ಸೋಮವಾರಪೇಟೆ, ಸೆ. ೨೦: ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೨೧.೩೪ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಹೇಳಿದರು.

ಚೌಡ್ಲು ಸಹಕಾರ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೨೬೮೫ ಸದಸ್ಯರಿದ್ದು, ೨೦೨೩-೨೪ನೇ ಸಾಲಿನಲ್ಲಿ ೧೩೧೦ ಸದಸ್ಯರಿಗೆ ೧೯.೪೪ ಲಕ್ಷ ಕೆಸಿಸಿ ಸಾಲ ನೀಡಲಾಗಿದೆ ಎಂದರು.

ಸAಘದಿAದ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಪಡೆದ ಸಾಲವನ್ನು ಉತ್ತಮ ಉದ್ದೇಶಕ್ಕೆ ಬಳಸಬೇಕು. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಪರಮೇಶ್ ಹೇಳಿದರು.

ಸದಸ್ಯರುಗಳು ಸಂಘದಿAದ ಪಡೆದ ಕೆಸಿಸಿ ಸಾಲವನ್ನು ಸಕಾಲವನ್ನು ಮರುಪಾವತಿ ಮಾಡುವ ಮೂಲಕ ಸರ್ಕಾರದಿಂದ ಬರುವ ಬಡ್ಡಿ ಸಹಾಯಧನವನ್ನು ಪಡೆದುಕೊಳ್ಳಬೇಕು ಎಂದ ಅವರು, ೨೦೨೩-೨೪ ನೇ ಸಾಲಿನಲ್ಲಿ ೩೭೦ ಟನ್ ಗೊಬ್ಬರ ಖರೀದಿಸಿ ಸಂಘದಿAದ ಸದಸ್ಯರಿಗೆ ವಿತರಣೆ ಮಾಡಲಾಗಿದೆ. ಇದರಲ್ಲಿ ಸಂಘಕ್ಕೆ ೧.೭೮ ಲಕ್ಷ ಲಾಭ ಬಂದಿದೆ.

ಸದಸ್ಯರಿಗೆ ಗೊಬ್ಬರ ಸಾಲವಾಗಿ ೨.೧೪ ಕೋಟಿ ನೀಡಿದ್ದು, ಒಟ್ಟಾರೆ ೨೧.೩೪ ಕೋಟಿ ಲಾಭಾಂಶ ಬಂದಿದೆ. ಕಳೆದ ವರ್ಷಕ್ಕಿಂತ ೧.೮೩ ಲಕ್ಷ ಹೆಚ್ಚು ಲಾಭ ಬಂದಿದೆ. ಸದಸ್ಯರಿಗೆ ಶೇ. ೫ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಂಘದಲ್ಲಿ ೨೩೫೦ ಮಂದಿ ಸದಸ್ಯರು ಮರಣ ನಿಧಿ ಪಾವತಿಸಿದ್ದು, ಉಳಿದ ಸದಸ್ಯರುಗಳೂ ಸಹ ಕಡ್ಡಾಯವಾಗಿ ಮರಣ ನಿಧಿ ಪಾವತಿಸಬೇಕು. ಇದು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.

ಸಹಕಾರ ಸಂಘಗಳು ಇದೀಗ ಗಣಕೀಕರಣಗೊಂಡಿದ್ದು, ಸರ್ಕಾರದ ಸಹಕಾರಿ ನಿಯಮದಂತೆ ಎಲ್ಲರೂ ಕೃಷಿ ಇಲಾಖೆಯಲ್ಲಿ ಎಫ್.ಐ.ಡಿ. ಮಾಡಿಸಿ, ನಂತರ ಸಾಲ ಪಡೆಯಬೇಕೆಂದು ಮನವಿ ಮಾಡಿದರು.

ಕೆಸಿಸಿ ಸಾಲ ಪಡೆಯುವ ಸದಸ್ಯರು ಸಂಘದಲ್ಲೇ ಕಾವೇರಿ-೨ ತಂತ್ರಾAಶದಲ್ಲಿ ನೋಂದಣಿ ಮಾಡುತ್ತಿದ್ದು, ಆರ್‌ಟಿಸಿಯಲ್ಲಿ ಹೆಸರಿರುವ ಸದಸ್ಯರುಗಳು ಹಾಜರಿರಬೇಕು.

ನೋಂದಣಿ ಕಚೇರಿಯಲ್ಲಿ ಎಲ್ಲರೂ ಹೆಬ್ಬೆಟ್ಟು ಗುರುತು ನೀಡಿದ ನಂತರವೇ ಸಾಲ ಮಂಜೂರಾಗುತ್ತದೆ. ಸದಸ್ಯರುಗಳು ತಮ್ಮ ಆರ್‌ಟಿಸಿಯಲ್ಲಿನ ಸಮಸ್ಯೆಗಳನ್ನು ಮೊದಲು ಸರಿಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಸದಸ್ಯರುಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ವೈ.ಎಂ. ನಾಗರಾಜು, ನಿರ್ದೇಶಕರುಗಳಾದ ಜಾನಕಿ ವೆಂಕಟೇಶ್, ಎಸ್.ಬಿ. ಈರಪ್ಪ, ಕವಿತ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು ದಳವಾಯಿ, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಎ.ಜೆ. ಕೃಷ್ಣಪ್ಪ, ಪಿ.ಎಸ್. ರವಿಕುಮಾರ್, ವಿ. ಹರೀಶ್, ಪದ್ಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಉಪಸ್ಥಿತರಿದ್ದರು.