ವೀರಾಜಪೇಟೆ, ಸೆ. ೧೮: ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ಕೂರ್ಗ್ ಮಾರ್ಕ್ಸ್ಮೆನ್ ಸಂಸ್ಥೆ ವತಿಯಿಂದ ೧೦ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆ ಇತ್ತೀಚೆಗೆ ವೀರಾಜ ಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಮುಖರಾದ ಕಾಳೇಂಗಡ ರಮೇಶ್ ಕಾರ್ಯಪ್ಪ ನೆರವೇರಿಸಿದರು. ಸುಮಾರು ೧೧೦ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಜ್ಜಿನಂಡ ಬೋಪಣ್ಣ ಮೊದಲ ಸ್ಥಾನ ಪಡೆದುಕೊಂಡರೆ, ಚೀಯಕಪೂವಂಡ ಗ್ರೇಸ್ ಎರಡನೇ ಸ್ಥಾನ, ಬಡುವಂಡ ಶ್ಲೋಕ್ ತೃತೀಯ ಸ್ಥಾನದೊಂದಿಗೆ ಟ್ರೋಫಿ ಮತ್ತು ನಗದನ್ನು ತನ್ನದಾಗಿಸಿಕೊಂಡರು. ಚಾಮರಾಜನಗರದಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ ಸತ್ಯಭಾಮಾ ಸಮಾಧಾನಕರ ಬಹುಮಾನ ಪಡೆದುಕೊಂಡರು. ಪಟ್ಟಡ ಸಚಿನ್ ಟ್ರೋಫಿ ಮತ್ತು ನಗದು ಪ್ರಾಯೋಜಿಸಿದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ, ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ, ಕಂಡ್ರತAಡ ಪ್ರವೀಣ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.