ಕೊಡ್ಲಿಪೇಟೆ, ಸೆ. ೨೧: ಸಮೀಪದ ಹ್ಯಾಂಡ್‌ಪೋಸ್ಟ್ನ ಮಸ್ಜಿದುನ್ನೂರ್‌ನಲ್ಲಿ ನಾಲ್ಕು ದಿನಗಳ ಕಾಲ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮ ಸಡಗರದಿಂದ ನಡೆಯಿತು.

ಹ್ಯಾಂಡ್‌ಪೋಸ್ಟ್, ಕಲ್ಲುಕೋರೆ ಹಾಗೂ ಬ್ಯಾಡಗೊಟ್ಟ ಮದ್ರಸಗಳ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ ಹಾಗೂ ಯೂತ್ ಮೀಲಾದ್ ಜಲ್ಸಾದಲ್ಲಿ ಪ್ರವಾದಿ ಅವರ ಕೀರ್ತನೆಗಳ ಹಾಡು, ಭಾಷಣ, ಕವಾಲಿ, ಬುರ್ದಾ ಮಜ್ಲಿಸ್‌ಗಳು ಸೇರಿದಂತೆ ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರವಾದಿಯವರ ಸಂದೇಶ ಸಾರುವ ಮಿಲಾದ್ ಸಂದೇಶ ಜಾಥಾ ಬ್ಯಾಡಗೊಟ್ಟ ಮದ್ರಸ ಮುಂಭಾಗದಿAದ ಹ್ಯಾಂಡ್‌ಪೋಸ್ಟ್ ಮತ್ತು ದೊಡ್ಡಕುಂದ ಸರ್ಕಲ್ ಮೂಲಕ ಸಾಗಿ ನೂರ್ ಮಹಲ್‌ನಲ್ಲಿ ಅಂತ್ಯಗೊAಡಿತು. ವಿದ್ಯಾರ್ಥಿಗಳ ದಫ್ ಹಾಗೂ ಪ್ಲವರ್ ಶೋ ಮತ್ತು ಸ್ಕೌಟ್ ರ‍್ಯಾಲಿಗಳು ಆಕರ್ಷಿಸಿದವು.

ಹ್ಯಾಂಡ್‌ಪೋಸ್ಟ್ ವೃತ್ತದಲ್ಲಿ ಪ್ರಮುಖರಾದ ಕೆ.ಹೆಚ್. ಅಬ್ದುಲ್ ಮಜೀದ್ ಅವರು ಪ್ರವಾದಿ ಮುಹಮ್ಮದ್ ಮುಸ್ತಫಾ ಅವರು ಸಾರಿದ ಭ್ರಾತೃತ್ವದ ಸಂದೇಶವನ್ನು ವಿವರಿಸಿದರು. ನಂತರ ನೂರ್‌ಮಹಲ್‌ನಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಪ್ರೀತಂ ಡಿ. ಶ್ರೇಯಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರವಾದಿಗಳಂತಹ ಪುಣ್ಯ ಪುರುಷರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು. ಉಸ್ತಾದ್ ಅಸ್ಲಂ ಅಝ್ಹರಿ ಹಾಗೂ ಉಸ್ತಾದ್ ಮೂಸ ಮುಸ್ಲಿಯಾರ್ ಅವರಿಂದ ‘ಕುಟುಂಬ ಜೀವನ ಹಾಗೂ ಯುವತ್ವ’ ಎಂಬ ವಿಷಯಗಳಲ್ಲಿ ಧಾರ್ಮಿಕ ಪ್ರಭಾಷಣ ನಡೆಯಿತು.

ಸ್ವಲಾತ್ ವಾರ್ಷಿಕೋತ್ಸವದಲ್ಲಿ ಸಯ್ಯದ್ ಝೈನುಲ್ ಆಬಿದೀನ್ ಅಲ್ ಬುಖಾರಿ ತಂಙಳ್ ಎಣ್ಮೂರು ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಸ್ಜಿದುನ್ನೂರ್ ಧರ್ಮಗುರು ಮಹಮ್ಮದ್ ಶಾಫಿ ಫೈಝಿ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಸಮೀಪದ ವಿವಿಧ ಮೊಹಲ್ಲಾಗಳ ಮಸೀದಿಗಳ ಧರ್ಮಗುರುಗಳು ಹಾಗೂ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ. ಅಬೂಬಕ್ಕರ್ ಸಿದ್ದಿಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್, ಉಪಾಧ್ಯಕ್ಷ ಡಿ.ಎ. ಸುಲೈಮಾನ್, ಕಾರ್ಯದರ್ಶಿಗಳಾದ ಮುನೀರ್, ಹಾರೂನ್ ರಶೀದ್, ಖಜಾಂಜಿ ಬಾಸಿತ್, ನಿರ್ದೇಶಕರುಗಳಾದ ಸಾಬ್ಜಾನ್, ಝಖಾರಿಯ, ಅಜೀಜ್, ಹಂಸ, ರಹೀಂ, ಹಮೀದ್, ದಾವೂದ್, ಖಾದರ್, ನೂರ್ ಯೂತ್ ಸಮಿತಿಯ ಅಧ್ಯಕ್ಷ ಬಾಸಿತ್ ಹಾಜಿ, ಉಪಾಧ್ಯಕ್ಷ ಹನೀಫ್ ಕಿರಿಕೊಡ್ಲಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಕಾರ್ಯದರ್ಶಿಗಳಾದ ಸಿದ್ದಿಕ್, ರಮೀಝ್, ಖಜಾಂಜಿ ಫಾರೂಕ್ ಮತ್ತು ಸಮಿತಿಯ ಪದಾಧಿಕಾರಿಗಳು ಮತ್ತು ಮದ್ರಸ ಅಧ್ಯಾಪಕರುಗಳು ಹಾಜರಿದ್ದರು.