ಮಡಿಕೇರಿ, ಸೆ. ೧೮: ಮಡಿಕೇರಿ ದಸರಾ ಉತ್ಸವದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ದಸರಾ ಆಚರಣೆಗೆ ಸಂಬAಧಿಸಿದ ಕೆಲವು ಸ್ಥಳಗಳಿಗೆ ಇಂದು ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದಸರಾ ಪದಾಧಿಕಾರಿಗಳು ಹಾಗೂ ನಗರಸಭಾ ಅಧಿಕಾರಿಗಳ ತಂಡದೊAದಿಗೆ ತೆರಳಿ ಪೂರ್ವಭಾವಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಗರದ ಪಂಪ್ಕೆರೆ, ಚೌಡೇಶ್ವರಿ ದೇವಾಲಯ, ಕೋದಂಡರಾಮ ದೇವಾಲಯ, ಕರವಲೆ ಭಗವತಿ ದೇಗುಲ ವ್ಯಾಪ್ತಿಯ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯವಾದ ರಸ್ತೆ ಕೆಲಸ ಸೇರಿದಂತೆ ಇನ್ನಿತರ ಅವಶ್ಯಕತೆಗಳನ್ನು ನಿರ್ವಹಿಸುವ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ನಗರಸಭಾ ಆಯುಕ್ತ ರಮೇಶ್ ಸೇರಿದಂತೆ, ಇಂಜಿನಿಯರ್ಗಳು, ಇತರ ಸಿಬ್ಬಂದಿ ಹಾಜರಿದ್ದರು.