ಚಂದ್ರಮೋಹನ್

ಕುಶಾಲನಗರ, ಸೆ. ೨೧: ತಾಲೂಕು ಕೇಂದ್ರ ಕುಶಾಲನಗರ ಪೊಲೀಸ್ ಠಾಣೆ ಮೇಲ್ದರ್ಜೆಗೇರಿದರೂ ಠಾಣೆಗಳಲ್ಲಿ ಇರುವುದು ಬೆರಳೆಣಿಕೆಯ ಪೊಲೀಸ್ ಸಿಬ್ಬಂದಿಗಳು. ಅದರಲ್ಲಿ ಓರ್ವ ಎ.ಎಸ್.ಐ ಸೇರಿದಂತೆ ೮ ಮಂದಿ ಶಿವಮೊಗ್ಗಕ್ಕೆ, ಉಳಿದ ಕೆಲವರು ನಾಗಮಂಗಲಕ್ಕೆ, ಇನ್ನುಳಿದಂತೆ ಸುಂಟಿಕೊಪ್ಪ ಸೋಮವಾರಪೇಟೆ, ಹೊಸಕೋಟೆ ಮತ್ತು ಸ್ಥಳೀಯ ವ್ಯಾಪ್ತಿಯಲ್ಲಿ ಗಣೇಶ ಕಾರ್ಯಕ್ರಮಗಳ ಬಂದೋಬಸ್ತಿಗೆ ನಿಯೋಜನೆ ಆಗಿದ್ದಾರೆ.

ಠಾಣೆಯಲ್ಲಿ ಕೇವಲ ಒಬ್ಬರು ಎಸ್‌ಐ ಇಬ್ಬರು ಎಎಸ್‌ಐ ಮತ್ತು ಇಬ್ಬರು ಮಹಿಳಾ ಸೆಂಟ್ರಿಗಳನ್ನು ಮಾತ್ರ ಕಾಣಬಹುದು. ಇವರುಗಳು ಕಳೆದ ಕೆಲವು ದಿನಗಳಿಂದ ಹಗಲು ರಾತ್ರಿ ವಿಶ್ರಾಂತಿ ಇಲ್ಲದೆ ನಿರಂತರ ಡ್ಯೂಟಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ಕೆಲವು ದಿನಗಳಿಂದ ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳ ಸಿಬ್ಬಂದಿ ಅಧಿಕಾರಿಗಳು ಒತ್ತಡದ ಕೆಲಸ ಕಾರ್ಯಗಳ ನಡುವೆ ಇಡೀ ಜಿಲ್ಲೆಯ ರಕ್ಷಣಾ ವ್ಯವಸ್ಥೆಯನ್ನು ಕಾಪಾಡಬೇಕಾದ ನಿಗೂಢ ಸ್ಥಿತಿ ಎದುರಿಸುವಂತಾಗಿದೆ.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ನಾಗರಿಕರು ಮಾನವ ಸರಪಳಿ ರಚಿಸುವ ಕಾರ್ಯಕ್ರಮ ಸಂದರ್ಭ ಪೊಲೀಸ್ ಸಿಬ್ಬಂದಿಗಳ ಗೈರು ಬಗ್ಗೆ ವಿಚಾರಿಸಲು ಸ್ಥಳೀಯ ಠಾಣೆಗಳಿಗೆ ತೆರಳಿದ ‘ಶಕ್ತಿ’ಗೆ ಕಂಡು ಬಂದ ವಾಸ್ತವಾಂಶ ಇದಾಗಿತ್ತು...!

ಕಳೆದ ಕೆಲವು ದಿನಗಳಿಂದ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾರ್ಯಕ್ರಮ ನಿಮಿತ್ತ ಭದ್ರತೆ ಕಲ್ಪಿಸಲು ತೆರಳುವ ಈ ಬೆರಳೆಣಿಕೆಯಷ್ಟು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಒತ್ತಡದ ನಡುವೆ ಸೇವೆ ಸಲ್ಲಿಸುತ್ತಿರು ವುದು ಸಾಮಾನ್ಯ ಬೆಳವಣಿಗೆಯಾಗಿದೆ.

ಈ ನಡುವೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಲಭೆ ಗಳಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಕಲ್ಪಿಸಲು ಇಲ್ಲಿನ ಪೊಲೀಸರುಗಳನ್ನು, ಅಧಿಕಾರಿಗಳನ್ನು ನಿಯೋಜಿಸ ಲಾಗುತ್ತಿದೆ.

ವಾರಗಟ್ಟಲೆ ಕಾಲ ಅವರು ಅಲ್ಲಿಯೇ ಸೇವೆ ಸಲ್ಲಿಸಬೇಕಾಗುತ್ತದೆ. ಕಳೆದ ಕೆಲವು ದಿನಗಳಿಂದ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾರ್ಯಕ್ರಮ ನಿಮಿತ್ತ ಭದ್ರತೆ ಕಲ್ಪಿಸಲು ತೆರಳುವ ಈ ಬೆರಳೆಣಿಕೆಯಷ್ಟು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಒತ್ತಡದ ನಡುವೆ ಸೇವೆ ಸಲ್ಲಿಸುತ್ತಿರು ವುದು ಸಾಮಾನ್ಯ ಬೆಳವಣಿಗೆಯಾಗಿದೆ.

ಈ ನಡುವೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಲಭೆ ಗಳಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಕಲ್ಪಿಸಲು ಇಲ್ಲಿನ ಪೊಲೀಸರುಗಳನ್ನು, ಅಧಿಕಾರಿಗಳನ್ನು ನಿಯೋಜಿಸ ಲಾಗುತ್ತಿದೆ.

ವಾರಗಟ್ಟಲೆ ಕಾಲ ಅವರು ಅಲ್ಲಿಯೇ ಸೇವೆ ಸಲ್ಲಿಸಬೇಕಾಗುತ್ತದೆ. ಜೊತೆಗೆ ಬಂದಿರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ನಡೆಯುತ್ತಿರುವ ಮೆರವಣಿಗೆಗೆ ಕಲ್ಪಿಸಬೇಕಾದ ಭದ್ರತೆ ಕೂಡ ಇವರ ಹೊಣೆಯಾಗಿದೆ. ಕುಶಾಲನಗರ ಸೋಮವಾರಪೇಟೆ ತಾಲೂಕುಗಳಿಗೆ ಮೀಸಲಾದ ಜಿಲ್ಲಾ ಮತ್ತು ರಾಜ್ಯ ಮೀಸಲು ತುಕುಡಿಗಳು ಕೂಡ ಅಲ್ಲಿನ ಭದ್ರತೆಗಾಗಿ ಹೊರ ಜಿಲ್ಲೆಗೆ ತೆರಳಬೇಕಾದ ಅನಿವಾರ್ಯತೆ ಕೂಡ ಉಂಟಾಗಿದೆ.

ಇದೀಗ ಮುಂಬರುವ ದಸರಾ ನಂತರ ತಲಕಾವೇರಿ ತೀರ್ಥೋದ್ಭವ ಕಾರ್ಯಕ್ರಮ ಈ ಎಲ್ಲಾ ಕಾರ್ಯಕ್ರಮಗಳಿಗೆ ಭದ್ರತೆ ಕಲ್ಪಿಸಲು ಇದೇ ಪೊಲೀಸರು ಮತ್ತೆ ಹೆಣಗಾಡಬೇಕಾಗಿದೆ.

ಜಿಲ್ಲೆಗೆ ಆಗಮಿಸುವ ಮತ್ತು ಜಿಲ್ಲೆ ಮೂಲಕ ತೆರಳುವ ವಿಐಪಿಗಳಿಗೆ ಭದ್ರತೆ ಕಲ್ಪಿಸಲು ಕೂಡ ಇದೇ ಪೊಲೀಸರು ಸಾಗಬೇಕಾಗಿದ್ದು ಜೊತೆಗೆ ಹೆದ್ದಾರಿ ಗಸ್ತು ಮತ್ತು ೧೧೨ ವಾಹನಗಳು ಕೂಡ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಹಗಲು ರಾತ್ರಿ ಓಡಾಡುತ್ತಿರುವುದು ಶಕ್ತಿಗೆ ಗೋಚರಿಸಿದ ದೃಶ್ಯ.

ಒಟ್ಟಾರೆ ಕೊಡಗು ಜಿಲ್ಲೆಗೆ ಸರಕಾರ ಕೂಡಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅಧಿಕಾರಿಗಳನ್ನು ನೇಮಕ ಮಾಡಬೇಕಾದ ಅನಿವಾರ್ಯತೆ ಅಗತ್ಯವಾಗಿ ಇದೆ. ಈ ಸಂಬAಧ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸರ್ಕಾರದ ಗಮನ ಸೆಳೆಯಬೇಕಾಗಿದೆ.