲಿಬೆಟ್ಟ ರಸ್ತೆ ಮೂಲಕ ಅತ್ತೂರು ಶಾಲೆ, ಗದ್ದೆಮನೆ ಮೂಲಕ ಕಳತ್ಮಾಡು ಪಡಿಕಲ್ ಜಂಕ್ಷನ್ ನಂತರ ಕೈಕೇರಿಯಿಂದ ಮುಖ್ಯರಸ್ತೆಯಾಗಿ ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನದಿಂದ ದಸರಾ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.

ಮಧ್ಯಾಹ್ನ ೨ ಗಂಟೆಗೆ ೨೧ ವರ್ಷ ವಯೋಮಾನದೊಳಗಿನ ಪುರುಷ ಹಾಗೂ ಮಹಿಳೆಯರ ವಿಭಾಗಕ್ಕೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ. ಏಳು ಜನರ ಒಂದು ತಂಡವು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಶರತ್ ಕಾಂತ್ ೯೪೪೯೨೬೦೦೫೩ ಅಥವಾ ರಮೇಶ್ ೭೭೬೦೮೦೩೭೮೩ ಇವರನ್ನು ಸಂಪರ್ಕಿಸಿ ತಾ. ೩೦ ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ದಸರಾ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.