ನಾಪೋಕ್ಲು, ಸೆ. ೧೯: ಹೆಲ್ಪ್ಲೈನ್ ಚಾರಿಟಿ ಟ್ರಸ್ಟ್ ವತಿಯಿಂದ ಸಮೀಪದ ಕೊಳಕೇರಿಯಲ್ಲಿ ಹೊಸ ಆ್ಯಂಬ್ಯುಲೆನ್ಸ್ ಅನ್ನು ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲಾಯಿತು.
ನಾಲ್ಕುನಾಡಿನ ರೋಗಿಗಳಿಗೆ ಉಪಯೋಗವಾಗಲೆಂದು ಕೊಳಕೇರಿಯಲ್ಲಿ ಹೆಲ್ಪ್ಲೈನ್ ಚಾರಿಟಿ ಟ್ರಸ್ಟ್ ಆ್ಯಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು, ಇದರ ಉದ್ಘಾಟನೆಯನ್ನು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಸಲು ನೆರವಾಗುವ ಆ್ಯಂಬ್ಯುಲೆನ್ಸ್ ಅನ್ನು ಜನರ ಉಪಯೋಗಕ್ಕೆ ಮೀಸಲಿಟ್ಟಿರುವುದು ಸಂತಸದ ವಿಷಯ. ಗ್ರಾಮೀಣ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ಜನರು ಇದರ ಸದ್ಬಳಕೆ ಮಾಡಿಕೊಳ್ಳುವಂತಾಗಲಿ ಎಂದರು.
ಈ ಸಂದರ್ಭ ಕೊಳಕೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎ.ಎ.. ಅಶ್ರಫ್, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ಚಾರಿಟಿ ಅಧ್ಯಕ್ಷ ಹಾರಿಸ್ ಎ.ಕೆ., ಕಾರ್ಯದರ್ಶಿ ಅಶ್ರಫ್ ಕೆ.ವೈ., ರಝಾಕ್ ಎಂ.ಎA., ಸಮಿತಿ ಸದಸ್ಯರಾದ ಅಶ್ರಫ್ ಎ.ಎ., ಅಬ್ಬಾಸ್ ಕೆ.ಎಂ. ಸುಲೇಮಾನ್ ಕೆ.ವೈ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊಳಕೇರಿಯಲ್ಲಿರುವ ಬಡವರಿಗೆ ಕೊಡಗಿನ ಒಳಗೆ ಉಚಿತವಾಗಿ ಸಂಚರಿಸಲು ಆ್ಯಂಬುಲೆನ್ಸ್ ಸೇವೆ ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.