ಮಡಿಕೇರಿ, ಸೆ. ೧೬: ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸುವ ಮುಸ್ಲಿಂ ಸಮುದಾಯದ ಪ್ರವಿತ್ರ ಆಚರಣೆಗಳಲ್ಲಿ ಒಂದಾದ ಈದ್‌ಮಿಲಾದ್ ಅನ್ನು ಜಿಲ್ಲೆಯಾದ್ಯಂತ ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈ ಪ್ರಯುಕ್ತ ಬದ್ರಿಯಾ ಜಮಾಅತ್ ಆಶ್ರಯದಲ್ಲಿ ಮೆರವಣಿಗೆ ನಡೆಯಿತು. ಬಳಿಕ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜಮಾ ಅತ್ ಅಧ್ಯಕ್ಷ ಅಮೀನ್ ಮೊಯ್ಸಿನ್ ವಹಿಸಿದ್ದರು. ಸದರ್ ಹನೀಫ್ ಅವರು ಮುಖ್ಯ ಭಾಷಣ ಮಾಡಿದರು. ಅತಿಥಿಗಳಾಗಿ ಎಂ.ಎA. ಮಸೀದಿ ಕಾರ್ಯದರ್ಶಿ ಹಾರೂನ್, ಜಾಮಿಯಾ ಮಸೀದಿ ಮುಖ್ಯಸ್ಥ ನಜೀರ್, ಇಮಾಮ್ ನಜೀಂ ಅಕ್ತರ್, ವಿವಿಧ ಮಸೀದಿಗಳ ಧರ್ಮಗುರುಗಳು ಪಾಲ್ಗೊಂಡಿದ್ದರು. ದಫ್ ಕಾರ್ಯಕ್ರಮ ನಡೆಯಿತು. ಬಳಿಕ ಅನ್ನದಾನ ನೆರವೇರಿತು.

ಪೊನ್ನಂಪೇಟೆ : ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಶಾಪಿ ಜುಮ್ಮಾ ಮಸ್ಜಿದ್, ಕಾಟ್ರಕೊಲ್ಲಿ ಮುಯಿಯದ್ದೀನ್ ಜುಮ್ಮ ಮಸ್ಜಿದ್ ಮತ್ತು ಅನಫಿ ಜಾಮಿಯಾ ಮಸ್ಜಿದ್ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಮಿಲಾದ್ ರ‍್ಯಾಲಿ ಆಯೋಜಿಸಲಾಗಿತ್ತು.

ಇಲ್ಲಿನ ರಾಮಕೃಷ್ಣ ಶಾರದಾಶ್ರಮದ ಸಮೀಪದಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ನೂರಾರು ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಬಂದು ಬಸ್ ನಿಲ್ದಾಣದಲ್ಲಿ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಶಾಪಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಸಿ. ಎ.ಅಹಮದ್, ಕಾರ್ಯದರ್ಶಿ ಅಜೀಜ್ ಪಿ. ಎ, ಉಪಾಧ್ಯಕ್ಷ ಸಿ. ೭ನೇ ಹೊಸಕೋಟೆ - ಭ್ರಾತೃತ್ವದ ಭದ್ರಕೋಟೆ

ಸುಂಟಿಕೊಪ್ಪ : ಪ್ರಸ್ತುತದ ದಿನಗಳಲ್ಲಿ ಸಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಟ ಸಂಘರ್ಷಗಳು ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪರಸ್ಪರ ಕಿತ್ತಾಟ- ಪ್ರತಿಷ್ಠೆಗಳು ಸಮಾಜದ ಸ್ವಾಸ್ತö್ಯ ಕೆಡಿಸುತ್ತಿರುವುದು ಸುಳ್ಳಲ್ಲ. ಇಂತಹ ಪರಿಸ್ಥಿತಿಗಳ ನಡುವೆ ಇಲ್ಲೊಂದು ವಿಚಾರ ಭ್ರಾತೃತ್ವಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದೆ.

೭ನೇ ಹೊಸಕೋಟೆಯಲ್ಲಿ ಶ್ರೀಮಹಾಗಣಪತಿ ದೇವಸ್ಥಾನ, ಮಸೀದಿ, ಚರ್ಚ್ ಈ ಮೂರು ಶ್ರದ್ಧಾಕೇಂದ್ರಗಳು ಕೂಡ ಅಕ್ಕಪಕ್ಕದಲ್ಲಿಯೇ ಇದೆ. ಇಲ್ಲಿ ಶ್ರೀ ಗಣೇಶೋತ್ಸವ ಅತ್ಯಂತ ಸಂಭ್ರಮವಾಗಿ ನಡೆದು ಭಾನುವಾರ ಸಂಜೆ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಮುಸ್ಲಿಂ ಸಮುದಾಯದ ನೂರಾರು ಯುವಕರು ಮೆರವಣಿಗೆಯುದ್ದಕ್ಕೂ ಸಿಹಿ ತಿಂಡಿ ಮತ್ತು ತಂಪು ಪಾನಿಯವನ್ನು ಸರಬರಾಜು ಮಾಡುವ ಮೂಲಕ ಸೌಹಾರ್ಧತೆ ಮೆರೆದಿದ್ದರು.

ಇದನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ ಹಿಂದೂ ಸಮುದಾಯದವರು ಸೋಮವಾರದಂದು ಈದ್‌ಮಿಲಾದ್ ಮೆರವಣಿಗೆಯ ಸಂದರ್ಭ ಸಿಹಿ ತಿಂಡಿ ಮತ್ತು ತಂಪು ಪಾನಿಯವನ್ನು ಸರಬರಾಜು ಮಾಡಿ ಸ್ನೇಹದ ಬೆಸುಗೆಯನ್ನು ಗಟ್ಟಿಗೊಳಿಸಿದ್ದಾರೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.ಎಂ. ಅಶ್ರಫ್, ಕಾಟ್ರಕೊಲ್ಲಿ ಮುಹಿಯದ್ದೀನಿ ಜುಮ್ಮ್ ಮಸೀದಿ ಅಧ್ಯಕ್ಷ ಎಂ. ಎ. ಆಲಿ, ಕಾರ್ಯದರ್ಶಿ ಅನೀಫ್, ಅನಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಇ. ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಮದರಸ ಧಾರ್ಮಿಕ ಗುರುಗಳಾದ ಜಿಯಾದ್ ದಾರಿಮಿ, ಹಿರಿಯರಾದ ಆಲಿರ ಎರ್ಮು ಹಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲಿರ ರಶೀದ್, ಸದಸ್ಯರಾದ ಜುನೈದ್, ಅಜೀಜ್, ಕುಶಾಲನಗರ: ಕುಶಾಲನಗರ ದಲ್ಲಿ ಮುಸ್ಲಿಂ ಸಮುದಾಯದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌಹಾರ್ದ ಜಾಥಾವನ್ನು ನಡೆಸಿದರು. ಮೆರವಣಿಗೆಯಲ್ಲಿ ಶಾಂತಿ ಸೌಹಾರ್ದತೆಯ ಘೋಷಣೆಗಳನ್ನು ಕೂಗುವ ಮೂಲಕ ಸೌಹಾರ್ದತೆ ಹಾಗೂ ಸಾಮರಸ್ಯದ ಸಂದೇಶ ಸಾರಿದರು.

ಮೆರವಣಿಗೆ ಸಂದರ್ಭ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ದಫ್ ಪ್ರದರ್ಶಿಸಲಾಯಿತು. ಬೈಚನಹಳ್ಳಿ ಬಳಿ ದಾರುಲ್ ಉಲೂಂ ಮದ್ರಸದಿಂದ ಆರಂಭಗೊAಡ ಜಾಥಾ ಕಾರ್ಯಪ್ಪ ವೃತ್ತದ ಮೂಲಕ ದಂಡಿನಪೇಟೆಗೆ ತೆರಳಿ ಮತ್ತೆ ದಾರುಲ್ ಉಲೂಂ ಮದ್ರಸಕ್ಕೆ ತೆರಳಿತು. ಈ ಸಂದರ್ಭ ದಾರುಲ್ ಉಲೂಂ ಮದ್ರಸದ ಅಧ್ಯಕ್ಷರು, ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ನೂರುಲ್ ಇಹ್ಸಾನ್ ಯೂತ್ ಕಮಿಟಿ ಪ್ರಮುಖರು ಹಾಗೂ ಹಿಲಾಲ್ ಮಸೀದಿಯವರು ಇದ್ದರು. ಎಂ. ಅಶ್ರಫ್, ಕಾಟ್ರಕೊಲ್ಲಿ ಮುಹಿಯದ್ದೀನಿ ಜುಮ್ಮ್ ಮಸೀದಿ ಅಧ್ಯಕ್ಷ ಎಂ. ಎ. ಆಲಿ, ಕಾರ್ಯದರ್ಶಿ ಅನೀಫ್, ಅನಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಇ. ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಮದರಸ ಧಾರ್ಮಿಕ ಗುರುಗಳಾದ ಜಿಯಾದ್ ದಾರಿಮಿ, ಹಿರಿಯರಾದ ಆಲಿರ ಎರ್ಮು ಹಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲಿರ ರಶೀದ್, ಸದಸ್ಯರಾದ ಜುನೈದ್, ಅಜೀಜ್, ಕಾರ್ಯಕ್ರಮ ಸಂಚಾಲಕ ವಿ. ಹೆಚ್. ಆಲಿ, ಮೂರು ಮಸೀದಿಗಳ ಪದಾಧಿಕಾರಿಗಳು ಇದ್ದರು. ಶಾಫಿ ಜುಮ್ಮಾ ಮಸ್ಜಿದ್‌ನಲ್ಲಿ ಮದರಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

(ಮೊದಲ ಪುಟದಿಂದ) ಕುಶಾಲನಗರ: ಧಾರ್ಮಿಕ ಶಿಕ್ಷಣದ ಜೊತೆಗೆ ಬೌದ್ಧಿಕ ವಿದ್ಯಾಭ್ಯಾಸ ಕೂಡ ಅಗತ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಶಪಾಪಾತೇ ಆಲಂ ಮಿಲಾದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟಕರಾದ ಧರ್ಮ ಗುರುಗಳಾದ ನಾಸಿರ್‌ಫೈಜಿ ಮಾತನಾಡಿ, ಪ್ರವಾದಿಯವರ ಆದರ್ಶಗಳನ್ನು ಹಾಗೂ ಸಂದೇಶವನ್ನು ಸಾರಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರವಾದಿಯವರ ಜೀವನ ಸಂದೇಶವನ್ನು ಅಳವಡಿಸಿಕೊಂಡಿರುವ ಭಾರತೀಯ ಮುಸಲ್ಮಾನರು ಅತ್ಯಂತ ಅನ್ಯೋನ್ಯತೆಯಿಂದ ಬಾಳು ಸಾಗಿಸುತ್ತಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲರಾದ ಎಂ.ತಮ್ಲೀಕ್ ದಾರಿಮಿ, ಪ್ರವಾದಿಯವರ ಜೀವನ ಶೈಲಿ ಹಾಗೂ ಅವರ ಮಾನವತಾವಾದವನ್ನು ಪ್ರತಿಯೊಬ್ಬರು ಅರಿಯುವುದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಎA.ಎಸ್.ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ್ ಮಾತನಾಡಿ, ಕುಶಾಲನಗರದಲ್ಲಿ ಹಿಂದೂ ಮುಸಲ್ಮಾನರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು.

ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಷÀಂಶುದ್ಧೀನ್, ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಅಲೀಂ ಅವರು ಮಾತನಾಡಿದರು. ಧರ್ಮ ಗುರುಗಳಾದ ನಾಸಿರ್ ಫೈಜಿರವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಸಕ ಡಾ.ಮಂತರ್ ಗೌಡ, ವಿ.ಪಿ.ಶಶಿಧರ್, ಪ್ರಮೋದ್ ಮುತ್ತಪ್ಪ, ಜಯವರ್ಧನ್ ಹಾಗೂ ಕೆ.ಬಿ.ಶಂಶುದ್ಧೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನೂರ್ ಮಸೀದಿ ಅಧ್ಯಕ್ಷರಾದ ಶಬೀರ್ ಭಾಷಾ, ಹಿಲಾಲ್ ಮಸೀದಿ ಉಪಾಧ್ಯಕ್ಷರಾದ ಹಂಸ ಹಾಜಿ, ಸಹ ಕಾರ್ಯದರ್ಶಿ ಮುಹಮ್ಮದಾಲಿ, ಅಲ್ ಇಹ್ಸಾನ್ ಸಮಿತಿ ಅಧ್ಯಕ್ಷರಾದ ಮುಸ್ತಫಾ, ಮಾದಾಪಟ್ಟಣ ಮದರಸ ಅಧ್ಯಕ್ಷರಾದ ಶರಫುದ್ದೀನ್, ಗೊಂದಿಬಸವನಹಳ್ಳಿ ಮದ್ರಸ ಅಧ್ಯಕ್ಷರಾದ ಹಂಸ, ಅಸ್ಕರ್ ಅಲಿ, ಸಮಿವುಲ್ಲಾ ಖಾನ್, ದಾರುಲ್ ಉಲೂಂ ಮದ್ರಸ ಅಧ್ಯಾಪಕರಾದ ಅಶ್ರಫ್ ಅಝ್ಹರಿ, ರಜಾಕ್ ರಹಮಾನಿ, ಶಫೀರ್, ಹಂಸ, ಅಲವಿ, ಶಕೀರ್ ಫೈಜಿ, ಉನೈಸ್ ಫೈಜಿ, ಮುಸ್ತಾಕ್ ದಾರಿಮಿ, ಅಲ್ ಇಹ್ಸಾನ್ ಕಮಿಟಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.

ಸೋಮವಾರಪೇಟೆ: ಸರ್ವರೂ ಸಾಮರಸ್ಯದ ಬದುಕು ಸಾಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಶಾಫಿ ಜುಮ ಮಸೀದಿ ಆಡಳಿತ ಮಂಡಳಿ, ಹಯಾತುಲ್ ಇಸ್ಲಾಂ ಅರೇಬಿಕ್ ಮದರಸ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ ಆಯೋಜಿಸಿದ್ದ ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಈದ್‌ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಸಮಾಜದ ಸ್ವಾಸ್ಥö್ಯ ಕಾಪಾಡುವುದರೊಂದಿಗೆ, ಗ್ರಾಮದ ಅಭಿವೃದ್ಧಿಗೂ ಸಹಕರಿಸಬೇಕಿದೆ. ಮನೆ ಮತ್ತು ಸಮಾಜ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆದಲ್ಲಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕನ್ನು ಕಾಣಬಹುದು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯವನ್ನು ಬಿಟ್ಟು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಮಸೀದಿಯ ಧರ್ಮಗುರುಗಳಾದ ಉಬೈದ್ ಫೈಜಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಶಾಂತಿಯುತ ಸೌಹಾರ್ದ ಬದುಕು ಕಂಡವರಾಗಿದ್ದಾರೆ. ಅವರ ಆದರ್ಶ ಇಂದಿಗೂ ಪ್ರಸ್ತುತವಾಗಿದೆ. ಅನಾಥರು, ಅಬಲೆಯರು ಹಾಗೂ ಹಿರಿಯರಿಗೆ ಗೌರವ ನೀಡುವುದು ಮತ್ತು ಧಾರ್ಮಿಕ ಹಾಗೂ ಲೌಖಿಕ ಶಿಕ್ಷಣ ಪಡೆದಲ್ಲಿ ಮಾತ್ರ ಯುವ ಜನರು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯ ಎಂದು ಪ್ರವಾದಿಗಳು ತಿಳಿಸಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಗುರು ಸಮೀರ್ ಫೈಜಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಅನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮಾನ್, ಕಾರ್ಯದರ್ಶಿ ನಿಯಾಜ್, ಗೌರವಾಧ್ಯಕ್ಷ ಅಬ್ದುಲ್, ಪದಾಧಿಕಾರಿಗಳಾದ ಮುಸ್ತಫ, ಮುನೀರ್, ಇಬ್ರಾಹಿಂ, ಅಬ್ದುಲ್ ರೆಹಮಾನ್ ಇದ್ದರು. ಇದೇ ಸಂದರ್ಭ ಶಾಸಕ ಡಾ. ಮಂತರ್ ಗೌಡ ಹಾಗೂ ಸೋಮವಾರಪೇಟೆ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್ ಅವರುಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಸಮುದಾಯದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಮಕ್ಕಳಿಗೆ ದಫ್, ಭಾಷಣ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.ಗೋಣಿಕೊಪ್ಪಲು: ಪೊನ್ನಂಪೇಟೆಯ ಕಾಟ್ರಕೊಲ್ಲಿಯ ಮೊಯಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಎಲ್ಲರೂ ಸಹೋದರತೆ, ಸಾಮರಸ್ಯದಿಂದ ಜೀವನ ನಡೆಸಬೇಕು ಸ್ವತಂತ್ರವಾಗಿ ಯಾವುದೇ ಭಯ ಭೀತಿ ಇಲ್ಲದೆ ತಮ್ಮ ಹಬ್ಬಗಳ ಆಚರಣೆಯನ್ನು ಮಾಡಬೇಕು ಎಂಬದೇ ಸಂವಿಧಾನದ ಮೂಲ ಆಶಯವಾಗಿದೆ. ಆದ್ದರಿಂದ ನಾವೆಲ್ಲರೂ ಸಮಾಜದಲ್ಲಿ ಸಾಮರಸ್ಯ ಕಾಪಾಡೋಣ ಎಂದರು.

ಕಾರ್ಯಕ್ರಮ ಧ್ವಜಾರೋಹಣವನ್ನು ಹಿರಿಯರಾದ ಎ.ಇ.ಎರಮುಹಾಜಿ ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಕೊಂಡAಗೇರಿಯ ವಕೀಲರಾದ ಅಬ್ದುಲ್ಲ ಇಮಮಿ ಭಾಗವಹಿಸಿದ್ದರು. ಜುಮಾ ಮಸೀದಿಯ ಅಧ್ಯಕ್ಷರಾದ ಎಂ.ಎ.ಅಲಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಸೀದಿಯ ಹಿರಿಯರಾದ ರಫೀಕ್ ಸಖಾಪಿ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಿ.ಎ.ಸಾದಲಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ಎಂ. ರಶೀದ್, ಸದಸ್ಯರಾದ ಎ.ಎ.ಅಬ್ದುಲ್ಲ ಅಸೀಸ್, ಎನ್.ಸಿ.ಟಿ. ಟ್ರಾವೆಲ್‌ನ ಎ.ಎಸ್.ಮೊಯ್ದು, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಎ.ಎಂ.ಅಲಿ ಸ್ವಾಗತಿಸಿ, ವಂದಿಸಿದರು. ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.ಕಡಂಗ: ತಾಜುಲ್ ಉಲಮಾ ಬದ್ರಿಯ ಸುನ್ನಿ ಮುಸ್ಲಿಂ ಜಮಾಅತ್ ವತಿಯಿಂದ ಈದ್‌ಮಿಲಾದ್ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ. ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಥಳೀಯ ಬದ್ರಿಯಾ ಮಸೀದಿ ಮುದರಿಸ್ ಅಬ್ದುಲ್ ಸತ್ತಾರ್ ಅಹ್ಸನಿ ಪ್ರಾರ್ಥನೆಯ ನೇತೃತ್ವ ವಹಿಸಿ ಸಮಾಜದಲ್ಲಿ ಸೌಹಾರ್ದತೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಪ್ರವಾದಿ ಸಂದೇಶ ಜಾಥಾವು ಬದ್ರಿಯ ಮಸೀದಿಯಿಂದ ಆರಂಭಗೊAಡು ಕೋಕ್ಕಂಡಬಾಣೆ ದರ್ಗಾಕ್ಕೆ ತೆರಳಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಅಲ್ಲಿಂದ ಕಡಂಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾಥಾದಲ್ಲಿ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ, ಪ್ಲವರ್ ಶೋ, ಸ್ಕೌಟ್ ಮತ್ತಿತರ ಕಾರ್ಯಕ್ರಮ ನಡೆಯಿತು.

ಕೇರಳದ ಪ್ರಖ್ಯಾತ ಬುರ್ದಾ ಸಂಘದ ನಿಝಾರ್ ಕೂತುಬಿ ನೇತೃತ್ವದಲ್ಲಿ ಬುರ್ದಾ ಅಲಾಪನೆ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ಪೈಗಂಬರ್ ಅವರ ಚರಿತ್ರೆಯ ಕುರಿತು ಭಾಷಣ, ಪ್ರಬಂಧ, ರಸಪ್ರಶ್ನೆ ಮತ್ತಿತರ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ವೇದಿಕೆಯಲ್ಲಿ ಸ್ವಾಗತ ಸಮಿತಿಯ ಚೆರ್ಮೆನ್ ಮೊಯ್ಯದ್ದೀನ್ ಮುಸ್ಲಿಯಾರ್, ಜಮಾಅತ್ ಪ್ರಧಾನ ಕಾರ್ಯದರ್ಶಿ ರಾಶೀದ್, ಅಶ್ರಫ್ ತಂಙಳ್, ಯುಎಇ ಸಮಿತಿಯ ಉಪಾಧ್ಯಕ್ಷ ರಶೀದ್ ಆಶ್ರಫಿ,ಯುಎಇ ಕಾರ್ಯದರ್ಶಿ ಹಾಗೂ ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್,ಕೆ ಎಂ ಜೆ ಅಧ್ಯಕ್ಷ ಸುಲೈಮಾನ್, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಝಕ್, ರಶೀದ್ ಐಬಿಎಂ, ಕೋಶಾಧಿಕಾರಿ ರಜಾಕ್ ಸಿ.ಎ, ಕನ್ವಿನರ್ ನೌಶಾದ್, ಜಮಾಅತ್ ಪದಾಧಿಕಾರಿಗಳು, ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಬಿಎಸ್ ಕಾರ್ಯಕರ್ತರು, ಸದಸ್ಯರು ಹಾಜರಿದ್ದರು.ಕೂಡಿಗೆ: ಕೂಡಿಗೆಯ ಮುಹಿದ್ಧಿನ್ ಜುಮಾ ಮಸೀದಿ ವತಿಯಿಂದ ಈದ್ ಮೀಲಾದ್ ಹಬ್ಬದ ಅಂಗವಾಗಿ ಮಿಲಾದ್ ಸಂದೇಶ ಜಾಥಾ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕೂಡಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.

ಈ ಸಂದರ್ಭ ಮಸೀದಿ ಕಮಿಟಿ ಅಧ್ಯಕ್ಷ ಯೂಸಫ್, ಕಾರ್ಯದರ್ಶಿ ಮಹಮ್ಮದ್ ಅಲಿ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಪ್ರಮುಖರಾದ ಉದ್ಯಮಿ ಖಾದರ್, ಅಜೀಜ್, ಅಶ್ರಫ್, ಸೇರಿದಂತೆ ನೂರಾರು ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೂಡಿಗೆ ಕೂಡುಮಂಗಳೂರಿನ ಹಿಂದೂ ಸಮುದಾಯದವರು ತುಂಪು ಪಾನೀಯವನ್ನು ವಿತರಣೆ ಮಾಡಿದರು.

ಕಡಂಗ: ಮುಹೀದ್ದೀನ್ ಜುಮಾ ಮಸೀದಿ ಹಾಗೂ ಸಲಾವುಲ್ ಇಸ್ಲಾಂ ಮದರಸಾ ಚೇರಂಬಾಣೆ ಇದರ ಸಂಯುಕ್ತ ಆಶ್ರಮದಲ್ಲಿ ಈದ್ ಮಿಲಾದ್ ಪ್ರಯುಕ್ತ ಚೇರಂಬಾಣೆ ಪಟ್ಟಣದ ಮುಖ್ಯಬೀದಿಗಳಲ್ಲಿ ದಫ್‌ನೊಂದಿಗೆ ಮೆರವಣಿಗೆ ನಡೆಯಿತು. ಮೂರು ದಿನಗಳ ಈದ್ ಮಿಲಾದ್ ಕಾರ್ಯಕ್ರಮಗಳು ಜಮಾಅತ್ ಆವರಣದಲ್ಲಿ ನಡೆಯಿತು.ಕೊಯನಾಡು: ಸುನ್ನಿ ಮುಸ್ಲಿಂ ಜುಮಾ ಕೊಯನಾಡು ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಜಾಥಾ ನಡೆಯಿತು. ಮಾಜಿ ಜಿಲ್ಲಾ ವಕ್ಫ್ ಸದಸ್ಯ ಮೊಯಿದಿನ್ ಕುಂಞೆ ಅವರು ಹನೀಫ್ ಎಸ್‌ಪಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು.

ಸುಬುಲುಸ್ಸಲಾಂ ಮದ್ರಸ ವಿದ್ಯಾರ್ಥಿಗಳಿಂದ ದಫ್ ನಡೆಯಿತು. ವಿವಿಧ ಜಮಾಅತ್ ಸದಸ್ಯರಿಂದ ತಂಪು ಪಾನೀಯ, ಸಿಹಿ ತಿಂಡಿ ವಿತರಿಸಲಾಯಿತು.

ಸೋಮವಾರಪೇಟೆ: ಪಟ್ಟಣದ ಜಲಾಲಿಯ ಮಸೀದಿಯಲ್ಲಿ ಈದ್ ಮಿಲಾದ್ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮಿಲಾದ್ ಸಂದೇಶ ರ‍್ಯಾಲಿ ನಡೆಯಿತು.

ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಮಿಲಾದ್ ಸಮಿತಿ ಅಧ್ಯಕ್ಷ ಟಿ.ಎಂ.ಕರೀA, ಖತೀಬರಾದ ಹಮೀದ್ ಸಖಾಫಿ, ಸೋಮವಾರಪೇಟೆ ಸೂಡ ಅಧ್ಯಕ್ಷ ಕೆ.ಎ.ಆದಂ ಮತ್ತಿತರರು ಭಾಗವಹಿಸಿದ್ದರು.ವೀರಾಜಪೇಟೆ: ವೀರಾಜಪೇಟೆಯ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದ್ರ‍್ರಸ ವತಿಯಿಂದ ಈದ್‌ಮಿಲಾದ್ ಸಂದೇಶ ಜಾಥಾ ನಡೆಯಿತು.

ಕಲ್ಲುಬಾಣೆಯ ಮಸೀದಿಯಿಂದ ಆರಂಭಗೊAಡ ಜಾಥಾ ವೀರಾಜಪೇಟೆ ಪಂಜರಪೇಟೆಯವರೆಗೆ ತೆರಳಿ ಬಳಿಕ ಮದ್ರ‍್ರಸಕ್ಕೆ ಹಿಂತಿರುಗಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ನೆಲ್ಲಿಹುದಿಕೇರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಿಲಾದ್ ಮೆರವಣಿಗೆ ನಡೆಸಲಾಯಿತು. ನಂತರ ಮಸೀದಿಯ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿಯ ಪದಾಧಿಕಾರಿಗಳು ಹಾಜರಿದ್ದರು.

ಡೆದವು. ಮಸೀದಿಯ ಅಧ್ಯಕ್ಷ ಪಿ.ಕೆ ಅಪ್ಸಲ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಅಜ್ಮಲ್, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶಹದೀರ್ ಆಲಿ ಸಂದೇಶ ಮೆರವಣಿಗೆಯ ಬಗ್ಗೆ ಮಾಹಿತಿ ನೀಡಿದರು.ವೀರಾಜಪೇಟೆ: ವೀರಾಜಪೇಟೆಯ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದ್ರ‍್ರಸ ವತಿಯಿಂದ ಈದ್‌ಮಿಲಾದ್ ಸಂದೇಶ ಜಾಥಾ ನಡೆಯಿತು.

ಕಲ್ಲುಬಾಣೆಯ ಮಸೀದಿಯಿಂದ ಆರಂಭಗೊAಡ ಜಾಥಾ ವೀರಾಜಪೇಟೆ ಪಂಜರಪೇಟೆಯವರೆಗೆ ತೆರಳಿ ಬಳಿಕ ಮದ್ರ‍್ರಸಕ್ಕೆ ಹಿಂತಿರುಗಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಸೀದಿಯ ಅಧ್ಯಕ್ಷ ಪಿ.ಕೆ ಅಪ್ಸಲ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಅಜ್ಮಲ್, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶಹದೀರ್ ಆಲಿ ಸಂದೇಶ ಮೆರವಣಿಗೆಯ ಬಗ್ಗೆ ಮಾಹಿತಿ ನೀಡಿದರು.