ಮಡಿಕೇರಿ, ಸೆ. ೧೯: ಹಾತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವೂ ೨೦೨೩-೨೪ನೇ ಸಾಲಿನಲ್ಲಿ ರೂ. ೧೩೨.೮೫ ಕೋಟಿ ವ್ಯವಹಾರ ನಡೆಸಿ ರೂ. ೪೦.೧೩ ಲಕ್ಷ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ. ೧೪ ರಷ್ಟು ಡಿವಿಡೆಂಡನ್ನು ಘೋಷಣೆ ಮಾಡಲಾಗಿದೆ.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ೨೦೨೨-೨೩ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನೀಡುವ ಬಹುಮಾನದಲ್ಲಿ ರಾಜ್ಯಮಟ್ಟದಲ್ಲಿ ನಮ್ಮ ಸಂಘವೂ ತೃತೀಯ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನಾ ಪ್ರಶಸ್ತಿ ಮತ್ತು ರೂ. ೫೦,೦೦೦ ನಗದು ಬಹುಮಾನವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಕೊಡಂದೇರ ಪಿ. ಗಣಪತಿಯವರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಸಂಘವೂ ಪಾರದರ್ಶಕವಾಗಿ ಸದಸ್ಯರ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದೆ. ಸಂಘದಲ್ಲಿ ೧೦೧೮ ಜನ ಸದಸ್ಯರಿದ್ದು, ಅವರ ಪಾಲುಹಣ ೧.೧೯ ಕೋಟಿ ಇದ್ದು, ಸಂಘದ ಕ್ಷೇಮಾನಿಧಿ ೧.೦೭ ಕೋಟಿ ರೂ. ಇರುತ್ತದೆ. ಸಂಘವೂ ರೂ. ೨೭.೦೭ ಕೋಟಿ ಯುವ ಬಂಡವಾಳವನ್ನು ಹೊಂದಿದೆ. ಸಂಘವೂ ೨೦೨೩-೨೪ನೇ ಸಾಲಿನಲ್ಲಿ ರೂ. ೧೬.೫೯ ಕೋಟಿ ವಿವಿಧ ರೀತಿಯ ಠೇವಣಿ ಸಂಗ್ರಹಣೆಯನ್ನು ಹೊಂದಿದ್ದು, ಸಂಘವೂ ಸದಸ್ಯರು ಮತ್ತು ಸದಸ್ಯೇತರರಿಗೆ ೨೦೨೩-೨೪ನೇ ಸಾಲಿನಲ್ಲಿ ರೂ. ೨೫.೯೧ ಕೋಟಿ ವಿವಿಧ ರೀತಿಯ ಸಾಲಗಳನ್ನು ನೀಡಿ ಸದಸ್ಯರ ಸಾಲದ ಬೇಡಿಕೆಯನ್ನು ಈಡೇರಿಸುವಲ್ಲಿ ಸಫಲವಾಗಿದೆ.
ಸಾಲ ವಸೂಲಾತಿಯೂ ಶೇ. ೯೯.೯೯ ರಷ್ಟು ಯಾವುದೇ ರೀತಿಯ ಎನ್ಪಿಎ ಇರುವುದಿಲ್ಲ. ಸಂಘದಲ್ಲಿ ಕೆಸಿಸಿ ಫಸಲು ಸಾಲ ಪಡೆದ ರೈತ ಸದಸ್ಯರು ಮೃತಪಟ್ಟಲ್ಲಿ ಸಂಘದ ಸಾಲಮನ್ನಾ ಯೋಜನೆಯಂತೆ ಅವರ ಸಾಲದಲ್ಲಿ ರೂ. ೨೫೦೦೦ವನ್ನು ಮನ್ನಾ ಮಾಡಲಾಗುತ್ತಿದೆ. ಸಂಘವೂ ಹತ್ಯಾರು ವಿಭಾಗವನ್ನು ಹೊಂದಿದ್ದು, ಸಂಘದ ಸದಸ್ಯರಿಗೆ ಅವಶ್ಯಕತೆ ಇರುವ ರಸಗೊಬ್ಬರಗಳು, ಕ್ರಿಮಿನಾಶಕ ಮತ್ತು ಕೀಟನಾಶಕ, ಹತ್ಯಾರು ಸಾಮಗ್ರಿಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಸುಣ್ಣ ಮಾರಾಟದ ವ್ಯವಸ್ಥೆ, ಜೆರಾಕ್ಸ್ ಯಂತ್ರ, ಕಾಫಿ ಔಟ್ಟರ್ನ್ ಯಂತ್ರವನ್ನು ಹೊಂದಿದ್ದು, ಇದರಿಂದ ವಾರ್ಷಿಕವಾಗಿ ಸದರಿ ವರ್ಷದಲ್ಲಿ ರೂ. ೫.೬೪ ಕೋಟಿ ವ್ಯವಹಾರವನ್ನು ನಡೆಸಿ ಸಂಘದ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡಿರುತ್ತದೆ.
ಸಂಘವೂ ಅಡಿಟ್ ವರ್ಗಿಕರಣದಲ್ಲಿ ೨೦೧೦-೧೧ನೇ ಸಾಲಿನಿಂದ ೨೦೨೩-೨೪ನೇ ಸಾಲಿನವರೆಗೆ ಸುಮಾರು ೧೪ ವರ್ಷ ‘ಎ’ ತರಗತಿಯನ್ನು ಪಡೆದುಕೊಂಡಿದೆ. ಕೆಡಿಸಿಸಿ ಬ್ಯಾಂಕಿನವರು ಉತ್ತಮ ಕಾರ್ಯನಿರ್ವಹಣೆಗಾಗಿ ನೀಡುವ ಬಹುಮಾನದಲ್ಲಿ ನಮ್ಮ ಸಂಘವೂ ೨೦೧೧-೧೨ನೇ ಸಾಲಿನಲ್ಲಿ ತೃತೀಯ ಬಹುಮಾನ, ೨೦೧೪-೧೫ನೇ ಸಾಲಿನಲ್ಲಿ ಪ್ರಥಮ ಬಹುಮಾನ, ೨೦೧೫-೧೬ನೇ ಸಾಲಿನಲ್ಲಿ ದ್ವಿತೀಯ ಬಹುಮಾನ, ೨೦೧೮-೧೯ ನೇ ಸಾಲಿನಲ್ಲಿ ಕ್ರಮವಾಗಿ ಪ್ರಥಮ ಬಹುಮಾನ, ೨೦೧೯-೨೦ನೇ ಸಾಲಿನಲ್ಲಿ ತೃತೀಯ ಬಹುಮಾನ ೨೦೨೦-೨೧, ೨೦೨೧-೨೨, ೨೦೨೨-೨೩ ಹಾಗೂ ೨೦೨೩-೨೪ನೇ ಸಾಲಿನಲ್ಲಿ ಸತತವಾಗಿ ೪ ವರ್ಷ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸೋಮೆಯಂಡ ಕೆ. ಮಂದಣ್ಣ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಹೆಚ್.ಡಿ. ಶ್ರೀನಿವಾಸ್, ಕೇಳಪಂಡ ಬಿ. ಉತ್ತಪ್ಪ, ಮುಡುವಂಡ ಟಿ. ಅಯ್ಯಪ್ಪ, ಪುಲಿಯಂಡ ಡಿ. ದಿನೇಶ್, ಕೊಲ್ಲಿರ ಎಂ. ಗೋಪಿಚಿಣ್ಣಪ್ಪ, ತೀತಾಮಾಡ ಎಸ್. ಗಣಪತಿ, ಬಿ.ಪಿ. ದಿನೇಶ್, ಚೇಂದAಡ ಜೆ. ರೂಪ, ಪಟ್ರಂಗಡ ಎಸ್. ಗಂಗಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪ್ರದೀಪ್, ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ರಮ್ಯ ಪೂವಯ್ಯ ಉಪಸ್ಥಿತರಿದ್ದರು.