ಕಡಂಗ, ಸೆ. ೧೪: ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೩೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎ.ಟಿ. ಬಾಲಕೃಷ್ಣರವರು ವಿದ್ಯಾಸಂಸ್ಥೆಗೆ ರೂ. ೫೦ ಸಾವಿರವನ್ನು ಅಭಿವೃದ್ಧಿ ನಿಧಿಗಾಗಿ ಹಾಗೂ ೧೫ ಸಾವಿರ ರೂಪಾಯಿಯನ್ನು ದತ್ತಿನಿಧಿಗಾಗಿ ನೀಡಿದರು.
ಈ ಸಂದರ್ಭ ಶಾಲಾ ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.