ಸುಂಟಿಕೊಪ್ಪ: ಶ್ರೀದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ೧೧ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸುವ ಮೂಲಕ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗೆ ೯ ದಿನಗಳ ಕಾಲ ಅರ್ಚಕರುಗಳಾದ ಅವಿನಾಶ್ ಆರಾಧ್ಯ, ಲೋಕೇಶ್ ಆರಾಧ್ಯ ಹಾಗೂ ಪ್ರಕಾಶ್ ಆರಾಧ್ಯ ತಂಡದವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಗದ್ದೆಹಳ್ಳದ ವರೆಗೆ ಶೋಭಾಯಾತ್ರೆ ಡಿಜೆ ಪಟಾಕಿಗಳನ್ನು ಸಿಡಿಸುವ ಮೂಲಕ ಉತ್ಸವ ಮೂರ್ತಿಯನ್ನು ನಾರ್ಗಾಣೆ ಗ್ರಾಮದ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಈ ಸಂದರ್ಭ ಅಧ್ಯಕ್ಷ ಪುನೀತ್ ಕುಮಾರ್, ಉಪಾಧ್ಯಕ್ಷ ಮನು ಕುಮಾರ್, ಪ್ರಧಾನ ಕಾರ್ಯದರ್ಶಿ ಆಕಾಶ್, ಖಜಾಂಚಿ ಮೋಹನ, ಸಹ ಕಾರ್ಯದರ್ಶಿಗಳಾಗಿ ಶಿವಪ್ರಸಾದ್, ಅನಿ, ಸಂಘಟನಾ ಕಾರ್ಯದರ್ಶಿ ಶ್ರೀನಿ, ಮುರುಗ, ಬಿಂದು, ಮಣಿ, ವಸಂತ, ದಯಾನಂದ, ಕಿರಣ್, ಸುಧಿ, ಸಂಜು ಗೌರವ ಅಧ್ಯಕ್ಷರು ಗಳಾಗಿ ಶಿವಪ್ಪ, ರಾಜ, ಆನಂದ, ಬಿ.ಡಿ. ರಾಜುರೈ, ಶರತ್, ವಿವೇಕ್‌ರೈ, ಕುಶಾಲಪ್ಪ, ಪಿ.ಆರ್. ಸುನಿಲ್ ಕುಮಾರ್ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.