ಮಡಿಕೇರಿ, ಸೆ. ೧೪: ಬೇಂಗ್‌ನಾಡ್ ಭಾಗದ ಜನರಲ್ಲಿ ಹಬ್ಬದ ಸಡಗರ ಮನೆಮಾಡಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೇಂಗ್‌ನಾಡ್ ಕೊಡವ ಸಮಾಜದ ಸಹಯೋಗದಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ೧೫೭ನೇ ಜನ್ಮ ದಿನವನ್ನು “ಕೊಡವ ಸಾಹಿತ್ಯ ನಾಳ್” ಹೆಸರಿನಲ್ಲಿ ಚೇರಂಬಾಣೆಯಲ್ಲಿರುವ ಕೊಡವ ಸಮಾಜದಲ್ಲಿ ಆಯೋಜಿಸಲು ಸಕಲ ಸಿದ್ದತೆಗಳು ನಡೆಯುತ್ತಿದೆ.

ಸೆಪ್ಟೆಂಬರ್ ೨೮ ರಂದು ನಡೆಯಲಿರುವ “ಕೊಡವ ಸಾಹಿತ್ಯ ನಾಳ್’ಗೆ ಬೇಂಗ್‌ನಾಡ್ ಭಾಗದ ಕಾರುಗುಂದ, ಐವತ್ತೋಕ್ಲು, ಕಡಿಯತ್ತೂರು, ಬೇಂಗೂರು, ಬಾಡಗ, ಕೊಳಗದಾಳು, ಕೋಪಟ್ಟಿ, ಚೆಟ್ಟಿಮಾನಿ ಹಾಗೂ ಬೆಟ್ಟತ್ತೂರು ಗ್ರಾಮಸ್ಥರೆಲ್ಲರೂ ಮನೆ ಮನೆಯಿಂದ ಬಂದು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಶಾಸಕರುಗಳಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ವಿಧಾನ್ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭಾಗವಹಿಸಲಿರುವ ಸಾಹಿತ್ಯ ನಾಳ್, ಕೊಡವ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ಬೇಂಗ್‌ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಬಾಚರಣಿಯಂಡ ದಿನೇಶ್ ಗಣಪತಿ ಉಸ್ತುವಾರಿಯಲ್ಲಿ ನಡೆಯಲಿದೆ.

‘ಕೊಡವ ಸಾಹಿತ್ಯ ನಾಳ್’ ಬೆಳಗ್ಗೆ ೯ ಗಂಟೆಗೆ ಚೇರಂಬಾಣೆ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಶುಭಾರಂಭಗೊಳ್ಳಲಿದ್ದು ಕೊಂಬ್-ಕೊಟ್ಟ್, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್‌ಚ, ವೀರ ಕೊಡವರ ಸಾಂಪ್ರದಾಯಿಕ ಉಡುಗೆಯೊಂದಿಗೆ ಬೀಕಚಂಡ ಪುಟ್ಟ ಬೆಳ್ಯಪ್ಪ ತಂಡದವರಿAದ ಅಜ್ಜಪ್ಪ-ತಾಯವ್ವ ತೆರೆ ಮೇಳೈಸಲಿದೆ.

ತದನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೇಂಗ್‌ನಾಡ್ ಭಾಗದ ಹಿರಿಯ ಸಾಹಿತಿಗಳಾದ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ. ಅಪ್ಪಣ್ಣ, ಕೊಡವ ಅಕಾಡೆಮಿಯ ಮಾಜಿ ಸದಸ್ಯರಾದ ಚೀರಮ್ಮನ ವಾಣಿ ಚಂಗುಮ್ಮಯ್ಯ ಇವರುಗಳನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಗುವುದು.

ಸಾಹಿತ್ಯ ನಾಳ್‌ಗೆ ಅತಿಥಿಗಳಾಗಿ ಆಗಮಿಸಲಿರುವ ಡಾ. ಕಾಳಿಮಾಡ ಕೆ. ಶಿವಪ್ಪ ಅವರು ಅಪ್ಪಚ್ಚಕವಿಗಳ ನಾಲ್ ನಾಟಕದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಜಾನಪದ ಕಲಾವಿದ ಡಾ. ಚೇನಂಡ ರಘು ಉತ್ತಪ್ಪನವರು ಸಾವಿತ್ರಿ ನಾಟಕದ ಬಗ್ಗೆ ಸಂಕ್ಷಿಪ್ತವಾದ ಹಾಡು-ವಿವರಣೆ ನೀಡಲಿದ್ದಾರೆ.

ದಿನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಸಾರ್ವಜನಿಕರಿಗೆ ಚೋದ್ಯ-ಚೋದ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರುಗುಂದ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇನ್ನುಳಿದಂತೆ, ಕೈಕೇರಿ ಸವಿತ ಸಮಾಜದ ಸ್ತಿçÃಯರಿಂದ ಉಮ್ಮತ್ತಾಟ್, ಚೇರಂಬಾಣೆ ವಿಭಾಗದ ಪುರುಷರಿಂದ ಬೊಳಕಾಟ್ ಸೇರಿದಂತೆ ಹತ್ತು ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕೊಡವ ಸಾಹಿತ್ಯ ನಾಳ್ ಹಾಗೂ ಅಪ್ಪಚ್ಚಕವಿಯ ೧೫೭ನೇ ಜನ್ಮ ದಿನೋತ್ಸವದ ನನಪಿಗೆ ೧೫೭ ಕವಿಗಳ ಕವನಗಳಿರುವ ‘ಕೊಡವ ಕವನ ಮೊತ್ತೆ’ಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.