ವೀರಾಜಪೇಟೆ, ಸೆ. ೧೯: ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಆದೇಶದಂತೆ ಪಟ್ಟಣದಲ್ಲಿ ಒತ್ತುವರಿ ತೆರವು ಸಂಬAಧ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಂದಾಯ ನಿರೀಕ್ಷಕ ಹರೀಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಚಂದ್ರಶೇಖರ್, ಸರ್ವೆ ಸೂಪರ್ವೈಸರ್ ಸಣ್ಣ ಜವರಯ್ಯ, ಸರಕಾರಿ ಭೂ ಮಾಪಕರು, ಕಂದಾಯ ಮತ್ತು ಭೂ ದಾಖಲೆಗಳ, ಪೊಲೀಸ್ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು. ಬಹುತೇಕ ಕಟ್ಟಡಗಳು ರಾಜಕಾಲುವೆ ಮೇಲೆ ಇರುವ ಹಿನ್ನೆಲೆ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯದೆ ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗುತ್ತಿತು. ಪಟ್ಟಣದ ಗೋಣಿಕೊಪ್ಪ ಮುಖ್ಯರಸ್ತೆ ಮಾಂಸ ಮಾರುಕಟ್ಟೆ ಬಳಿ ಕೆಲ ಗಂಟೆಗಳ ಕಾಲ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತು. ಈ ಹಿನ್ನಲೆಯಲ್ಲಿ ವೀರಾಜಪೇಟೆ ನಗರವ್ಯಾಪ್ತಿ ಸರ್ವೆಗೆ ಚಾಲನೆ ನೀಡಲಾಗಿದೆ ಎಂದು ತಹಶೀಲ್ದಾರ್ ರಾಮಚಂದ್ರ ತಿಳಿಸಿದ್ದಾರೆ.