ಮಡಿಕೇರಿ, ಸೆ. ೧೬: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಚಾಲಕನಾಗಿ ಕಳೆದ ೨೭ ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಇ.ಆರ್. ಶಶಿಧರನ್ ಅವರನ್ನು ಆ. ೩೧ರಂದು ಬ್ಯಾಂಕಿನ ಆಡಳಿತ ಮಂಡಳಿಯವರು ಬೀಳ್ಕೊಟ್ಟರು.
ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಗಣಪತಿ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಗೌರವಿಸುವುದರ ಮೂಲಕ ಬೀಳ್ಕೊಟ್ಟರು.
ಈ ಸಂದರ್ಭ ಬಾಂಡ್ ಗಣಪತಿ ಮಾತನಾಡಿ, ಶಶಿಧರನ್ ಅವರ ಪ್ರಾಮಾಣಿಕತೆ ಮತ್ತು ಸೇವಾನಿಷ್ಠೆ ಪ್ರಶಂಸನೀಯ ವೆಂದರು.
ಬ್ಯಾAಕಿನ ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ ಸ್ವಾಗತಿಸಿದರು.
ಉಪಾಧ್ಯಕ್ಷ ಕೇಟೋಳಿರ ಪೂವಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಕಾಮತ್ ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರು ಈ ಸಂದರ್ಭ ಉಪಸ್ಥಿತರಿದ್ದರು.