ಸೋಮವಾರಪೇಟೆ, ಸೆ. ೧೬: ತಾಲೂಕು ರೋಮನ್ ಕ್ಯಾಥೋಲಿಕ್ ಸಂಘಟನೆಯ ಅಧ್ಯಕ್ಷರಾಗಿ ಪಟ್ಟಣದ ಡೆನ್ಸಿಲ್ ವರ್ಗೀಸ್ ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ಜಯವೀರ ಮಾತೆ ದೇವಾಲಯದ ಸಭಾಂಗಣದಲ್ಲಿ, ಸಂಘದ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಘಟಕವನ್ನು ರಚಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷರಾಗಿ ಡೆನ್ಸಿಲ್ ಸೇರಿದಂತೆ ಇತರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರುಗಳಾಗಿ ಗೋಪಾಲಪುರದ ವಿನ್ಸೆಂಟ್ ಲೋಬೋ, ಕುಂಬೂರಿನ ಜಾನ್ ಪಿಂಟೋ, ಅಬ್ಬೂರುಕಟ್ಟೆಯ ರಾಯನ್ ಫರ್ನಾಂಡಿಸ್ ಅವರುಗಳನ್ನು ನೇಮಕ ಮಾಡಲಾಯಿತು.
ಕಾರ್ಯದರ್ಶಿಯಾಗಿ ಶಾಲುಮೋನ್, ಖಜಾಂಚಿಯಾಗಿ ಫ್ರಾನ್ಸಿಸ್ ಲೋಬೋ, ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಲತೀಸ್ ಮೊಂತೇರ್, ಗೌರವಾಧ್ಯಕ್ಷರಾಗಿ ಅಂತೋಣಿ ಕೆ.ಎ. ಅವರನ್ನು ನೇಮಕ ಮಾಡಲಾಯಿತು. ಸಂಘದ ಗೌರವ ಸಲಹೆಗಾರರಾಗಿ ಸುನೀಲ್ ಎ.ಜೆ. ಮತ್ತು ಸಾಮಾಜಿಕ ಜಾಲತಾಣದ ಕಾರ್ಯನಿರ್ವಾಹಕರಾಗಿ ಜೇಸನ್ ಅಂತೋಣಿ ಅವರುಗಳು ನೇಮಕವಾದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಜುಡಿ ವಾಜ್, ಪದಾಧಿಕಾರಿ ಅಂತೋನಿ ಡಿಸೋಜ ಉಪಸ್ಥಿತರಿದ್ದರು.