ವೀರಾಜಪೇಟೆ, ಸೆ. ೨೦: ಕನ್ನಡ ಭಾಷೆಯ ವರ್ಣ ಮಾಲೆಯು ವೈಜ್ಞಾನಿಕ ರೀತಿಯಲ್ಲಿದ್ದು ಉಚ್ಚಾರಣೆ ಬರವಣಿಗೆ ಎಲ್ಲವೂ ಅತ್ಯಂತ ಸುಲಲಿತವಾಗಿರುವುದು ವಿಶಿಷ್ಟ ಕನ್ನಡದ ವರ್ಣಮಾಲೆಯ ಅಕ್ಷರಗಳು ವೈಜ್ಞಾನಿಕವಾಗಿದ್ದು ಉಚ್ಚಾರಣೆ, ಬರವಣಿಗೆ ಎಲ್ಲವನ್ನು ಸುಲಲಿತವಾಗಿ ಮಾಡಬಹುದಾಗಿರುವುದು ವಿಶಿಷ್ಠ. ಈ ರೀತಿ ಸುಲಲಿತವಾದ ಭಾಷೆಯನ್ನು ಬೇರೆ ಯಾವ ಭಾಷೆಯಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಗೋಣಿಕೊಪ್ಪದ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಾಳೇಟಿರ ಡಾ ಕಾವೇರಪ್ಪ ಅಭಿಪ್ರಾಯಪಟ್ಟರು.
ವೀರಾಜಪೇಟೆಯಲ್ಲಿ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕೊಡಗಿನ ಪಾತ್ರ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯ ಇಂದು ಸುವರ್ಣ ಸಂಭ್ರಮದಲ್ಲಿದೆ. ಹಿಂದೆ ಹರಿದು ಹಂಚಿಹೋಗಿದ್ದ ರಾಜ್ಯದ ಭಾಗಗಳನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯವಾಗಿಸಲಾಯಿತು. ಆದರೂ ಗಡಿ ರಾಜ್ಯದ ಜನರು ರಾಜ್ಯದ ಭಾಷೆಯನ್ನು ಬಲವಂತವಾಗಿ ಕಲಿಯುವ ಅನಿವಾರ್ಯತೆಯಲ್ಲಿದ್ದಾರೆ. ಏನೆ ಇದ್ದರು ರಾಜ್ಯವನ್ನು ಒಗ್ಗೂಡಿಸಲು ಅನೇಕ ಮಹನಿಯರ ಹೋರಾಟ ಅನನ್ಯವಾಗಿದೆ ಎಂದು ಹೇಳಿದರು.
ಮೈಸೂರು ಪೀಪಲ್ಸ್ ಪಾರ್ಕ್ನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ಕರ್ನಾಟಕದ ಅಭಿವೃದ್ಧಿಯಲ್ಲಿ ಕೊಡಗಿನ ಪಾತ್ರ ಎಂಬ ವಿಚಾರ ಮಂಡಿಸಿ ಮಾತನಾಡಿ, ಕೊಡಗಿಗೆ ಹೊರಗಿನಿಂದ ಬಂದವರಿಗೆ ಇಲ್ಲಿನ ಉತ್ತಮ ಗಾಳಿ, ನೀರು ಪರಿಸರ ಆಹ್ಲಾದ ನೀಡುತ್ತದೆ. ಇಲ್ಲಿನ ಜಲ ಉತ್ತಮ ಗುಣಮಟ್ಟದಾಗಿದೆ. ಜೊತೆಗೆ ದೇಶಕ್ಕೆ ಕೊಡಗು ಕಾಫಿ ಮೂಲಕ ಶೇ. ೩೩ ರಷ್ಟು ಆದಾಯದ ಕೊಡುಗೆ ನೀಡುತ್ತಿದೆ. ಭಾರತ ದೇಶ ಸರಾಸರಿ ಶೇ. ೨೧ ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ನಮ್ಮ ಕರ್ನಾಟಕ ರಾಜ್ಯ ಶೇ. ೨೩ ರಷ್ಟು ಅರಣ್ಯ ಹೊಂದಿದ್ದು ಅದರಲ್ಲಿ ಕೊಡಗು ಶೇ. ೩೩ ರಷ್ಟು ಅರಣ್ಯವನ್ನು ಹೊಂದಿದೆ. ಕೊಡಗಿನ ಹಿರಿಯರ ದೇವರ ಕಾಡು ಎಂಬ ಪರಿಕಲ್ಪನೆ ದೇಶದ ಯಾವ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ. ನಾವು ಮೂಢನಂಬಿಕೆಗಳೆAದರು ಹಿರಿಯರು ದೇವರ ಹೆಸರಿನಲ್ಲಿ ಕಾಡನ್ನು ಉಳಿಸಿ ಬೆಳೆಸಿದ್ದು ಇಂದಿಗೂ ಈ ಕಾಡು ಕೊಡಗಿನಲ್ಲಿ ಪರಿಸರಕ್ಕೆ ತನ್ನದೆ ಕೊಡುಗೆ ನೀಡುತ ಬಂದಿದೆ. ಈ ಮೂಲಕ ಈ ಕಾಡಿನ ಉv್ಪÀನ್ನಗಳಿಂದ ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ವಕೀಲ ಮಾದಂಡ ಪೂವಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ವೀರಾಜಪೇಟೆ ತಾಲೂಕು ಅಧ್ಯಕ್ಷ ಜಾನ್ಸನ್, ಕವಿಗಳಾದ ವೈಲೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ವಹಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ. ಬಸವರಾಜು ಸಹಾಯಕ ಪ್ರಾಧ್ಯಪಕ ಆರ್. ರಘುರಾಜು ಉಪಸ್ಥಿತರಿದ್ದರು.