ಶನಿವಾರಸಂತೆ, ಸೆ. ೧೪: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್ನಲ್ಲಿರುವ ಮಸ್ಜಿದುನ್ನೂರು (ಸುನ್ನಿ ಜುಮ್ಮಾ ಮಸ್ಜಿದ್)ನಲ್ಲಿ ತಾ. ೧೫, ೧೬, ೧೭, ೧೮ ರಂದು ೪ ದಿನಗಳ ಕಾಲ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಆಯೋಜಿಸಲಾಗಿದೆ.

ತಾ. ೧೫ ರಂದು ಬೆಳಿಗ್ಗೆ ೮.೩೦ಕ್ಕೆ ಮದ್ರಸ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ನೊಂದಿಗೆ ಈದ್ ಮಿಲಾದ್ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ ನೂರ್ ಯೂತ್ ಸಮಿತಿ ಸದಸ್ಯರುಗಳಿಗೆ ಯೂತ್ ಮಿಲಾದ್ ಜಲ್ಲಾ ಏರ್ಪಡಿಸಲಾಗಿದೆ.

ತಾ. ೧೬ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಿಲಾದ್ ಸಂದೇಶ ಜಾಥಾ ಮತ್ತು ಅದೇ ದಿನ ಸಂಜೆ ಹಾಗೂ ತಾ. ೧೭ ರಂದು ಸಂಜೆ ಕ್ರಮವಾಗಿ ಉಸ್ತಾದ್ ಅಸ್ಲಂ ಅಝ್ಹರಿ ಹಾಗೂ ಉಸ್ತಾದ್ ಮೂಸ ಮುಸ್ಲಿಯಾರ್ ಅವರಿಂದ ಕುಟುಂಬ ಜೀವನ ಹಾಗೂ ಯುವತ್ವ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನಡೆಯಲಿದೆ. ಮಸ್ಜಿದುನ್ನೂರ್ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ಜಿ.ಎಂ. ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಾ. ೧೮ ರಂದು ಸ್ವಲಾತ್ ಮತ್ತು ಪ್ರಾರ್ಥನಾ ವೇದಿಕೆಯಲ್ಲಿ ಸಯ್ಯದ್ ಝೈನುಲ್ ಅಭಿದೀನ್ ಅಲ್ ಬುಖಾರಿ ತಂಙಳ್ ಎಣ್ಮೂರು ಪಾಲ್ಗೊಂಡು ನೇತೃತ್ವ ವಹಿಸಲಿದ್ದಾರೆ. ವಿವಿಧ ಮೊಹಲ್ಲಾಗಳ ಧರ್ಮಗುರುಗಳು, ನೇತಾರರು ಉಪಸ್ಥಿತರಿರುವರು ಎಂದು ಮಸ್ಜಿದುನ್ನೂರ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಎA. ಮಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.