ಟ್ರಂಪ್ ದಾಳಿಗೆ ಮತ್ತೆ ಯತ್ನ-ಆರೋಪಿ ಬಂಧನ

ವಾಷಿAಗ್ಟನ್, ಸೆ. ೧೬: ಅಮೇರಿಕಾದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಆರೋಪದಡಿ ಶಸ್ತçಸಜ್ಜಿತ ಆರೋಪಿ ಓರ್ವನನ್ನು ಬಂಧಿಸಲಾಗಿದೆ. ಭಾನುವಾರ ಅಮೇರಿಕಾದ ಫ್ಲೋರಿಡಾ ರಾಜ್ಯದ ಗಾಲ್ಫ್ ಕೋರ್ಸ್ವೊಂದರಲ್ಲಿ ಟ್ರಂಪ್ ಆಟವಾಡುತ್ತಿದ್ದ ಸಂದರ್ಭ ಸಮೀಪದಲ್ಲೇ ಓರ್ವ ಎ.ಕೆ-೪೭ ಗನ್ ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ಟ್ರಂಪ್‌ಗೆ ತಗುಲದಿದ್ದರೂ, ಟ್ರಂಪ್ ಹತ್ಯೆಗಾಗಿಯೇ ಗುಂಡಿನ ದಾಳಿ ನಡೆಸಿದ್ದಾನೆಂಬ ಆರೋಪದಡಿ ಶಸ್ತçಸಜ್ಜಿತ ರಾಯನ್ ವೆಸ್ಲಿ ಎಂಬಾತನನ್ನು ಬಂಧಿಸಲಾಗಿದೆ. ಜುಲೈ ೧೩ ರಂದು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರ ಜಾಥಾ ಒಂದರಲ್ಲಿ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದು ಬಲ ಕಿವಿಗೆ ಪೆಟ್ಟಾಗಿತ್ತು. ಈ ಸಂದರ್ಭ ಜಾಥಾದಲ್ಲಿ ಪಾಲ್ಗೊಂಡಿದ್ದ ಓರ್ವರಿಗೆ ಗುಂಡು ತಗಲಿ ಮೃತಪಟ್ಟಿದ್ದರು. ದಾಳಿಕೋರರನ್ನು ಕ್ಷಣಾರ್ಧದಲ್ಲಿ ಭದ್ರತಾ ಪಡೆ ಪತ್ತೆ ಹಚ್ಚಿ ಹತ್ಯೆ ಮಾಡಿತ್ತು. ಈ ಘಟನೆಯು ಮಾಸುವ ಮುನ್ನವೇ ಮತ್ತೇ ದಾಳಿ ಯತ್ನ ನಡೆದಿರುವುದು ಆತಂಕ ಸೃಷ್ಟಿಸಿದೆ.

ಮಮತಾ ಬ್ಯಾನರ್ಜಿ ಅಂತಿಮ ಆಹ್ವಾನ ಒಪ್ಪಿದ ವೈದ್ಯರು

ಕೋಲ್ಕತ್ತಾ, ಸೆ. ೧೬: ಆರ್.ಜಿ. ಕರ್ ಆಸ್ಪತ್ರೆ ಬಿಕ್ಕಟ್ಟನ್ನು ಪರಿಹರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದೇವೆ ಎಂದು ಧರಣಿ ನಿರತ ವೈದ್ಯರು ಸೋಮವಾರ ಸಂಜೆ ಖಚಿತಪಡಿಸಿದ್ದಾರೆ. ಆದರೆ ಮಾತುಕತೆಯ ವಿವರಗಳನ್ನು ದಾಖಲಿಸಲು ಮತ್ತು ಸಹಿ ಹಾಕಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಸಭೆಯ ವಿವರ ದಾಖಲಿಸಬೇಕು ಎಂಬ ಷರತ್ತನ್ನು ಸುಲಭವಾಗಿ ಒಪ್ಪಿಕೊಂಡಿದ್ದು, ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಸಭೆಯ ವಿವರಗಳ ಪ್ರತಿಗೆ ಎರಡೂ ಕಡೆಯವರು ಸಹಿ ಹಾಕುತ್ತಾರೆ ಮತ್ತು ಸ್ಪಷ್ಟತೆಗಾಗಿ ಪ್ರತಿಗಳನ್ನು ಪ್ರತಿಯೊಬ್ಬರಿಗೂ ಹಂಚಲಾಗುವುದು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಪಂತ್ ಅವರು ಮಾತುಕತೆಗೆ ಆಹ್ವಾನಿಸುವ ಮೇಲ್‌ಗೆ ಪ್ರತಿಕ್ರಿಯಿಸಿದ ಧರಣಿ ನಿರತ ವೈದ್ಯರು, ಸಭೆಯಲ್ಲಿ ಭಾಗವಹಿಸಲು ಮತ್ತು ಮುಖ್ಯಮಂತ್ರಿಗಳ ಮುಂದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದರು.

ಈದ್ ಆಚರಣೆ ವೇಳೆ ವಿಹೆಚ್‌ಪಿ ರ‍್ಯಾಲಿ - ಉದ್ವಿಗ್ನ ಪರಿಸ್ಥಿತಿ

ಮಂಗಳೂರು, ಸೆ. ೧೬: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಬಂಟ್ವಾಳ ಟಿಎಂಸಿ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಅವರ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಬಿ.ಸಿ. ರೋಡ್‌ನಲ್ಲಿ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಚತುರ್ಥಿ ಮೆರವಣಿಗೆಯ ದಿನದಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೋಮು ಘರ್ಷಣೆಯನ್ನು ಖಂಡಿಸಿ ತಾವು ಪ್ರತಿಭಟನೆ ನಡೆಸುತ್ತಿದ್ದು, ಈದ್ ಮಿಲಾದ್ ರ‍್ಯಾಲಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದ ಶರಣ್ ಪಂಪ್‌ವೆಲ್, ಈದ್ ಮೆರವಣಿಗೆಯನ್ನು ಬೇಕಾದರೆ ನಿಲ್ಲಿಸಬಹುದು ಎಂದು ಹೇಳಿದ್ದರು. ಶರಣ್ ಪಂಪ್‌ವೆಲ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ವೈರಲ್ ಆದ ಆಡಿಯೋ ಸಂದೇಶದಲ್ಲಿ, ಶರಣ್ ಪಂಪ್‌ವೆಲ್ ಬಿ.ಸಿ. ರೋಡ್‌ಗೆ ಬಂದು ಈದ್ ರ‍್ಯಾಲಿಯನ್ನು ತಡೆಯಲಿ ಎಂದು ಶರೀಫ್ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ್ ಸೇರಿದಂತೆ ಹಲವು ಹಿಂದುತ್ವ ಕಾರ್ಯಕರ್ತರು ಬಿಸಿ ರೋಡ್ ಚಲೋ ನಡೆಸಿದರು. ಇಂದು ಬೆಳಿಗ್ಗೆ ಬಿ.ಸಿ. ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾಯಿಸಿದ ಹಿಂದೂ ಕಾರ್ಯಕರ್ತರು, ಷರೀಫ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಬಳಸಿ ಅವರನ್ನು ಮುಂದೆ ಸಾಗದಂತೆ ತಡೆದರು.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕಡಿವಾಣ-ಅಮಿತ್ ಶಾ

ಗುಲಾಬ್‌ಗರ್, ಸೆ. ೧೬: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮತ್ತೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತೆ ಮೇಲೇಳದಂತೆ ಮಟ್ಟ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಿಶ್ತ್ವಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದರು. ಮತ್ತೆ ಮೇಲೇಳದ ಹಂತಕ್ಕೆ ಭಯೋತ್ಪಾದನೆಯನ್ನು ನಾವು ಮಟ್ಟ ಹಾಕುತ್ತೇವೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಪ್ರಸ್ತಾಪದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಭಯೋತ್ಪಾದನೆಯನ್ನು ಮತ್ತೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ಇರುವುದು ಮೋದಿ ಸರ್ಕಾರ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನ: ಆರಂಭಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಬಿಜೆಪಿಯ ಅಭ್ಯರ್ಥಿ ಮತ್ತು ಮಾಜಿ ಸಚಿವ ಸುನಿಲ್ ಶರ್ಮಾ ಪರ ಪ್ರಚಾರದಲ್ಲಿ ಅಮಿತ್ ಶಾ ಹೇಳಿದರು.

ಇಂದು ಕೇಜ್ರಿವಾಲ್ ರಾಜೀನಾಮೆ ಸಾಧ್ಯತೆ

ನವದೆಹಲಿ, ಸೆ. ೧೬: ಅಬಕಾರಿ ನೀತಿ ಹಗರಣದಲ್ಲಿ ಆರು ತಿಂಗಳು ಜೈಲುವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಾ. ೧೭ ರ (ಇಂದು) ಸಂಜೆ ೪.೩೦ಕ್ಕೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿ ಮಾಡಲಿದ್ದು, ಈ ವೇಳೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಸಂಜೆ ೪:೩೦ಕ್ಕೆ ತಮ್ಮನ್ನು ಭೇಟಿ ಮಾಡಲು ವಿಕೆ ಸಕ್ಸೇನಾ ಅವರು ಕೇಜ್ರಿವಾಲ್ ಅವರಿಗೆ ಅಪಾಯಿಂಟ್ ಮೆಂಟ್ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಲು ಕೇಜ್ರಿವಾಲ್ ಸಮಯ ಕೋರಿದ್ದಾರೆ ಮತ್ತು ಅವರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಎಎಪಿ ಈ ಹಿಂದೆ ಹೇಳಿತ್ತು.

ಮಸೀದಿಗೆ ಕಲ್ಲು ತೂರಾಟ-ಆರು ಮಂದಿ ಬಂಧನ

ಮAಗಳೂರು, ಸೆ. ೧೬: ನಗರದ ಹೊರವಲಯದ ಸುರತ್ಕಲ್‌ನಲ್ಲಿರುವ ಮಸೀದಿಯೊಂದಕ್ಕೆ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ಮಂಗಳೂರು ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸುರತ್ಕಲ್‌ನ ಕಾನಕಟ್ಲ ನಿವಾಸಿ ಭರತ್ ಶೆಟ್ಟಿ (೨೬), ಸುರತ್ಕಲ್‌ನ ಕಾನಕಟ್ಲ ನಿವಾಸಿ ಚೆನ್ನಪ್ಪ ಶಿವಾನಂದ ಚಲವಾದಿ (೧೯), ನಿತಿನ್ ಹಡಪದ (೨೨), ಸುರತ್ಕಲ್‌ನ ಚೇಳಾರು ನಿವಾಸಿ ಸುಜಿತ್ ಶೆಟ್ಟಿ (೨೩) ವರ್ಷ, ಹೊಸಬೆಟ್ಟು ಗ್ರಾಮದ ಅಣ್ಣಪ್ಪ (೨೪) ಮತ್ತು ಕಾಟಿಪಳ್ಳದ ಪ್ರೀತಂ ಶೆಟ್ಟಿ (೩೪) ಬಂಧಿತ ಆರೋಪಿಗಳು. ಕಾಟಿಪಳ್ಳದ ೩ನೇ ಬ್ಲಾಕ್‌ನಲ್ಲಿರುವ ಮಜಿದುಲ್ಲಾ ಹುದಾಜುಮ್ಮ ಮಸೀದಿಯ ಅಧ್ಯಕ್ಷ ಕೆ.ಹೆಚ್. ಅಬ್ದುಲ್ ರಹಿಮಾನ್ ನೀಡಿದ ದೂರಿನ ಪ್ರಕಾರ, ನಿನ್ನೆ ರಾತ್ರಿ ೯.೫೦ರ ಸುಮಾರಿಗೆ ಮಸೀದಿಯ ಹಿಂಬದಿಯ ಜನತಾ ಕಾಲೋನಿಯ ಸಮಾಧಿ ಕಡೆಯಿಂದ ಎರಡು ಬೈಕ್‌ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿದ್ದರು.

ಪ್ಯಾಲೆಸ್ಟೆöÊನ್ ಬಾವುಟ ಹಿಡಿದು ಓಡಾಟ-ಅಪ್ರಾಪ್ತರ ಬಂಧನ

ಚಿಕ್ಕಮಗಳೂರು, ಸೆ. ೧೬: ಪ್ಯಾಲೆಸ್ಟೆöÊನ್ ಬಾವುಟ ಹಿಡಿದು ಬೈಕ್‌ನಲ್ಲಿ ನಗರದಲ್ಲಿ ಓಡಾಡಿರುವ ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದಿರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಬಂಧಿತ ಅಪ್ರಾಪ್ತರನ್ನು ಘಟನೆ ಸಂಬAಧ ವಿಚಾರಣೆ ನಡೆಸಲಾಗುತ್ತಿದೆ. ಬಾಲಕರಿಗೆ ಧ್ವಜ ಸಿಕ್ಕಿದ್ದು ಹೇಗೆ? ಧ್ವಜ ನೀಡಿ ನಗರದಾದ್ಯಂತ ಓಡಾಟ ನಡೆಸಲು ಸೂಚನೆ ನೀಡಲಾಗಿತ್ತಾ? ಇಲ್ಲವೇ ತಾವೇ ಸ್ವತ: ಹೀಗೆ ಮಾಡಿದ್ರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ವಿಚಾರಣೆ ನಡೆಸಲು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ಯಾಲೆಸ್ಟೆöÊನ್ ಧ್ವಜ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.