ಗುಡ್ಡೆಹೊಸೂರು, ಸೆ. ೧೯: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨-೨೩ ನೇ ಸಾಲಿನಲ್ಲಿ ರೂ. ೬೬.೧೯ ಲಕ್ಷಗಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ೨೪೧೫ ಸದಸ್ಯರುಗಳನ್ನು ಹೊಂದಿದ್ದು ಪಾಲುಬಂಡವಾಳ ರೂ. ೨೮೩.೪೫ ಲಕ್ಷ ಇದೆ.. ೨೦೨೩-೨೪ ನೇ ಸಾಲಿಗೆ ರೂ ೨೧೫.೮೮ ಕೋಟಿಗಳ ವಹಿವಾಟು ನಡೆಸಲಾಗಿದ್ದು, ರೂ. ೧೪೯.೪೮ ಲಕ್ಷಗಳ ಕ್ಷೇಮನಿಧಿಯನ್ನು, ೨೯೯.೫೨ ಲಕ್ಷಗಳ ಇತರೆ ನಿಧಿಯನ್ನು, ೩೩೯೩.೬೪ ಲಕ್ಷಗಳ ಠೇವಣಿಯನ್ನು ಹೊಂದಿದೆ. ೨೦೨೩-೨೪ ನೇ ಸಾಲಿಗೆ ರೂ.೧೨೧೨.೧೨ ಲಕ್ಷಗಳ ಕೆ.ಸಿ.ಸಿ.ಸಾಲವನ್ನು, ರೂ.೪೭೫.೫೯ ಲಕ್ಷಗಳ ಮಧ್ಯಮಾವಧಿ ಸಾಲವನ್ನು, ರೂ.೪೩೯.೮೧ ಲಕ್ಷಗಳ ಜಾಮೀನು ಸಾಲವನ್ನು, ರೂ ೧೧೬.೪೯ ಲಕ್ಷಗಳ ವಾಹನ ಸಾಲವನ್ನು ರೂ. ೭೩೯.೯೮ ಲಕ್ಷಗಳ ಗೃಹ ಸಾಲವನ್ನು, ರೂ.೧೬೮.೮೦ ಲಕ್ಷಗಳ ಆಭರಣ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಅಲ್ಲದೆ ಸಂಘದ ಮೂಲಕ ೧೧೬ ಸ್ವಸಹಾಯ ಸಂಘ ಗಳನ್ನು ರಚಿಸಿದ್ದು ರೂ. ೫೯.೧೧ ಲಕ್ಷಗಳ ಠೇವಣಿಯನ್ನು ಸಂಗ್ರಹಿಸಿ ರೂ ೧೧೩ ಲಕ್ಷಗಳ ಸಾಲವನ್ನು ನೀಡಲಾಗಿದೆ. ಈ ಎಲ್ಲಾ ಸಾಲಗಳನ್ನು ಸಂಘದ ಸ್ವಂತ ಬಂಡವಾಳದಿAದ ವಿತರಿಸಲಾಗುತ್ತಿದ್ದು, ೨೦೨೩-೨೪ ನೇ ಸಾಲಿಗೆಸದಸ್ಯರಿಂದ ಶೇ.೯೮.೫೮ ರಷ್ಟು ಸಾಲ ವಸೂಲಿಯಾಗಿರುತ್ತದೆ ಎಂದು ಮಾಹಿತಿ ನೀಡಿದರು. ಸಂಘವು ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದೆ. ೨೦೨೩-೨೪ ನೇ ಸಾಲಿಗೆ ೭೪೨.೬೭ ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿ ರೂ.೪೮.೯೦ ಲಕ್ಷಗಳ ಲಾಭ ಗಳಿಸಿದೆ. ಪ್ರತಿ ವರ್ಷವೂ ಸಂಘದ ವ್ಯಾಪ್ತಿಯ ೧೦ನೇ ಮತ್ತು ೭ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಯೊಂದು ಶಾಲೆಯ ೩ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ೬ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ. ೨೦೨೩-೨೪ ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೨೨ ರಂದು ನಡೆಯಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎಸ್.ಬಿ. ಅನಿತ, ನಿರ್ದೇಶಕರುಗಳಾದ ಡಿ.ಎಲ್. ಮಹೇಶ್ಚಂದ್ರ, ಬಿ.ಎಸ್. ಧನಪಾಲ, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ವಿ.ಎಸ್. ರಾಜಪ್ಪ, ಕೆ.ಎಸ್.ಎಸ್. ಕಾರ್ಯಪ್ಪ,ಕೆ.ಕೆ. ಲೀಲಾವತಿ, ಟಿ,ಕೆ, ಉದಯಕುಮಾರ್ ಎನ್.ಸಿ. ಪಂಚಾಕ್ಷರಿ, ಆರ್.ಕೆ. ಚಂದ್ರ ಮತ್ತು ಹೆಚ್.ಜೆ. ಕೃಷ್ಣ ಹಾಜರಿದ್ದರು.