ಮಡಿಕೇರಿ, ಸೆ. ೧೯: ಮಡಿಕೇರಿ ಹೊಸ ಬಡಾವಣೆ ಅಂಗನವಾಡಿಯಲ್ಲಿ ಪ್ರಧಾನಮಂತ್ರಿ ಮಾತೃವಂದನಾ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಹಾಗೂ ಪೋಷಣ ಅಭಿಯಾನ ಯೋಜನೆಯಡಿ ಪೂರಕ ಆಹಾರದ ಮಹತ್ವದ ಬಗ್ಗೆ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ ಅವರು ಮಾತನಾಡಿ, ಮಾತೃವಂದನಾ ಯೋಜನೆಯಡಿ ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ ರೂ. ೫೦೦೦ ಹಣವನ್ನು ಹಾಗೂ ಎರಡನೇ ಹೆಣ್ಣು ಮಗುವಿಗೆ ಒಂದೇ ಕಂತಿನಲ್ಲಿ ಆರು ಸಾವಿರ ಹಣವನ್ನು ಪಡೆಯಬಹುದಾಗಿದೆ. ಇದು ಮಗುವಿನ ಆರೈಕೆಗಾಗಿ ಸರ್ಕಾರದ ವತಿಯಿಂದ ನೀಡುವಂತಹ ಹಣವಾಗಿರುತ್ತದೆ.

ಈ ಸೌಲಭ್ಯವನ್ನು ಪಡೆಯಲು ಸರ್ಕಾರಿ ನೌಕರರಲ್ಲದ ಗರ್ಭಿಣಿ ಮಹಿಳೆ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಲು ಕೋರಿದರು. ಅಂಗನವಾಡಿ ಕಾರ್ಯ ಕರ್ತೆಯರು ಅರ್ಜಿ ಸಲ್ಲಿಸಿದಲ್ಲಿ ಫೋನ್ ಮುಖಾಂತರ ಸ್ಥಳದಲ್ಲೇ ಅರ್ಜಿ ನೋಂದಣಿ ಮಾಡಲಾಗುವುದು ಎಂದು ತಿಳಿಸುತ್ತಾ ಅರ್ಜಿಯೊಂದಿಗೆ ನೀಡಬೇಕಾದಂತಹ ದಾಖಲಾತಿಯ ವಿವರಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಂಗನವಾಡಿ ಮಕ್ಕಳು ನೆರವೇರಿಸಿದರು. ಸ್ವಾಗತವನ್ನು ಅಂಗನವಾಡಿ ಕಾರ್ಯಕರ್ತೆ ಕಂಬೆಯAಡ ಮುತ್ತಮ್ಮ ನಡೆಸಿದರು. ಪೌಷ್ಟಿಕ ಆಹಾರದ ಬಗ್ಗೆ ಹಿರಿಯ ಆರೋಗ್ಯ ಸಹಾಯಕಿ ರೇವತಿ ಅವರು ಮಾಹಿತಿ ಇತ್ತರು. ಆಶಾ ಕಾರ್ಯಕರ್ತೆ ಜೂರಾ ವಂದನಾರ್ಪಣೆ ಮಾಡಿದರು.