ಮಡಿಕೇರಿ, ಸೆ. ೧೬ : ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೋಣಿಕೊಪ್ಪ ಸ್ಥಾನೀಯ ಸಮಿತಿಯ ೨೦೨೩-೨೩ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೧೭ರಂದು (ಇಂದು) ನಡೆಯಲಿದೆ.
ಮಧ್ಯಾಹ್ನ ೩.೩೦ಕ್ಕೆ ಗೋಣಿಕೊಪ್ಪದ ಕುಕ್ಕೂನ್ ಸಭಾಂಗಣದಲ್ಲಿ ಸ್ಥಾನೀಯ ಅಧ್ಯಕ್ಷ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಾಣಿಜ್ಯ, ಕೈಗಾರಿಕೆ ಸಂಸ್ಥೆ ಮಾಜಿ ಜಿಲ್ಲಾಧ್ಯಕ್ಷ ಜಿ. ಚಿದ್ವಿಲಾಸ್, ಹಾಲಿ ಕಾರ್ಯದರ್ಶಿ ಮೋಂತಿ ಗಣೇಶ್, ಉಪಾಧ್ಯಕ್ಷ ನವಿನ್ ಅಂಬೇಕಲ್ ಪಾಲ್ಗೊಳ್ಳಲಿದ್ದಾರೆ.