ವೀರಾಜಪೇಟೆ, ಸೆ. ೨೦: ವೀರಾಜಪೇಟೆ ತಾಲೂಕು ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಸಬ್ ರಿಜಿಸ್ಟಾçರ್ ಕಚೇರಿಗೆ ತೆರಳಲು ಸಾಧ್ಯವಾಗದೇ ವಿಶೇಷ ಚೇತನ ವ್ಯಕ್ತಿ ಒಬ್ಬರು ಮಹಡಿ ಏರುವ ಮೆಟ್ಟಿಲುಗಳನ್ನು ತೆವಳಿಕೊಂಡು ಹೋದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ಘಟನೆಗೆ ಸಂಬAಧಿಸಿದAತೆ ಅಲ್ಲೆ ಇದ್ದವರು ವ್ಯಕ್ತಿ ಪರದಾಡು ತ್ತಿರುವುದನ್ನು ಚಿತ್ರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದುö, ಮಾನವೀಯತೆ ಇಲ್ಲದ ಆಡಳಿತ ವ್ಯವಸ್ಥೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವೀರಾಜಪೇಟೆ ನಿವಾಸಿ ವಿಶೇಷ ಚೇತನರಾದ ನಾಗರಾಜ್ ಎಂಬವರು

(ಮೊದಲ ಪುಟದಿಂದ) ತಮ್ಮ ಮನೆಯ ಭೋಗ್ಯದ ದಾಖಲಾತಿ ಸಂಬAಧ ಸಬ್ ರಿಜಿಸ್ಟಾçರ್ ಕಚೇರಿಗೆ ತೆರಳಿದ್ದರು. ವೀರಾಜಪೇಟೆ ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿರುವ ಸಬ್ ರಿಜಿಸ್ಟಾçರ್ ಕಚೇರಿಗೆ ತೆರಳಲು ಕಟ್ಟಡದಲ್ಲಿ ಲಿಫ್ಟ್ ಆಗಲೀ, ರ‍್ಯಾಂಪ್ ಸೌಲಭ್ಯವಾಗಲಿ ಇರಲಿಲ್ಲö. ಹೀಗಾಗಿ ನಾಗರಾಜ್ ಅವರು ತೆವಳಿಕೊಂಡೇ ಮೆಟ್ಟಿಲುಗಳನ್ನು ಹತ್ತಿ ಮೊದಲ ಮಹಡಿಯಲ್ಲಿರುವ ಕಚೇರಿಗೆ ತೆರಳಿದ್ದಾರೆ.

ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ತಹಶೀಲ್ದಾರ್ ಎಚ್.ಎನ್ ರಾಮಚಂದ್ರ ಸ್ಥಳದಲ್ಲಿ ಇಬ್ಬರು ಅಟೆಂಡರ್‌ಗಳನ್ನು ನೇಮಕ ಮಾಡಿದ್ದಾರೆ.

ಕಟ್ಟಡವನ್ನು ಹಸ್ತಾಂತರಿಸುವಾಗ ಪಿಡಬ್ಲೂಡಿ ಇಲಾಖೆ ಲಿಫ್ಟ್ ವ್ಯವಸ್ಥೆ ಮಾಡಿರಲಿಲ್ಲö. ಕಟ್ಟಡಕ್ಕೆ ಕಾಂಪೌAಡ್, ಇಂಟರ್‌ಲಾಕ್ ಮತ್ತು ಲಿಫ್ಟ್ ಅಳವಡಿಕೆ ಮಾಡಬೇಕಿದ್ದುö, ಇದರಿಂದ ಸಮಸ್ಯೆಯಾಗಿದೆ. ಮೊದಲ ಮಹಡಿಯಲ್ಲಿ ಸಬ್ ರಿಜಿಸ್ಟಾçರ್ ಮತ್ತು ಸರ್ವೆ ಕಚೇರಿಗಳಿವೆ. ನೆಲ ಅಂತಸ್ತಿನಲ್ಲಿ ತಾಲೂಕು ಕಚೇರಿ ಕಾರ್ಯನಿರ್ವಹಿಸುತ್ತಿದೆ. ಯಾರಲ್ಲಾದರೂ ಹೇಳಿದ್ದರೆ ಅಧಿಕಾರಿಯೇ ಅವರ ಬಳಿ ಬರುತ್ತಿದ್ದರು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು. ತಕ್ಷಣಕ್ಕೆ ಗ್ರೌಂಡ್ ಫ್ಲೋರ್‌ಗೆ ಇಬ್ಬರು ಅಟೆಂಡರ್‌ಗಳನ್ನು ನೇಮಕ ಮಾಡಿದ್ದೇವೆ. ಪುರಸಭೆಯಿಂದ ವೀಲ್ ಚೇರ್ ಕೂಡಾ ತರಿಸಿಕೊಂಡಿದ್ದೇವೆ.

ವಿಶೇಷಚೇತನರು ತಾಲೂಕು ಕಛೇರಿಗೆ ಬಂದAತಹ ಸಂದರ್ಭದಲ್ಲಿ ಮೊದಲನೇ ಹಾಗೂ ಎರಡನೆ ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಾದ ಸರ್ವೆ ಇಲಾಖೆ ಮತ್ತು ನೋಂದಣಿ ಇಲಾಖೆಗಳ ಅಧಿಕಾರಿಗಳಿಗೆ ಆದೇಶವನ್ನು ನೀಡಿ ವಿಕಲಚೇತನರನ್ನು ನೆಲಮಹಡಿಯಲ್ಲೇ ಅವರ ಇಲಾಖೆಗೆ ಸಂಬAಧಪಟ್ಟ ಕೆಲಸಗಳನ್ನು ಮಾಡಿಕೊಡುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ತಹಶೀಲ್ದಾರ್ ಎಚ್.ಎನ್. ರಾಮಚಂದ್ರ ಪತ್ರಿಕೆಗೆ ತಿಳಿಸಿದ್ದಾರೆ.