ಮಡಿಕೇರಿ: ಸಂಪಾಜೆ ಅರಮನೆತೋಟ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಸಪ್ತಾಹ ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಯಶೋಧ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲ ಭರತ್ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಮತ್ತು ಸಹಾಯಕಿ ಕಮಲಾಕ್ಷಿ, ಮಕ್ಕಳ ಪೋಷಕರು, ಸ್ವಸಹಾಯ ಸಂಘದ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಮಡಿಕೇರಿ: ಪೋಷಣ್ ಮಾಸಾಚರಣೆ ಅಂಗವಾಗಿ ಮಡಿಕೇರಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬೆಳವಣಿಗೆಯ ಪೌಷ್ಟಿಕ ಮಟ್ಟವನ್ನು ಗುರುತಿಸಲು ಮಾಪನ ಪರಿಶೀಲನೆ ನಡೆಸಿ ಮಕ್ಕಳ ತೂಕ, ಎತ್ತರ, ತೋಳಿನ ಸುತ್ತಳತೆ ಪರಿಶೀಲನೆ ನಡೆಸ ಲಾಯಿತು. ಕಾರ್ಯಕ್ರಮದಲ್ಲಿ ೦-೬ ವರ್ಷದವರೆಗಿನ ಮಕ್ಕಳು, ಮಕ್ಕಳ ಪೋಷಕರು, ಸಮುದಾಯ ದವರು, ಅಂಗನವಾಡಿ ಕಾರ್ಯಕರ್ತೆ ಚೈತ್ರ, ಸಹಾಯಕಿ ಜ್ಯೋತಿ ಹಾಜರಿದ್ದರು.ಮಡಿಕೇರಿ: ಸಂಪಾಜೆ ಬೈಲು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಲತಾ ಕೇಶವ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಕಳಗಿ ಮತ್ತು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಚೆದ್ಕಾರ್ ಉಪಸ್ಥಿತರಿದ್ದರು. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಅವರು ಮಾಹಿತಿ ನೀಡಿದರು. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಘಾನಶ್ರೀ ಸಮಗ್ರ ಮಾಹಿತಿ ನೀಡಿದರು. ಆಶಾಕಾರ್ಯಕರ್ತೆ ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆ ಕುಸುಮ ಮತ್ತು ಸಹಾಯಕಿ ಗಿರಿಜಾ, ಮಕ್ಕಳ ಪೋಷಕರು, ಸ್ವಸಹಾಯ ಸಂಘದ ಸದಸ್ಯರು ಮತ್ತು ಮಕ್ಕಳು ಭಾಗವಹಿಡಿದ್ದರು. ಭವಾನಿ ಶಂಕರ ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ಕುಸುಮ ಸ್ವಾಗತಿಸಿದರು.