ಮಡಿಕೇರಿ, ಸೆ. ೧೪: ಕರ್ನಾಟಕ ಕಾಫಿ ರೈತರ ಸಂಘ (ಸಿಐಎಫ್‌ಐ) ಕೊಡಗು ಘಟಕದ ವತಿಯಿಂದ ಕೊಡಗಿನ ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖರಾದ ಈ.ರ.ದುರ್ಗಾಪ್ರಸಾದ್; ಸರಕಾರದ ಅವೈಜ್ಞಾನಿಕ ನೀತಿಯಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದು, ರೈತರ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಕರ್ನಾಟಕ ಕಾಫಿ ರೈತ ಸಂಘ ಮಾಡುತ್ತಿದೆ, ರೈತರುÀ ಬೆಳೆ ನಷ್ಟ, ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಸರಕಾರ ಸೂಕ್ತ ರೀತಿಯ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಂಘದ ಸಂಚಾಲಕ ಕೆ.ಹೆಚ್. ಹನೀಫ, ಹೊಸಮನೆ ವಸಂತ್‌ಕುಮಾರ್, ಉದಯಕುಮಾರ್, ಚಿಟ್ಟಡೆ ಹಮೀದ್, ಇತರರು ಇದ್ದರು.