ಸೋಮವಾರಪೇಟೆ, ಸೆ. ೧೮: ಮಹಾಭಾರತದಲ್ಲಿ ಬರುವ ೧೦೧ ಕೌರವರ ಹೆಸರನ್ನು ೫೪ ಸೆಕೆಂಡ್ಸ್ ಗಳಲ್ಲಿ ಹೇಳುವ ಮೂಲಕ ಇಲ್ಲಿನ ಕ್ರಿಯೇಟಿವ್ ಅಕಾ ಡೆಮಿಯ ೪ನೇ ತರಗತಿ ವಿದ್ಯಾರ್ಥಿನಿ ಹೆಚ್. ಪ್ರೇಕ್ಷಾ, ೨೦೨೪-ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲು ಮಾಡಿದ್ದಾಳೆ. ಕೌರವ ವಂಶದ ಧೃತರಾಷ್ಟçನ ೧೦೦ ಪುತ್ರರು ಹಾಗೂ ಓರ್ವ ಪುತ್ರಿಯ ಹೆಸರನ್ನು ಕೇವಲ ೫೪ ಸೆಕೆಂಡ್ಸ್ನಲ್ಲಿ ಹೇಳುವ ಮೂಲಕ ಈ ಸಾಧನೆ ಮಾಡಿದ್ದಾಳೆ. ಈಕೆ ಅಬ್ಬೂರುಕಟ್ಟೆ ಗ್ರಾಮದ ಗುತ್ತಿಗೆದಾರ ಹರೀಶ್ ಹಾಗೂ ಸಿಂಧು ದಂಪತಿಯ ಪುತ್ರಿ.