ಗೋಣಿಕೊಪ್ಪಲು, ಸೆ.೧೯: ವರ್ತಕ ಸಮುದಾಯ ಕೊಡಗಿನಲ್ಲಿ ಭ್ರಾತೃತ್ವದ ಮೂಲಕ ಸಮಾಜಕ್ಕೆ ಸಂದೇಶ ನೀಡಿದೆ; ಹೊರ ಜಿಲ್ಲೆಯಲ್ಲಿ ಧರ್ಮಗಳ ನಡುವೆ ನಡೆದ ಘಟನೆಗಳನ್ನು ನಾವು ಕಂಡಿದ್ದೇವೆ. ಕೊಡಗಿನಲ್ಲಿ ಎಲ್ಲಾ ಸಮುದಾಯಗಳು ತಮ್ಮ ತಮ್ಮ ಧರ್ಮ ಆಚರಣೆಗಳನ್ನು ನಡೆಸುತ್ತ ಬಂದರೂ, ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿವೆ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.

ವ್ಯಾಪಾರ ಮತ್ತು ಕೊಡಗಿನ ಕಾಫಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ; ಕಾಫಿಗೆ ಉತ್ತಮ ಬೆಲೆ ಬಂದ ವೇಳೆಯಲ್ಲಿ ವರ್ತಕ ಸಮುದಾಯಕ್ಕೆ ವ್ಯಾಪಾರದಲ್ಲಿ ಚೇತರಿಕೆಯಾಗುತ್ತಿದೆ. ಕಾಫಿಯ ಮೇಲೆ ವರ್ತಕರು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಗ್ರಾಹಕರಿಗೆ ವರ್ತಕರು ಉತ್ತಮ ಸೇವೆ ನೀಡುವಂತಾಗಬೇಕು. ಪ್ರವಾಸಿಗರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಕೊಡಗಿನ ಹೆಸರಿಗೆ ಧಕ್ಕೆ ತರುವ ರೀತಿಯಲ್ಲಿ ವರ್ತಕರು ನಡೆದುಕೊಳ್ಳಬಾರದು ಎಂದರು. ಗೋಣಿಕೊಪ್ಪಲುವಿನ ಕುಕೂನ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಗೋಣಿಕೊಪ್ಪ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಚೇಂಬರ್ ಆಫ್ ಕಾಮರ್ಸ್ಗೆ ತನ್ನದೆ ಆದ ಗೌರವವಿದೆ. ಗೋಣಿಕೊಪ್ಪ ಚೇಂಬರ್ ಸಾಕಷ್ಟು ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಿದೆ. ಕೊಡಗಿನಲ್ಲಿಯೇ ಗೋಣಿಕೊಪ್ಪ ಚೇಂಬರ್ ಮುಂಚೂಣಿಯಲ್ಲಿದೆ. ಇಲ್ಲಿನ ಆಡಳಿತ ಮಂಡಳಿ ಸಕ್ರಿಯವಾಗಿರುವುದು ಇದಕ್ಕೆ ಕಾರಣ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೆಲವು ವರ್ತಕರು ವ್ಯಾಪಾರೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೊರಜಿಲ್ಲೆ, ರಾಜ್ಯದಿಂದ ಆಗಮಿಸುವ ಪ್ರವಾಸಿಗರಿಗೆ ದುಪ್ಪಟ್ಟು ದರ ವಿಧಿಸಿ ವ್ಯಾಪಾರ ನಡೆಸುವುದು ಬೆಳಕಿಗೆ ಬಂದಿದೆ. ಇದರಿಂದ ವರ್ತಕ ಸಮುದಾಯದ ಮೇಲೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಕೊಡಗಿನಲ್ಲಿ ಯಾವುದೇ ಕಾರ್ಖಾನೆ ಇಲ್ಲದಿದ್ದರೂ ಕಾರ್ಖಾನೆಯಿಂದ ಬಂದಿರುವ ವಸ್ತುಗಳೆಂದು ಪ್ರವಾಸಿಗರನ್ನು ದಿಕ್ಕು ತಪ್ಪಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ಅಪಾಯಕಾರಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೇಕಲ್ ಮಾತನಾಡಿ, ಕೊಡಗಿನಲ್ಲಿ ಪ್ರವಾಸೋದ್ಯಮವು ಉತ್ತಮವಾಗಿ ಬೆಳೆಯುತ್ತಿದೆ. ಇದರಿಂದ ವರ್ತಕ ಸಮುದಾಯ ಚೇತರಿಸಿಕೊಳ್ಳುತ್ತಿದೆ. ಜಿಲಾ ್ಲಕೇಂದ್ರ ಮಡಿಕೇರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದ.ಕೊಡಗಿನ ಪ್ರವಾಸಿ ತಾಣಗಳಾದ ಇರ್ಪು ಜಲಪಾತ, ನಾಗರಹೊಳೆ, ಬರಪೊಳೆ ರ‍್ಯಾಪ್ಟಿಂಗ್, ಹೆಚ್ಚು ಗಮನ ಸೆಳೆಯುವಂತಾಗಬೇಕು. ಈ ಮೂಲಕ ಪ್ರವಾಸಿಗರು ದ.ಕೊಡಗಿಗೆ ಆಗಮಿಸಿದ ಸಂದರ್ಭ ಮಡಿಕೇರಿಯ ಮೇಲೆ ಬೀಳುತ್ತಿರುವ ಒತ್ತಡವು ಸಹಜವಾಗಿಯೇ ಕಡಿಮೆಯಾಗಲಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಸಂಘದಲ್ಲಿ ನೂತನ ಸದಸ್ಯತ್ವತನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾಕಷ್ಟು ವರ್ತಕರು ಸದಸ್ಯತ್ವವನ್ನು ಹೊಂದಿದ್ದಾರೆ. ಇದು ಸಂಘದ ಬೆಳವಣಿಗೆಗೆ ಅನುಕೂಲವಾಗಿದೆ ಎಂದರು.

ಸAಸ್ಥೆಯ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವ್ಯಾಪಾರದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳಬೇಕು. ತಮ್ಮ ಮಕ್ಕಳನ್ನು ವ್ಯಾಪಾರೋದ್ಯಮಕ್ಕೆ ಪ್ರೋತ್ಸಾಹಿಸುವಂತಾಗಬೇಕು ಎಂದರು.

ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಣಿಕೊಪ್ಪ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇತ್ತೀಚೆಗೆ ಪೊಲೀಸರು ಚೇಂಬರ್‌ನ ಸಹಕಾರದೊಂದಿಗೆ ಮಾರ್ಕಿಂಗ್ ವ್ಯವಸ್ಥೆಗೆ ನೀಲನಕ್ಷೆ ತಯಾರು ಮಾಡಿದ್ದಾರೆ. ವರ್ತಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡುವ ಸಂದರ್ಭ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಗೋಣಿಕೊಪ್ಪ ಚೇಂಬರ್ ತನ್ನದೆ ಆದ ಸ್ವಂತ ಕಟ್ಟಡವನ್ನು ಹೊಂದಿದೆ. ವರ್ತಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಮಹಾಸಭೆಯಲ್ಲಿ ಪ್ರಸ್ತುತ ಆಡಳಿತ ಮಂಡಳಿಯನ್ನು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಐದನೇ ಅವಧಿಗೆ ಕಡೇಮಾಡ ಸುನೀಲ್ ಮಾದಪ್ಪ ಹಾಗೂ ತಂಡ ಆಯ್ಕೆಯಾದರು. ಸಭೆಯಲ್ಲಿ ಸದಸ್ಯರುಗಳಾದ ಕೇಶವಕಾಮತ್, ಮರ್ಚೆಂಟ್ ಬ್ಯಾಂಕ್‌ನ ಅಧ್ಯಕ್ಷರಾದ ಅರುಣ್ ಪೂಣಚ್ಚ, ಹಿರಿಯ ವರ್ತಕರಾರ ಅಜಿತ್ ಅಯ್ಯಪ್ಪ, ಗಣೇಶ್‌ರೈ, ಕೆ.ಬಿ. ಗಿರೀಶ್ ಗಣಪತಿ, ಎನ್. ಪ್ರಕಾಶ್ ಮಾತನಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಜಿತ್ ಅಯ್ಯಪ್ಪ ಉಪಸ್ಥಿತರಿದ್ದರು. ಚೇಂಬರ್‌ನ ಖಜಾಂಜಿ ಮನೋಹರ್ ಮಹಾಸಭೆ ಹಾಗೂ ಲೆಕ್ಕಪತ್ರ ವರದಿ ಮಂಡಿಸಿದರು. ಸದಸ್ಯೆ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಚೇಂಬರ್‌ನ ಉಪಾಧ್ಯಕ್ಷÀ ಪೊನ್ನಿಮಾಡ ಸುರೇಶ್ ಸ್ವಾಗತಿಸಿ, ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ನೂತನ ಸದಸ್ಯರಿಗೆ ಸÀದಸ್ಯತ್ವ ನೀಡಲಾಯಿತು.

-ಹೆಚ್.ಕೆ.ಜಗದೀಶ್