ಮಡಿಕೇರಿ, ಸೆ. ೨೦: ಮಳೆ ಕಡಿಮೆಯಾಗಿ ಚಳಿಗಾಲ ಆರಂಭವಾದ ಹಿನ್ನೆಲೆ ಹವಾಮಾನ ಬದಲಾವಣೆಯಿಂದ ಕಂಬಳಿ ಹುಳುಗಳ ಕಾಟವೂ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಮನೆ, ಕಟ್ಟಡ, ಅಂಗಡಿ ಮಳಿಗೆ, ಗೋಡೆಗಳಲ್ಲಿ, ಮನೆ ಅಂಗಳ, ಗಿಡ, ಮರಗಳ ಎಲೆಯ ಮೇಲೆ ಸೇರಿದಂತೆ ಜನರಿರುವ ಕಡೆಗಳಲ್ಲಿ ಕಂಬಳಿಹುಳುಗಳು ಹೆಚ್ಚಿನ ಪ್ರಮಾಣದಲ್ಲಿ ಹಿಂಡುಹಿAಡಾಗಿ ಗೋಚರಿಸುತ್ತಿರುವ ಪರಿಣಾಮ ಜನ ಹೈರಾಣಾಗಿದ್ದಾರೆ. ಆದರೆ, ಕೃಷಿ, ತೋಟಗಾರಿಕೆ ಬೆಳೆಗಳಿಗೆ ಕಂಬಳಿಹುಳು ಬಾಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮನೆ, ಅಂಗಡಿ, ಕಟ್ಟಡಗಳ ಗೋಡೆಯನ್ನೇ ಗೂಡು ಮಾಡಿ ಕೊಳ್ಳುತ್ತಿರುವ ಕಂಬಳಿಹುಳುಗಳು ಈ ಅವಧಿಯಲ್ಲಿ ಹೆಚ್ಚಾಗುವುದು ಸಾಮಾನ್ಯ ಎಂದು ತಜ್ಞರು ತಿಳಿಸಿದ್ದಾರೆ. ಮನೆ ಸೇರಿದಂತೆ ಜನರಿರುವ ಕಡೆಗಳಲ್ಲಿಯೇ ಹೆಚ್ಚಾಗುತ್ತಿರುವ ಹಿನ್ನೆಲೆ ಮನುಷ್ಯರ ಮೇಲೆ ಬಿದ್ದು ಅಲರ್ಜಿ ಸಂಭವಿಸುತ್ತಿರುವ ಉದಾಹರಣೆಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ.

ಈ ಕುರಿತು ಕೃಷಿ ಹಾಗೂ ತೋಟಗಾರಿಕೆ

(ಮೊದಲ ಪುಟದಿಂದ) ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭ ಕೃಷಿ ಹಾಗೂ ತೋಟಗಾರಿಕೆ ಫಸಲುಗಳಿಗೆ ಕಂಬಳಿಹುಳುಗಳಿAದ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಸಮಸ್ಯೆಯ ಬಗ್ಗೆ ದೂರುಗಳು ಬಾರದ ಹಿನ್ನೆಲೆ ಯಾವುದೇ ಸಲಹೆಯನ್ನು ಅಧಿಕೃತವಾಗಿ ಇಲಾಖೆಯಿಂದ ನೀಡಿಲ್ಲ. ಪ್ರಕರಣಗಳು ವರದಿಯಾದಲ್ಲಿ ತಕ್ಷಣ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ವೀರೇಂದ್ರ ಕುಮಾರ್ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಕಂಬಳಿಹುಳುಗಳಿAದ ಬೆಳೆಗಳಿಗೆ ದೊಡ್ಡ ಮಟ್ಟದ ನಷ್ಟ ಸಂಭವಿಸುವುದಿಲ್ಲ. ಮನೆ ಸೇರಿದಂತೆ ಇತರ ಕಡೆಗಳಲ್ಲಿ ಹುಳು ಬಾರದಂತೆ ಎಚ್ಚರಿಕೆ ವಹಿಸಬೇಕು. ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದು, ಬೇವಿನ ಎಣ್ಣೆ ಸಿಂಪಡಿಸುವುದರಿAದ ಕಂಬಳಿ ಹುಳುಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದ ಅವರು, ಕಂಬಳಿ ಹುಳು ಕೆಲ ದಿನಗಳಲ್ಲಿ ಪತಂಗವಾಗಿ ಪರಿವರ್ತನೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಆತಂಕ ಸೃಷ್ಟಿ

ಕೆಲವೆಡೆ ಮನೆಯ ಹೆಂಚುಗಳನ್ನೆಲ್ಲಾ ಆವರಿಸಿಕೊಂಡಿರುವ ಕಂಬಳಿ ಹುಳುಗಳು ಎಲ್ಲಿ ಅಡುಗೆ ತಯಾರಿ ಸಂದರ್ಭದಲ್ಲಿ ಪಾತ್ರೆಯೊಳಗೆ ಸೇರಿಕೊಂಡಿವೆಯೋ ಎಂಬ ಆತಂಕವನ್ನು ಸೃಷ್ಟಿಸುತ್ತಿದೆ. ಕೆಲವೊಮ್ಮೆ ವಿದ್ಯುತ್ ಇಲ್ಲದ ರಾತ್ರಿ ಸಮಯದಲ್ಲಿ ಅಡುಗೆ ತಯಾರಿಸುವುದು ಸಹ ಕಷ್ಟ ಎನಿಸಿದೆ. ಮನೆಯೊಳಗಿನ ಅಲ್ಮೇರಾಗಳಲ್ಲಿ ಜೋಡಿಸಿಟ್ಟಿರುವ ಬಟ್ಟೆಗಳ ಮಧ್ಯದಲ್ಲೂ ಸಹ ಹುಳುಗಳು ಕಂಡುಬರುತ್ತಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.

ಇನ್ನೂ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆ ನಡೆಸಲಾಗಿದೆ. ಆದರೂ ಹಾವಳಿ ನಿಯಂತ್ರಣಕ್ಕೆ ಬಂದಿರುವುದಿಲ್ಲ ಎಂಬ ದೂರು ಕೇಳಿ ಬಂದಿದೆ. ಕಂಬಳಿಹುಳುಗಳು ಮೈಗೆ ತಾಗಿದರೆ ಆ ಭಾಗ ಕೆಂಪಾಗಿ ತುರಿಕೆ ಹೆಚ್ಚಾಗಿ ಅಲರ್ಜಿಯಂತಾಗುತ್ತದೆ.