ಮಡಿಕೇರಿ, ಸೆ. ೧೯: ೧೫ನೇ ರಾಜ್ಯಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ -೨೦೨೪ ಅನ್ನು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಬಿ.ಬಿ.ಎಂ.ಪಿ. ಮಾಜಿ ಕಾರ್ಪೊರೇಟರ್ ಅಂಜನಪ್ಪ ಎಂ., ಕೊಡಗಿನವರಾದ ಹಾಕಿ ಒಲಂಪಿಯನ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ, ಭಾರತೀಯ ಸೇನೆಯ ಕಮಿಷನ್ಡ್ ಆಫೀಸರ್ ಲೆಫ್ಟಿನೆಂಟ್ ಭರತ್ ಬಾಬು, ರಾಷ್ಟಿçÃಯ ಹಾಕಿ ಆಟಗಾರ ಹಾಗೂ ಅಂಕಣಕಾರ ಚೆಪ್ಪುಡೀರ ಎ. ಕಾರ್ಯಪ್ಪ ಇವರುಗಳು ಆಗಮಿಸಿದ್ದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಬ್ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾದ ಸ್ಪರ್ಧಿಗಳನ್ನು ರಾಷ್ಟçಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಒಟ್ಟು ೧೫೦೦ ಸ್ಪರ್ಧಿಗಳು, ೩೦೦ ಹೆಸರಾಂತ ತೀರ್ಪುಗಾರರು, ಹಿರಿಯ ರಾಷ್ಟಿçÃಯ ಕರಾಟೆ ಪಟುಗಳು ಹಾಗೂ ಪೋಷಕರುಗಳ ಆಗಮನದಿಂದ ಯಶಸ್ವಿಯಾಗಿ ನಡೆಯಿತು.ಇದರ ಅಧ್ಯಕ್ಷರಾದ ಕರಾಟೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಗೆದ್ದ ಚೆಪ್ಪುಡೀರ.ಎಸ್.ಅರುಣ್ ಮಾಚಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಭಾರ್ಗವ ರೆಡ್ಡಿ ಜೆ. ಅವರ ಅಧೀನದಲ್ಲಿ ಈ ಚಾಂಪಿಯನ್ ಶಿಪ್ ನಡೆಯುತ್ತಿದೆ.