ವೀರಾಜಪೇಟೆ, ಸೆ. ೨೦: ಮನುಷ್ಯ ಆರೋಗ್ಯವಾಗಿರಲು ಉತ್ತಮ ನಗುವನ್ನು ಕಲಿಯಬೇಕು ಆಗ ಮಾತ್ರ ಶರೀರದಲ್ಲಿ ಶಕ್ತಿ ಹೆಚ್ಚುತ್ತದೆ ಎಂದು ಮೈಸೂರಿನ ಖ್ಯಾತ ಸಾಹಿತಿ ಮತ್ತು ಚುಕ್ಕಿಚಿತ್ರ ಕಲಾವಿದ ಮೋಹನ್ ವರ್ಣೇಕರ್ ಹೇಳಿದರು.
ಸಮೀಪದ ಅರಮೇರಿ ಕಳಂಚೇರಿ ಮಠದ ಲಿಂಗರಾಜೇAದ್ರ ಭವನದಲ್ಲಿ ನಡೆದ ‘ಹೊಂಬೆಳಕು ಕಿರಣ ೨೨೩ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಆರೋಗ್ಯವಾಗಿರೋಣ' ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಮನುಷ್ಯ ಮಾತ್ರ ನಗಲು ಸಾಧ್ಯ. ಜೀವನದ ನೆಮ್ಮದಿಗೆ ನಗುವೇ ಮುಖ್ಯ. ಎಷ್ಟೇ ಅಲಂಕಾರ ಮಾಡಿಕೊಂಡರೂ ಮುಖದಲ್ಲಿ ನಗುಇಲ್ಲದಿದ್ದರೆ ಪ್ರಯೋಜನವಿಲ್ಲ, ಕೋಪಬಂದ ಸಂದರ್ಭ ನಗುವಿಗೆ ಸ್ಪಂದಿಸುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಷ್ಟೇ ಒತ್ತಡಗಳಿದ್ದರೂ ನಗುವುದು ನಾಗರಿಕತೆಯ ಆರೋಗ್ಯವಾಗಿರುತ್ತದೆ ಎಂದರು.
ವೀರಾಜಪೇಟೆಯ ವೈದ್ಯ, ಪಕ್ಷಿ ತಜ್ಞರಾದ ಎಸ್.ವಿ. ನರಸಿಂಹನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಾದ ಮೋಹನ್ ವರ್ಣೇಕರ್ ಕನ್ನಡ ನಾಡಿನಲ್ಲಿ ಉತ್ತಮ ಕಲಾವಿದರಾಗಿ ೧೬ ಪ್ರಶಸ್ತಿ ಹಾಗೂ ೯೦ ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ. ಇವರು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರು ವಿಧಾನ ಸೌಧದಲ್ಲಿಯೂ ಸೇವೆ ಸಲ್ಲಿಸಿ ಈಗ ಮೈಸೂರಿನಲ್ಲಿ ವಾಸವಿದ್ದು, ಇವರ ಕಲೆ ಮುಂದೆಯು ಜೀವಂತವಾಗಿರಲಿ ಎಂದು ಆಶಿಸಿದರು.
ಹೊಂಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ, ನಗುವುದಕ್ಕೆ ಯಾವುದೇ ವಯಸ್ಸಿನ ಇತಿಮಿತಿ ಇಲ್ಲ. ಮನುಷ್ಯನ ದ್ವೇಷವನ್ನು ದೂರಮಾಡಲು ನಗುಮುಖ್ಯ. ಆದರೆ ಉತ್ತಮ ಬೆಳವಣಿಗೆಯ ನಗು ಆಗಿರಲಿ, ಈಗಾಗಲೇ ಎಲ್ಲರನ್ನು ನಗಿಸಲು ಹಾಸ್ಯರೂಪದಲ್ಲಿ ಉದ್ಯೋಗವೇ ಆಗಿದೆ. ಸಮಸ್ಯೆಯ ನಗುಬೇಡ ನಮ್ಮೊಳಗೆ ನಾವು ನೆಮ್ಮದಿಯನ್ನು ಕಾಣಲು ಹೃದಯದ ನಗು ಅಗತ್ಯ. ಜೀವನದಲ್ಲಿ ಕಲೆಗಳನ್ನು ರೂಡಿಸಿಕೊಳ್ಳುವುದು ಉತ್ತಮ ಎಂದು ಸ್ವಾಮೀಜಿ ನುಡಿದರು. ವಿದ್ಯಾರ್ಥಿ ದೀಪ್ತಿ ಸ್ವಾಗತಿಸಿ, ದಿವ್ಯ ದರ್ಶಿನಿ ನಿರೂಪಿಸಿದರೆ, ಸುಶ್ಮಿತಾ ವಂದಿಸಿದರು.