ಐಗೂರು: ಐಗೂರಿಗೆ ಆಗಮಿಸಿದ ಕರ್ನಾಟಕ ಸುವರ್ಣ ರಥವನ್ನು ಐಗೂರು ಗ್ರಾಮ ಪಂಚಾಯಿತಿಯ ಮುಂದೆ ಅದ್ದೂರಿಯಾಗಿ ವಾದ್ಯ ಗೋಷ್ಠಿಯೊಂದಿಗೆ ಬರಮಾಡಿ ಕೊಳ್ಳಲಾಯಿತು. ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಪಿಡಿಓ ಪೂರ್ಣ ಕುಮಾರ್, ಪಂಚಾಯಿತಿ ಸದಸ್ಯರುಗಳು ಮತ್ತು ಕಸಾಪ ಸದಸ್ಯರು ಒಟ್ಟು ಸೇರಿ ರಥಕ್ಕೆ ಹಾರವನ್ನು ಹಾಕಿ ಸ್ವಾಗತಿಸಿದರು.
ಈ ಸಂದರ್ಭ ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಕುರಿತು ಗ್ರಾಮ ಪಂಚಾಯಿತಿ ಪಿಡಿಓ ಪೂರ್ಣ ಕುಮಾರ್, ಕಾಜೂರು ಶಾಲೆಯ ಶಿಕ್ಷಕ ಅಜಿತ್ಕುಮಾರ್ ಮತ್ತು ಸೋಮವಾರ ಪೇಟೆ ಕಸಾಪ ತಾಲೂಕು ಘಟಕದ ಖಜಾಂಚಿ ಕೆ.ಪಿ. ದಿನೇಶ್ ಮಾತನಾಡಿದರು. ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಮೆರವಣಿ ಗೆಯೊಂದಿಗೆ ಸೋಮವಾರಪೇಟೆಗೆ ರಥವನ್ನು ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಪಿಡಿಓ ಪೂರ್ಣ ಕುಮಾರ್, ಗ್ರಾ.ಪಂ. ಸದಸ್ಯರಾದ ಬಾರನ ಪ್ರಮೋದ್, ಲಿಂಗೇರಿ ರಾಜೇಶ್, ಜುನೈದ್, ಕಸಾಪ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಖಜಾಂಚಿ ಬೆಳ್ಯಪ್ಪ, ಕಾರ್ಯದರ್ಶಿ ಸರಳ ಕುಮಾರಿ, ವಿಶ್ವನಾಥ ರಾಜ ಅರಸು, ಹೇಮಂತ್ ಪಾರೆರ, ಮಚ್ಚಂಡ ಅಶೋಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಪ್ರೌಢಶಾಲೆಯ ಮು.ಶಿ. ಯಶ್ವಂತ್, ಶಿಕ್ಷಕರಾದ ಕೃಷ್ಣಪ್ಪ, ಮಂಜುನಾಥ್, ಶಿಕ್ಷಕಿ ಎಸ್.ಎಸ್. ರಂಜಿನಿ, ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದ್ದರು.