ಮಡಿಕೇರಿ, ಸೆ. ೨೦: ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ತಾ. ೨೨ರಂದು ಜೂನಿಯರ್ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ಧನ, ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮಗಳೂ ನಡೆಯಲಿವೆ.
ಸಂಘದಲ್ಲಿ ಪಾಲು ಬಂಡವಾಳ ರೂ. ೨,೯೦,೪೯,೭೦೦, ಕ್ಷೇಮ ನಿಧಿ ರೂ. ೮೭,೦೦,೦೭೩, ಇತರೆ ನಿಧಿ ರೂ. ೯೫೭೫೧೨೩, ಠೇವಣಿಗಳು ರೂ. ೧೨,೯೦,೦೯,೧೦೪ ದುಡಿಯುವ ಬಂಡವಾಳ ರೂ. ೧೭,೭೭,೧೧,೫೫೨, ಪ್ರಸಕ್ತ ವರ್ಷ ರೂ. ೬,೦೫,೪೦,೭೦೦ ಸಾಲ ನೀಡಲಾಗಿದೆ.
ಒಟ್ಟು ರೂ. ೩೩,೫೭,೭೫,೧೪೭.೪೦ ವ್ಯವಹಾರ ನಡೆದಿದ್ದು, ಲಾಭ ರೂ. ೨೪,೩೭,೦೭೧.೬೧ ಲಾಭ ದೊರೆತಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.