ಗುಡ್ಡೆಹೊಸೂರು, ಸೆ. ೨೧: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೪೩ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಮಂತರ್ ಗೌಡ ಅವರು ಭೂಮಿಪೂಜೆ ನಡೆಸಿದರು. ಬಸವನಹಳ್ಳಿಯ ಗಿರಿಜನ ಕಾಲೋನಿ ಯಲ್ಲಿ ರೂ. ೧೦ ಲಕ್ಷದ ಕಾಮಗಾರಿ, ಬಾಳುಗೋಡುವಿನ ಚಿಕ್ಲಿಹೊಳೆ ನಾಲಾ ವ್ಯಾಪ್ತಿಯಲ್ಲಿ ರೂ. ೨೩ ಲಕ್ಷದ ಕಾಂಕ್ರೀಟ್ ರಸ್ತೆ ಮತ್ತು ದೊಡ್ಡ ಬೆಟ್ಟಗೇರಿಯಲ್ಲಿ ೧೦ ಲಕ್ಷ ಹಣದಲ್ಲಿ ರಸ್ತೆ ಕಾಮಗಾರಿಗೆ ಶಾಸಕÀ ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಗ್ಯಾರಂಟಿ ಅನುದಾನ ಯೋಜನೆಯ ಅಧ್ಯಕ್ಷ ವಿ.ಪಿ. ಶಶಿಧರ್, ಮುಖಂಡ ರಾದ ಕೆ.ಪಿ. ಚಂದ್ರಕಲಾ, ಕೂಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಂಗಾರು ಜಗ್ಗ ಬಿ.ಸಿ. ಚೇತನ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕುಡೆಕ್ಕಲ್ ಚಿದಾನಂದ, ಭರತ್ ಎಂ.ಯು. ಹಾಗೂ ಗ್ರಾಮಸ್ಥರು ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ವಿವಿಧ ಅನುದಾನದ ಮತ್ತು ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣ ಗೊಳಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.