ವೀರಾಜಪೇಟೆ, ಸೆ. ೧೭: ಗಣಪತಿ ಬಪ್ಪ ಮೋರಿಯ-ಮಂಗಳ ಮೂರ್ತಿ ಮೋರಿಯ ಎಂದು ಆದಿಪೂಜಿತ ಗಜಾನನನಿಗೆ ಜಯಘೋಷಗಳ ಮಳೆ ಸುರಿಸಿದ ಭಕ್ತಾದಿಗಳು.., ಚಿತ್ತಾಕರ್ಷಕ ಪ್ರಭಾವಳಿಗಳ ವೈಭವದ ನಡುವೆ ಹೃನ್ಮನ ಸೆಳೆದ ಚಂದದ ಗಣೇಶ ಮೂರ್ತಿಗಳು.., ಅದ್ದೂರಿ ಆಚರಣೆ ಕಣ್ತುಂಬಿಕೊಳ್ಳಲು ಹರಿದು ಬಂದ ಜನಸಾಗರ.., ಕುಣಿದು ಕುಪ್ಪಳಿಸಿದ ಜನ ಸಮೂಹ..., ಸೂರ್ಯ ಮರೆಯಾಗಿ ಇರುಳು ಆವರಿಸಿದರೂ ಬೆಳಕಿನ ಚಿತ್ತಾರದಿಂದ ಮಿಂಚುತ್ತಿದ್ದ ವೀರಾಜಪೇಟೆ ನಗರ.., ಜಾತಿ, ಮತ, ಧರ್ಮದ ಬೇಧವಿಲ್ಲದೆ ಗಣಪನಿಗೆ ನಮಿಸಿದ ಜನತೆ... ಇದು ಐತಿಹಾಸಿಕ ಹಿನ್ನೆಲೆಯುಳ್ಳ ವೀರಾಜಪೇಟೆಯ ಗೌರಿ-ಗಣೇಶ ಮೂರ್ತಿಗಳ ವಿಸರ್ಜ ನೋತ್ಸವದಲ್ಲಿ ಕಂಡು ಬಂದ ಚಿತ್ರಣ.

ತಾ. ೭ ರಂದು ಏಕಕಾಲದಲ್ಲಿ ಪಟ್ಟಣದ ೨೨ ಕಡೆ ಪ್ರತಿಷ್ಠಾಪನೆ ಗೊಂಡಿದ್ದ ಗೌರಿ-ಗಣೇಶ ಮೂರ್ತಿ ಗಳನ್ನು ಸಾಮೂಹಿಕವಾಗಿ ಪಟ್ಟಣದ ಗೌರಿಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ವೀರಾಜಪೇಟೆ ಯಲ್ಲಿ ಗಣಪತಿ ಉತ್ಸವ ಸಂಪನ್ನಗೊAಡಿತು.

ಸಾಂಪ್ರದಾಯಿಕ ಚಾಲನೆ

ಮೂರ್ತಿಗಳ ವಿಸರ್ಜನೆಗೂ ಮುನ್ನ ಪಟ್ಟಣದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ೧೦೦೧ ಈಡುಗಾಯಿ ಅರ್ಪಿಸಿ ಪುಷ್ಪಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಿಡ್ಡಿಮದ್ದು ಸಿಡಿಸಿ, ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡುವ ಮೂಲಕ ವಿಸರ್ಜನೋತ್ಸವಕ್ಕೆ ಮುನ್ನುಡಿಯಿಡಲಾಯಿತು. ಉತ್ಸವದ ಸಾರಥಿಯಾದ ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿಯನ್ನು ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಪ್ರದೇಶ ಗೌರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆಯಿತು.

ಎಲ್ಲಾ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದರೆ, ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಇರುವ ಹಿನ್ನೆಲೆ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಕುಳ್ಳಿರಿಸಲಾಗಿತ್ತು.

ಮೆರವಣಿಗೆಯಲ್ಲಿ ಗಡಿಯಾರ ಕಂಬದ ಶ್ರೀ ಮಹಾಗಣಪತಿ ದೇವಾಲಯ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಪುರಸಭೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಗಣಪತಿ ಬೀದಿಯ (ಪಂಜರಪೇಟೆ) ಶ್ರೀ ಮಹಾಗಣಪತಿ ಸೇವಾ ಸಂಘ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಚಿಕ್ಕಪೇಟೆ (ಛತ್ರಕೆರೆ) ಅಂಜನೇಯ ದೇವಾಲಯದ ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಸುಂಕದ ಕಟ್ಟೆಯ ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಸೇವಾ ಸಮಿತಿ, ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ, ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಗಾಂಧಿ ನಗರ ಗಣಪತಿ ಸೇವಾ ಸಮಿತಿಯ ಮಂಟಪಗಳು ಸಾಗಿದವು.

ವೀರಾಜಪೇಟೆಯ ಆದಿಪೂಜಿತ ಗಣಪತಿ ದೇವಾಲಯ ಸಮಿತಿಯ ಮಂಟಪದ ಹಿಂದೆ ಒಂದೊAದೆ ಮಂಟಪಗಳು (ಮೊದಲ ಪುಟದಿಂದ) ಸಾಗುವಂತೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿತ್ತು. ಪ್ರತಿ ಸಮಿತಿಗೂ ಕ್ರಮ ಸಂಖ್ಯೆ ನೀಡಲಾಗಿತ್ತು. ಅದರ ಆಧಾರದಲ್ಲಿ ಆಯಾ ಪ್ರದೇಶದಿಂದ ಹೊರಟ ಮಂಟಪಗಳು ಸರತಿ ಸಾಲಿನಲ್ಲಿ ಪಟ್ಟಣದ ರಾಜ ಬೀದಿಯಲ್ಲಿ ಸಾಗಿದವು.

ಪುನೀತರಾದ ಭಕ್ತರು

ಗಣೇಶ ಮೂರ್ತಿಗಳ ವಿಸರ್ಜನೆಗೆ ಮೊದಲು ನಗರದ ರಾಜಬೀದಿಯಲ್ಲಿ ಸಾಗುವ ಪ್ರತಿ ಸಮಿತಿಗಳ ಮಂಟಪದ ಶೋಭಾಯಾತ್ರೆ ಕಂಡು ಜನ ರೋಮಾಂಚನಗೊAಡರು. ಮಂಟಪಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ವಿವಿಧ ಭಂಗಿಯ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿ, ನಮಿಸಿ ಪುನೀತರಾದರು. ಮಿನಿ ದಸರಾವೆಂದೆ ಕರೆಸಿಕೊಳ್ಳುವ ವಿಸರ್ಜನೋತ್ಸವದಲ್ಲಿ ಬಾನೆತ್ತರಕ್ಕೆ ಹೊರಹೊಮ್ಮುವ ಬೆಳಕಿನ ಚಿತ್ತಾರ ಎಲ್ಲರನ್ನು ಆಕರ್ಷಿಸಿತು. ಪಟ್ಟಣ ನವವಧುವಿನಂತೆ ಶೃಂಗಾರಗೊAಡು ಕಂಗೊಳಿಸುತಿತ್ತು.

ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಎಲ್ಲಾ ವಯೋಮಾನದ ಜನ ಸಂಭ್ರಮವನ್ನು ಸಾಕ್ಷೀಕರಿಸಿದರು. ಮೂರ್ತಿಗಳನ್ನು ವಿಸರ್ಜನೆ ಮಾಡುವ ಗೌರಿಕೆರೆಯಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕೆರೆಯ ಸುತ್ತ ಬ್ಯಾರಿಕೇಡ್ ಅಳವಡಿಸಿ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೆರವಣಿಗೆ ನಂತರ ಮಂಟಪಗಳಲ್ಲಿ ಪ್ರತಿಷ್ಠಾಪಿಸ ಲಾಗಿದ್ದ ಮೂರ್ತಿಯನ್ನು ಒಂದೊAದಾಗಿ ತೆಪ್ಪದಲ್ಲಿಟ್ಟು ನಂತರ ನುರಿತರು ಕೆರೆಯ ಮಧ್ಯೆ ತೆರಳಿ ವಿಸರ್ಜಿಸಿದರು.

ಖಾಕಿ ಕಣ್ಗಾವಲು - ಐಜಿಪಿ ಭೇಟಿ

ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಹಿನ್ನೆಲೆ ಪಟ್ಟಣ ಪೂರ್ತಿ ಖಾಕಿ ಕಣ್ಗಾವಲಿಡಲಾಗಿತ್ತು. ನಾಗಮಂಗಲದಲ್ಲಿ ನಡೆದ ಪ್ರಕರಣದಿಂದ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪೊಲೀಸರ ಭದ್ರತೆ ಕಂಡುಬAತು. ಜನದಟ್ಟಣೆ ಹಿನ್ನೆಲೆ ಸಂಜೆ ವೇಳೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸ ಲಾಗಿತ್ತು. ಐಜಿಪಿ ಬೋರಲಿಂಗಯ್ಯ ವೀರಾಜಪೇಟೆಗೆ ಆಗಮಿಸಿ ಭದ್ರತೆ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ೩ ಉಪಾಧೀಕ್ಷಕರು, ೭ ವೃತ್ತ ನಿರೀಕ್ಷಕರು, ೧೦ ಉಪನಿರೀಕ್ಷಕರು, ೮ ಸಹಾಯಕ ಉಪನಿರೀಕ್ಷಕರು, ೮೦೦ ಪೊಲೀಸ್ ಸಿಬ್ಬಂದಿಗಳು, ೧೦೦ ಹೋಂ ಗಾರ್ಡ್ಸ್ ಒಳಗೊಂಡAತೆ ೩ ಕೆ.ಎಸ್.ಆರ್.ಪಿ., ೪ ಡಿ.ಎ.ಆರ್. ತುಕಡಿಗಳನ್ನು ಭದ್ರತೆಗೆ ನಿಯೋಜಿಸ ಲಾಗಿತ್ತು. ಕೊಡಗು ಸೇರಿದಂತೆ , ಮೈಸೂರು, ಹಾಸನ ಜಿಲ್ಲೆಯಿಂದಲೂ ಪೊಲೀಸರು ಭದ್ರತೆಗಾಗಿ ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳ ಸಿಬ್ಬಂದಿಯೂ ಕಾರ್ಯನಿರ್ವ ಹಿಸಿದರು.

ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದAತೆ ಎಚ್ಚರವ ಹಿಸುವ ಸಲುವಾಗಿ ಆಯಕಟ್ಟು ಪ್ರದೇಶದಲ್ಲಿ ಪೊಲೀಸರು ಕಣ್ಗಾವಲ್ಲಿರಿಸಿದ್ದರು. ಮಂಟಪಗಳು ತೆರಳುವ ಸ್ಥಳದಿಂದ ಸಾಗುವ ಮಾರ್ಗದಲ್ಲೂ ನಿಗದಿತ ಪೊಲೀಸರನ್ನು ನೇಮಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಣಿದು ಕುಪ್ಪಳಿಸಿ ಸಂಭ್ರಮ

ಪ್ರತಿ ಮಂಟಪಗಳು ವಿಶೇಷ ಅಲಂಕಾರದ ಜೊತೆಗೆ ಚಿತ್ತಾಕರ್ಷಕ ಪ್ರಭಾವಳಿಯಿಂದ ಜನರನ್ನು ತನ್ನತ್ತ ಸೆಳೆಯುತಿದ್ದವು. ಬೆಳಕು ಮರೆಯಾಗಿ ಕತ್ತಲು ಆವರಿಸುತ್ತಿದ್ದಂತೆ ಪಟ್ಟಣ ದೀಪಗಳಿಂದ ಮಿಂಚುತಿತ್ತು. ಸಮಯ ಕಳೆಯುತ್ತಿದ್ದಂತೆ ವೀರಾಜಪೇಟೆ ಸುತ್ತಮುತ್ತಲು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಗಣ ವಿಸರ್ಜನೋತ್ಸ ವಕ್ಕೆ ಸಾಕ್ಷಿಯಾದರು. ಒಂದೊAದೆ ಮಂಟಪ ನೋಡುತ್ತ ಜನತೆ ಪಟ್ಟಣ ಪ್ರದಕ್ಷಿಣೆ ಹಾಕಿದರು.

ಯುವಕರಂತೂ ಡಿಜೆ, ವಾಲಗ, ತಮಟೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಶೋಭಾಯಾತ್ರೆಯಲ್ಲಿ ಕೀಲು ಕುದುರೆ ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ದೇಸಿ ಕಲಾಪ್ರ‍್ರಾಕಾರಗಳು ಮೇಳೈಸಿದವು. ವಿಸರ್ಜನೋತ್ಸವ ಹಿನ್ನೆಲೆ ನಗರದಲ್ಲಿ ಆಟಿಕೆ, ಗೃಹೋಪಯೋಗಿ ವಸ್ತು, ತಿಂಡಿ ತಿನಿಸುಗಳ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

ಅನ್ನದಾನ - ಸಾಂಸ್ಕೃತಿಕ ಕಾರ್ಯಕ್ರಮ

ಉತ್ಸವದ ಅಂಗವಾಗಿ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ದೇವಾಲಯದ ಶ್ರೀ ವಿನಾಯಕ ಯುವಕ ಭಕ್ತಮಂಡಳಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ದೇವಾಲಯ ಮಹಾಗಣಪತಿ ಸೇವಾ ಸಮಿತಿ, ಶಿವಕೇರಿ ವಿನಾಯಕ ಯುವ ಸಮಿತಿ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿಯಿಂದ ಜನರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಗಡಿಯಾರ ಕಂಬದ ಬಳಿ ಜೈ ಭಾರತ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

ಶಾಸಕ ಪೊನ್ನಣ್ಣ ಭಾಗಿ

ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಗೊಂಡ ಮೂರ್ತಿಗಳ ಮಂಟಪ ವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವೀಕ್ಷಿಸಿದರು. ಪಟ್ಟಣದಲ್ಲಿ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪ್ರಮುಖರೊಂದಿಗೆ ತೆರಳಿ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.

ವಿಶೇಷ ಅಲಂಕಾರ

ಗಣೇಶ ಹಾಗೂ ಗೌರಿಗೆ ಉತ್ಸವ ಸಮಿತಿಗಳಿಂದ ಮಾಡಿದ್ದ ವಿಶೇಷ ಅಲಂಕಾರಗಳು ಆಕರ್ಷಕವಾಗಿದ್ದವು. ವೈವಿಧ್ಯಮಯ ಹೂ, ವಿವಿಧ ತಿನಿಸಿನ ಹಾರಗಳು ಗಜಾನನನ ಕೊರಳಲ್ಲಿ ರಾರಾಜಿ ಸುತ್ತಿದ್ದವು. ಗೌರಿಗೆ ಸುಂದರ ಸೀರೆ ತೊಡಿಸಿ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಮಾರ್ಗಮಧ್ಯೆ ಹೂ ಸಮರ್ಪಿಸಿ, ಪೂಜೆ ಮಾಡಿಸುತ್ತಿದ್ದ ದೃಶ್ಯಗಳು ಕಂಡುಬAದವು.

ಕೃಪೆ ತೋರಿದ ವರುಣ

ಪ್ರತಿ ವಿಸರ್ಜನೋತ್ಸವದಂದು ಕಾಡುತ್ತಿದ್ದ ಮಳೆಯ ಭಯ ಈ ಬಾರಿ ದೂರವಾಗಿತ್ತು. ಬೆಳಿಗ್ಗಿನಿಂದಲೇ ಹದವಾದ ವಾತಾವರಣವಿತ್ತು. ಕಾರ್ಮೋಡ ಕವಿದ ನಂತರವೂ ಮಳೆ ಬರುವ ಸೂಚನೆ ಇರಲಿಲ್ಲ. ಮಳೆ ಇಲ್ಲದೆ ಜನ ನಿರಾಳರಾಗಿ ಸಂಭ್ರಮದಿAದ ಉತ್ಸವದಲ್ಲಿ ಭಾಗಿಯಾದರು.

- ಚಿತ್ರ, ವರದಿ :

ಹೆಚ್. ಜೆ. ರಾಕೇಶ್, ಕಿಶೋರ್ ಶೆಟ್ಟಿ

ಗಮನ ಸೆಳೆದ ಥೈಯಂ

ಕೇರಳದ ಥೈಯಂ ಪ್ರಾಕಾರ ದೈವಗಳ ವೇಷಧಾರಿಗಳ ನಗರ ಪ್ರದಕ್ಷಿಣೆ ಭಕ್ತಿಭಾವ ಮೂಡಿಸಿತು. ಕಾಳಿ, ಅರ್ಧನಾರೇಶ್ವರ, ಕೃಷ್ಣ, ಸರಸ್ವತಿ, ಲೀಲಾಕಾಳೆ ದೇವರ ವೇಷ ತೊಟ್ಟವರು ಕುಣಿಯುತ್ತ ನೀಡಿದ ಪ್ರದರ್ಶನ ಹೊಸದಾಗಿತ್ತು. ಇದರೊಂದಿಗೆ ಕೋಳಿ, ಮೀನು ವೇಷಧಾರಿಗಳು ಗಮನ ಸೆಳೆದರು. ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಂಜನೇಯ ಉತ್ಸವ ಸಮಿತಿಯಿಂದ ಥೈಯಂ ಆಯೋಜಿಸಲಾಗಿತ್ತು.